ಶ್ರೀಮಂಗಲ, ಡಿ. 9: ವಿಯೆಟ್ನಾಮ್ ಹಾಗೂ ಇತರ ದೇಶದಿಂದ ಕಳಪೆ ಕರಿಮೆಣಸು ಭಾರತಕ್ಕೆ ಆಮದಾಗುತ್ತಿರುವದರಿಂದ ದೇಶಿಯ ಉತ್ತಮ ಗುಣಮಟ್ಟದ ಕರಿಮೆಣಸು ದರ ತೀವ್ರ ಕುಸಿತವಾಗಿದ್ದು, ದಕ್ಷಿಣ ಭಾರತದ 16 ಬೆಳೆಗಾರರ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸಾಂಘೀಕವಾಗಿ ಮಾಡಿದ ಪ್ರಯತ್ನದಿಂದ ಕೇಂದ್ರ ಸರ್ಕಾರ ಆಮದು ದರವನ್ನು ಪ್ರತಿ ಕೆ.ಜಿ.ಗೆ ರೂ. 500 ನಿಗದಿಪಡಿಸಿದೆ. ಬೆಳೆಗಾರರ ಹೋರಾಟಕ್ಕೆ ದೊರೆತ ಪ್ರತಿಫಲದಿಂದ ಮುಂದಿನ ಬೆಳೆಗಾರರ ಸಮಸ್ಯೆ ನಿವಾರಣೆಗೂ ಸಹ ಸಾಂಘೀಕವಾಗಿ ಹೋರಾಟ ನಡೆಸಲು ಉತ್ತೇಜನ ಲಭಿಸಿದೆ ಎಂದು ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಣಿಕೊಪ್ಪ ಸಿಲ್ವರ್ಸ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ದ. ಭಾರತ ಬೆಳೆಗಾರರ ಸಂಘಟನೆಗಳ ಒಕ್ಕೂಟದ ಪ್ರಮುಖರನ್ನೊಳಗೊಂಡ ತುರ್ತು ಸಭೆಯಲ್ಲಿ, ಬೆಳೆಗಾರರಿಗೆ ಉಂಟಾಗಿರುವ ಅನುಕೂಲ ಹಾಗೂ ಕಾನೂನು ದುರುಪಯೋಗಪಡಿಸಿ ಕೊಂಡು ಕಳ್ಳ ಸಾಗಾಣೆ ಮೂಲಕ ಭಾರತಕ್ಕೆ ಕರಿಮೆಣಸು ಆಮದಾಗುವ ಆತಂಕವಿದೆ ಎಂದರು.

ಹಲವು ಸಮಯದಿಂದ ಭಾರತಕ್ಕೆ ಕಳಪೆ ಹಾಗೂ ಕಡಿಮೆ ದರದ ಕರಿಮೆಣಸು ಆಮದಾಗುತ್ತಿರುವದನ್ನು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಾಮ ನಿರ್ದೇಶಿತ ಸದಸ್ಯರುಗಳಾದ ಮಾಳೇಟಿರ ಬೋಪಣ್ಣ, ಕಡೇಮಾಡ ಕುಸುಮಾ ಜೋಯಪ್ಪ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಅವರು ದಾಖಲೆ ಸಹಿತ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಬಹಿರಂಗಪಡಿಸಿದರು. ಇದು ಬೆಳೆಗಾರರ ಒಕ್ಕೂಟ ಸೇರಿದಂತೆ ಇತರ ಬೆಳೆಗಾರ ಸಂಘಟನೆಗಳ ಪರ ಹೋರಾಡಲು ಸಾಕ್ಷ್ಯ ದೊರೆತಂತಾಯಿತು. ಈ ಪ್ರಕರಣವನ್ನೇ ಮುಂದಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಅವಕಾಶ ಕಲ್ಪಿಸಿತು ಎಂದರು.

ಭಾರತವು ಸುಮಾರು 3 ಲಕ್ಷ ಟನ್ ಕಾಫಿ ಉತ್ಪಾದನೆ ಮಾಡುತ್ತಿದ್ದು, ಇದರಲ್ಲಿ 2 ಲಕ್ಷ ಟನ್ ರಫ್ತು ಮಾಡುತ್ತಿದೆ. 1 ಲಕ್ಷ ಟನ್ ಮಾತ್ರ ಭಾರತದ ಆಂತರಿಕ ಬೇಡಿಕೆಯಾಗಿದೆ. ಕೆಲವು ವರ್ಷದಿಂದ ಭಾರತಕ್ಕೆ ಇನ್ಸಟೆಂಟ್ ಕಾಫಿ ಮಾಡಲು ವಿಯೆಟ್ನಾಮ್ ಸೇರಿದಂತೆ ಬೇರೆ ದೇಶಗಳಿಂದ ಕಳಪೆ ಗುಣಮಟ್ಟದ ಕಾಫಿ ಬೀಜಗಳು ರಫ್ತಾಗುತ್ತಿದ್ದು, ಇದರಿಂದ ಕಾಫಿ ಬೆಲೆ ಕುಸಿಯುವ ಆತಂಕವಿದೆ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಬೇಕಾಗಿದೆ ಎಂದು ಹೇಳಿದರು.

ತಾತ್ಕಾಲಿಕ ಪರಿಹಾರ: ದ.ಭಾರತದ ಬೆಳೆಗಾರ ಸಂಘಟನೆಗಳ ಒಕ್ಕೂಟದ ಸಮನ್ವಯ ಸಂಚಾಲಕ ಕೆ.ಕೆ. ವಿಶ್ವನಾಥ್ ಮಾತನಾಡಿ ಕರಿಮೆಣಸು ಆಮದು ಬಗ್ಗೆ ಕಾನೂನು ಲೋಪ, ಇದಕ್ಕೆ ಪರಿಹಾರೋಪಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇವೆ. ಆದ್ದರಿಂದ ಕರಿಮೆಣಸಿಗೆ ಕನಿಷ್ಟ ಆಮದು ದರ ನಿಗದಿಯಾಗಿದೆ. ಆದರೆ ಇದು, ತಾತ್ಕಾಲಿಕ ಪರಿಹಾರವಾಗಿದ್ದು, ಮುಂದೆ ಹೆಚ್ಚಿನ ಕೆಲಸ ಮಾಡಬೇಕಾ ಗಿದೆ ಎಂದರು. ಈ ಹಿಂದೆ ಆಮದು ಮಾಡಿಕೊಳ್ಳುವ ಸಂದರ್ಭ ಕಾನೂನು ದುರುಪಯೋಗಪಡಿಸಿಕೊಂಡು ವ್ಯಾಪಾರಿಗಳು ಲಾಭಗಳಿಸುತ್ತಿದ್ದರು. ಈಗಲೂ ಸಹ ಕಾನೂನು ದುರುಪಯೋಗಪಡಿಸಿಕೊಂಡು ಬೆಳೆಗಾರರಿಗೆ ನಷ್ಟ ಮಾಡುವಂತಹ ಪ್ರಕರಣ ನಡೆಯುವದರ ಬಗ್ಗೆ ಜಾಗೃತಿಯಾಗಬೇಕಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಭಾರತಕ್ಕೆ ಸಾವಿರಾರೂ ಟನ್ ಕರಿಮೆಣಸು ಆಮದಾಗಿದ್ದು, ಇದರೊಂದಿಗೆ ಉತ್ತಮ ಮಾರುಕಟ್ಟೆ ನಿರೀಕ್ಷೆಯಲ್ಲಿ ಭಾರತದ ಬೆಳೆಗಾರರು ಸಹ ಕರಿಮೆಣಸನ್ನು ದಾಸ್ತಾನಿರಿಸಿ ಕೊಂಡಿದ್ದಾರೆ. ಬೇಡಿಕೆ ಹಾಗೂ ಏರಿಕೆಯಾಗಿದ್ದರೂ ಬೆಲೆ ಕುಸಿತವನ್ನು ಕನಿಷ್ಟ ಆಮದು ದರ ನಿಗದಿಯಿಂದ ತಡೆಗಟ್ಟಲು ಸಾಧ್ಯವಿದೆ. ಭಾರತಕ್ಕೆ ಕರಿಮೆಣಸು ಆಮದಾಗುತ್ತಿರುವ ಬಗ್ಗೆ ಸೂಕ್ತ ಗುಣಮಟ್ಟದ ಪರೀಕ್ಷೆ, ಏಕ ಬಂದರುವಿನಲ್ಲಿ ಮಾತ್ರ ಆಮದಿಗೆ ಅವಕಾಶ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರಕಾರ ಪರಿಗಣಿಸಬೇಕಾಗಿದೆ. ಈ ಬಗ್ಗೆ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಹೊಟ್ಟೇಂಗಡ ರಮೇಶ್ ಹಾಜರಿದ್ದರು. ಸಭೆಯಲ್ಲಿ ಗೋಣಿಕೊಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ, ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಒಕ್ಕೂಟದ ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಜೇಮ್ಸ್, ತೀತಿರ ಊರ್ಮಿಳ ಸೋಮಯ್ಯ, ಚೇಂದಂಡ ಸುಮಿ ಸುಬ್ಬಯ್ಯ, ಮಾಚಂಗಡ ಯಮುನಾ ಚಂಗಪ್ಪ, ಬೊಳ್ಳಜ್ಜೀರ ರಾಧ ಕರುಂಬಯ್ಯ, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ, ಚೆಕ್ಕೆರ ಹರೀಶ್ ನಂಜಪ್ಪ, ಮಂಡಂಗಡ ಅಶೋಕ್, ಅಳಮೇಂಗಡ ಸುರೇಶ್, ಹೆಗ್ಗಡೆ ಸಮಾಜದ ರವಿ, ಅಳಮೇಂಗಡ ಮೋಟಯ್ಯ, ಕೈಬಿಲೀರ ಚೇತನ್ ಮತ್ತಿತರರು ಸಭೆಯಲ್ಲಿ ಮಾತನಾಡಿ ವಿಯೆಟ್ನಾಂನಿಂದ ಆಮದು ಆಗಿರುವ ಕಾಳುಮೆಣಸಿನ ಶೇಖರಣೆ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುವ ಮೂಲಕ ರೈತರ ಪರವಾಗಿ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದ್ದಾರೆ.

ವಿಯೆಟ್ನಾಂನಿಂದ ಆಮದು ಮಾಡಿಕೊಂಡಿದ್ದ ಅಪಾರ ಪ್ರಾಮಾಣದ ಕಾಳುಮೆಣಸು ವ್ಯಾಪಾರಸ್ಥರ ಗೋದಾಮುಗಳಲ್ಲಿ ಶೇಖರಣೆಯಾಗಿರುವದು ಮಾರುಕಟ್ಟೆ ದರದಲ್ಲಿ ಏರುಪೇರಿಗೆ ಕಾರಣವಾಗಿದೆ. ಅನಧಿಕೃತ ಶೇಖರಣೆಯಿಂದ ಬೆಳೆಗಾರನಿಗೆ ಮೋಸವಾಗುತ್ತಿದೆ. ಸರ್ಕಾರ ಅನಧಿಕೃತ ದಾಸ್ತಾನುಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರೈತ ಸಂಘದ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ರೈತ ಸಂಘ ಭತ್ತ ಹಾಗೂ ಅಡಿಕೆ ಬೆಳೆಗಾರರ ರಕ್ಷಣೆಯ ಕಡೆ ಗಮನ ಹರಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ರೈತರಿಗೆ ಸಿಗುತ್ತಿರುವ ಬೆಲೆ ಕೊಡಗಿನ ರೈತರಿಗೆ ಸಿಗುತ್ತಿಲ್ಲ. ವ್ಯಾಪಾರಸ್ಥರ ಮುಷ್ಟಿಯಲ್ಲಿ ರೈತಾಪಿ ವರ್ಗ ಶೋಷಣೆ ಅನುಭವಿಸುತ್ತಿದೆ ಎಂದರು.

ಪುಚ್ಚಿಮಾಡ ಲಾಲಾ ಅಯ್ಯಣ್ಣ ಮಾತನಾಡಿ ಕೊಡಗಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅವಶ್ಯಕತೆ ಕಂಡುಬರುತ್ತಿಲ್ಲ. ಅಂತೆಯೇ ಸಾಂಬಾರ ಮಂಡಳಿಯ ನಡೆ ಅನುಮಾನ ಮೂಡಿಸುವಂತಿದ್ದು, ಕೇಂದ್ರ ಸರ್ಕಾರ ಮಂಡಳಿಯನ್ನು ಪೂರೈಕೆ ನಡುವೆ ಪರಿಸ್ಥಿತಿಗೆ ಅನುಸರಿಸಿ ಮಾರುಕಟ್ಟೆ ನಿರ್ಧಾರವಾಗಲಿದೆ. ಆಮದು ಕರಿಮೆಣಸು ಮುಗಿದಂತೆ ಭಾರತದ ಕರಿಮೆಣಸಿಗೆ ಬೇಡಿಕೆ ಬರಲಿದೆ. ತಕ್ಷಣದಲ್ಲಿ ಹೆಚ್ಚಿನ ಬೆಲೆ ಅಭಿಪ್ರಾಯ ಮಂಡಿಸಿದರು.

ರೈತ ಸಂಘ

ಗೋಣಿಕೊಪ್ಪ ವರದಿ: ಕೇಂದ್ರ ಸರ್ಕಾರ ಕಾಳುಮೆಣಸಿಗೆ ಆಮದು ಶುಲ್ಕ ನಿಗದಿಪಡಿಸಿರುವದು ಸ್ವಾಗತಾರ್ಹ. ಆದರೆ, ಇಲ್ಲಿವರೆಗೆ ಹಿಡಿತದಲ್ಲಿ ಇರಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಗತಿಪರ ಕೃಷಿಕ ಸೋಮೇಗಂಡ ಗಣೇಶ್ ತಿಮ್ಮಯ್ಯ, ರೈತ ಸಂಘ ಮುಖಂಡ ಬಾಚಮಾಡ ಭವಿಕುಮಾರ್ ಗೋಷ್ಠಿಯಲ್ಲಿದ್ದರು.