ಮಡಿಕೇರಿ, ಡಿ.10: ಕೊಡಗು ಜಿಲ್ಲಾ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ, ಮಡಿಕೇರಿ ತಾಲೂಕು ಜಾನಪದ ಪರಿಷತ್, ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಹಾಗೂ ಬಿಇಓ ಕಚೇರಿ ಮಡಿಕೇರಿ ಇವರ ಸಂಯುಕ್ತ್ತ ಆಶ್ರಯದಲ್ಲಿ ತಾ. 22 ರಂದು ಕಡಗದಾಳುವಿನಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ.

ಮಡಿಕೇರಿಯಿಂದ 5 ಕಿ.ಮೀ. ದೂರದಲ್ಲಿರುವ ಕಡಗದಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾ.22 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಆಯೋಜಿತ ಗ್ರಾಮೀಣ ಕ್ರೀಡಾಕೂಟದಲ್ಲಿ ಮಡಿಕೇರಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ದೆಗಳು ನಡೆಯಲಿದೆ ಎಂದು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಗೋಲಿಯಾಟ, ಗೋಣಿಚೀಲ ಕಾಲಿಗೆ ಕಟ್ಟಿ ಓಡುವ ಸ್ಪರ್ಧೆ, ಹಿಮ್ಮುಖ ಓಟ, ಬುಗುರಿ ಸ್ಪರ್ಧೆ, ವಿದ್ಯಾರ್ಥಿನಿಯರಿಗಾಗಿ ಚಮಚದಲ್ಲಿ ನಿಂಬೆ ಹಣ್ಣು ಇರಿಸಿಕೊಂಡು ಓಡುವ ಸ್ಪರ್ಧೆ, ಸಂಗೀತ ಕುರ್ಚಿ. ಚನ್ನಮಣೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ, ಪ್ರಶಂಸನಾ ಪತ್ರ ನೀಡಲಾಗುತ್ತದೆ.

ತಾ. 18 ರೊಳಗಾಗಿ ಪಾಲ್ಗೊಳ್ಳುವವರು ಹೆಸರು ನೋಂದಣಿ ಮಾಡಿಕೊಳ್ಳಬೇಕಾದ ದೂರವಾಣಿ ಸಂಖ್ಯೆ - ಶ್ರೀಮತಿ ಕೆ.ಕೆ.ಜಯಲಕ್ಷ್ಮಿ, 9663119670, ಸಂಗೀತ ಪ್ರಸನ್ನ -9591173292.