*ಗೋಣಿಕೊಪ್ಪಲು, ಡಿ. 11 : ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆಯನ್ನು ತೋರುತ್ತಿದೆ. ತಮ್ಮ ಆಚಾರ-ವಿಚಾರ, ಸಂಸ್ಕøತಿಯನ್ನು ಆಚರಿಸಿದರೆ ಅಪರಾಧಿಗಳಂತೆ ತÀಮ್ಮನ್ನು ಬಿಂಬಿಸಲಾಗುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.ತಿತಿಮತಿ, ದೇವರಪುರ ಗ್ರಾಮದಲ್ಲಿ ಭಗವ ಧ್ವಜ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಯಾವದೇ ಭಾಗಗಳಲ್ಲಿ ಹಿಂದೂಗಳು ಹಬ್ಬ ಆಚರಿಸಿದರೂ ಅದಕ್ಕೆ ಕೋಮುಭಾವನೆ ಕಟ್ಟಿ ಅಪರಾಧ ಎಂದು ಬಿಂಬಿಸಲಾಗುತ್ತಿದೆ ಎಂದರು.

ಅರಣ್ಯದಂಚಿನಲ್ಲಿ ಧ್ವಜಕಂಬ ಸ್ಥಾಪಿಸಿದರೂ ಅರಣ್ಯ ಇಲಾಖೆ ತಕರಾರು ತೆಗೆಯುತ್ತಿದೆ. ಬಹುಸಂಖ್ಯಾತ ಜನಸಂಖ್ಯೆಯುಳ್ಳ ಪ್ರದೇಶದಲ್ಲಿ ಧ್ವಜ ಕಂಬ ನೆಟ್ಟು ಹಿಂದೂ ಆಚರಣೆಗೆ ಮುಂದಾಗುವದರ ಹಿಂದೆ ಯಾವದೇ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದರು.

ಜಿ.ಪಂ. ಸದಸ್ಯ ವಿಜು ಸುಬ್ರಮಣಿ, ತಾಲೂಕು ಬಿ.ಜೆ.ಪಿ. ಯುವಮೋರ್ಚ ಅಧ್ಯಕ್ಷ ಹಾಗೂ ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ದೇವರಪುರ ಗ್ರಾ.ಪಂ. ಅಧ್ಯಕ್ಷ ಚಂದ್ರು, ಹೊಸೂರು ಗ್ರಾ.ಪಂ. ಅಧ್ಯಕ್ಷ ಕೊಲ್ಲಿರ ಗೋಪಿ ಚಿಣ್ಣಪ್ಪ, ಪಾಲಿಬೆಟ್ಟ ಗ್ರಾ.ಪಂ ಅಧ್ಯಕ್ಷ ಪುಲಿಯಂಡ ಬೋಪಣ್ಣ, ತಿತಿಮತಿ ಸ್ಥಾನೀಯ ಸಮಿತಿ ಅಧ್ಯಕ್ಷ ಅನೂಪ್, ಜಿ.ಪಂ. ಮಾಜಿ ಸದಸ್ಯ ಕೊಲ್ಲಿರ ಧರ್ಮಜ, ತಾಲೂಕು ಫೆಡರೇಷನ್ ನಿರ್ದೇಶಕ ಮಧು ದೇವಯ್ಯ ಹಾಜರಿದ್ದರು.