ಶ್ರೀಮಂಗಲ, ಡಿ. 9: ಪೊನ್ನಂಪೇಟೆ ತಾಲೂಕು ಪುನರ್ರಚನೆಗೆ ಆಗ್ರಹಿಸಿ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ 39ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪೊನ್ನಂಪೇಟೆಯ ಹನಫಿ ಜಮಾಯ್ಯತ್ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.
ಈ ಸಂದರ್ಭ ತಾಲೂಕು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಹೋರಾಟದಲ್ಲಿ ಜನರು, ಸಂಘ ಸಂಸ್ಥೆಗಳು ಪಾಲ್ಗೊಳ್ಳುತ್ತಿದ್ದು, ಈಗಾಗಲೇ ಸರ್ಕಾರದ ಗಮನಕ್ಕೆ ತಾಲೂಕು ಹೋರಾಟದ ಬೇಡಿಕೆ ಹಾಗೂ ಅರ್ಹತೆಯನ್ನು ಮನವರಿಕೆ ಮಾಡಲಾಗಿದೆ ಎಂದರು.
ಗ್ರಾ.ಪಂ ಸದಸ್ಯ ಮೂಕಳೇರ ಲಕ್ಷ್ಮಣ್, ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎಸ್. ಪ್ರಭು, ಪೊನ್ನಂಪೇಟೆ ಹನಫಿ ಜಮಾಯ್ಯತ್‍ನ ಪರವಾಗಿ ಅನೀಶ್ ಅವರುಗಳು ಮಾತನಾಡಿದರು.
ಕೋತೂರು ಒಕ್ಕಲಿಗರ ಕ್ಷೇಮಾಬಿವೃದ್ಧಿ ಸಂಘದ ಪ್ರಮುಖರಾದ ಕೆ.ಆರ್. ಸುರೇಶ್, ಆಡಳಿತ ಮಂಡಳಿಯ ಪದಾಧಿಕಾರಿ ಗಳು ಮತ್ತು ಸದಸ್ಯರು, ಜನತಾ ದಳ ಮುಖಂಡ ಕಾರ್ಮಾಡು ಸುಬ್ಬಣ್ಣ, ಹನಫಿ ಜಮಾಯ್ಯತ್‍ನ ಅಧ್ಯಕ್ಷ ಎಂ.ಹೆಚ್. ಭಾಷ, ಎಂ.ಎಸ್. ಮೊಹಿಸಿನ್, ಎಂ.ಕೆ. ಮಮ್‍ತಾಜ್, ಎಂ.ಎಂ. ಸಾದಿಕ್, ಮನ್ನನ್, ಮುಜಾಯಿದ್, ಶೇಕ್ ಇಸಾಕ್ ಸಾಬ್, ಆತ್ತಾವುಲ್, ನೂರುಲ್ಲಾ, ಎಂ.ಜೆ.ಪಿರು, ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಎರ್ಮು ಹಾಜಿ, ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪೃಥ್ಯು, ಚೆಟ್ರುಮಾಡ ಶಂಕರು ಚಂಗಪ್ಪ ಸೇರಿದಂತೆ ಹಿರಿಯರು ಭಾಗವಹಿಸಿದ್ದರು.