ಮಡಿಕೇರಿ, ಡಿ. 9: ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಹಚ್ಚಿನಾಡುವುನಿಂದ ಹಟ್ಟಿಹೊಳೆ ರಸ್ತೆ ಬದಿಗಳಲ್ಲಿರುವ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ರಸ್ತೆ ಅಗಲೀಕರಣಕ್ಕೆ ರಸ್ತೆ ಬದಿಯಲ್ಲಿರುವ ಅಡಚಣೆ ಉಂಟಾಗಿರುವ 202 ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸಿಕೊಡುವಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯೋಜನಾ ವಿಭಾಗ(ಪಿ.ಎಂ.ಜಿ.ಎಸ್.ವೈ) ಕೊಡಗು ಜಿಲ್ಲೆ, ಮಡಿಕೇರಿ ಇವರು ಕೋರಿದ್ದಾರೆ. ಈ ಕೋರಿಕೆಯಂತೆ ಶನಿವಾರಸಂತೆ ಹೋಬಳಿ ದುಂಡಳ್ಳಿ ಗ್ರಾಮದ ಸರ್ವೆ ನಂ. 42/2 ರಲ್ಲಿ 145 ಅಕೇಶಿಯಾ ಮರಗಳು ಜಿಲ್ಲಾಧಿಕಾರಿ ಆದೇಶದಂತೆ ಇವರು ಶನಿವಾರಸಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶನಿವಾರಸಂತೆ ಇವರು 2 ಎಕರೆ ಜಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸುವ ಉದ್ದೇಶದಿಂದ ಹಾಗೂ ಸೋಮವಾರಪೇಟೆಯಿಂದ ಕೂಡಿಗೆಗೆ ಹಾದು ಹೋಗಿರುವ ಎರಡು ರಸ್ತೆ ಬದಿಯಲ್ಲಿ 41 ವಿವಿಧ ಜಾತಿಯ ಮರಗಳು 10 ಮೀಟರ್ ಅಗಲದಲ್ಲಿರುವ ಮರಗಳನ್ನು ಕಡಿದು ಸರ್ಕಾರಿ ನಾಟಾ ಸಂಗ್ರಹಾಲಯಕ್ಕೆ ಸಾಗಿಸಿ ತೆರವುಗೊಳಿಸುವ ಬಗ್ಗೆ ಸಾರ್ವಜನಿಕರಿಂದ ಯಾವದೇ ಆಕ್ಷೇಪಣೆ ಇದ್ದಲ್ಲಿ 15 ದಿನಗಳ ಒಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇಲ್ಲಿಗೆ ಸಲ್ಲಿಸಬೇಕಾಗಿ ತಿಳಿಸಿದೆ. ಈ ವಿಷಯದ ಬಗ್ಗೆ ತಾ. 22 ರಂದು ಮಡಿಕೇರಿಯ ವೃಕ್ಷಾಧಿಕಾರಿ, ಅರಣ್ಯ ಭವನ, 2ನೇ ಮಹಡಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಅಹವಾಲನ್ನು ನೀಡಬಹುದಾಗಿದೆ. ನಿಗದಿತ ಅವಧಿಯಲ್ಲಿ ಯಾವದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.