ಭಾಗಮಂಡಲ, ಡಿ. 10: ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕ ಸಂಘದ 9ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಚೇರಂಗಾಲ ಗ್ರಾಮದ ಶ್ರೀ ಈಶ್ವರ ಭಗವತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ ಮಾಡಲಾಯಿತು.ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ದೇವಂಗೋಡಿ ಭಾಸ್ಕರ, ಕಾರ್ಯದರ್ಶಿ ಸಿರಕಜೆ ಭವನ್ ಕುಮಾರ್, ಪದಾಧಿಕಾರಿಗಳಾದ ರವೀಂದ್ರ, ಸಂತೋಷ್, ಸುದೀಪ್, ನಂದ ಕುಮಾರ ಹಾಗೂ ಊರಿನ ತಕ್ಕರಾದ ಸಿರಕಜೆ ಸುಂದರ, ಅಧ್ಯಕ್ಷ ಸತೀಶ್ ಕುಮಾರ್, ಕಾರ್ಯದರ್ಶಿ ಮತ್ತಾರಿ ರಾಜ, ಅರ್ಚಕ ರವಿಭಟ್ ಉಪಸ್ಥಿತರಿದ್ದರು.