ಸಿದ್ದಾಪುರ, ಡಿ. 8: ಸಿದ್ದಾಪುರದ ವಿ ಸೆವೆನ್ ಯುವಕ ಸಂಘದ ವಾರ್ಷಿಕೋತ್ಸವ ಸಂಘದ ಕಟ್ಟಡದಲ್ಲಿ ನಡೆಯಿತು. ಕೊಡಗು ಜಿಲ್ಲಾ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ ಅಧ್ಯಕ್ಷ ಉತ್ತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿ ಸೆವೆನ್ ಯುವಕ ಸಂಘವು ಹಲವಾರು ವರ್ಷಗಳಿಂದ ಯುವ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದು, ಮತ್ತಷ್ಟು ಪಂದ್ಯಾವಳಿಗಳನ್ನು ಆಯೋಜಿಸುವದರ ಮೂಲಕ ಯುವಕರಿಗೆ ಅವಕಾಶ ಒದಗಿಸುವಂತೆ ತಿಳಿಸಿದರು. ಸಂಘಟನೆಗಳು ಕಬಡ್ಡಿ ಆಟಗಾರರಿಗೆ ಉತ್ತಮ ತರಬೇತಿ ನೀಡಿ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಕಬಡ್ಡಿ ಅಮೆಚೂರ್ ಅಸೋಸಿಯೇಶನ್‍ನಿಂದ ಉತ್ತಮ ಆಟಗಾರರಿಗೆ ಎಲ್ಲಾ ತರಹದ ಸಹಕಾರ ನೀಡಲಾಗುವದು ಎಂದು ಹೇಳಿದ ಅವರು, ವಿ ಸೆವೆನ್ ಸಂಘವು ಉತ್ತಮ ಕ್ರೀಡಾಪಟುಗಳನ್ನು ಹೊಂದಿದ್ದು, ಜಿಲ್ಲೆಯಲ್ಲಿ ಮಾದರಿ ಸಂಘಟನೆಯಾಗಿದೆ ಎಂದರು.

ಕಬಡ್ಡಿ ಅಮೆಚೂರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್ ಮಾತನಾಡಿ, ವಿ ಸೆವೆನ್ ಸಂಘಟನೆಯು 17 ವರ್ಷ ಪೂರೈಸಿದ್ದು ಮತ್ತಷ್ಟು ಸಾಧನೆಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ವಿ ಸೆವೆನ್ ಅಧ್ಯಕ್ಷ ಎಂ.ಹೆಚ್. ಮೂಸ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ಜಾಫರ್, ಕರ್ಪಯ್ಯ, ಮಾಜಿ ಸದಸ್ಯ ಪ್ರತೀóಶ್, ಪ್ರಮುಖರಾದ ಮದು, ಗೋಪಲ, ಅಯ್ಯ, ಪಳನಿ, ಜಮೀಲ್, ನಾಸೀರ್, ಸಾಜನ್ ಮತ್ತಿತರರು ಉಪಸ್ಥಿತರಿದ್ದರು.