ಮಡಿಕೇರಿ, ಡಿ. 8: ಚಮ್ಮಣಮಾಡ ವಾಣಿ ರಾಘವೇಂದ್ರ ಅವರನ್ನು ವಿಶ್ವ ವೀರಶೈವ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಕಾಯಕ ಶ್ರೀ ಪ್ರಶಸ್ತಿಯನ್ನು ಬೆಂಗಳೂರಿನ ನಯನ ಸಭಾಂಗಣ ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ಭವನದಲ್ಲಿ ನೀಡಿ ಗೌರವಿಸಲಾಯಿತು. ಇವರ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.