ಮಡಿಕೇರಿ, ಡಿ. 4: ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮಸಹಾಯಕರ ಸಂಘದ ಕೊಡಗು ಜಿಲ್ಲಾ ಘಟಕದ ಸಭೆಯನ್ನು ಡಿ. 2 ರಂದು ನಗರದ ನೌಕರರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕೊಡಗು ಜಿಲ್ಲಾ ಗ್ರಾಮ ಸಹಾಯಕರ ಸಂಘದÀ ಅಧ್ಯಕ್ಷ ಗಣಪತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 3 ತಾಲೂಕುಗಳ ಗ್ರಾಮ ಸಹಾಯಕರು, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಷಣ್ಮುಗ, ವೀರಾಜಪೇಟೆ ತಾಲೂಕು ಅಧ್ಯಕ್ಷರಾದ ಚೆನ್ನಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ತುಂಗಪ್ಪ, ಉಪಸ್ಥಿತರಿದ್ದರು. ಸಭೆಯಲ್ಲಿ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 10,450 ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರೆಂದು ಖಾಯಂ ಮಾಡಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭ ಹೋಬಳಿ ಮಟ್ಟದ ಅಧಿಕಾರಿಗಳನ್ನು ಮತ್ತು ಮಡಿಕೇರಿ ತಾಲೂಕಿಗೆ ಹೊಸದಾಗಿ ಕಾರ್ಯಕಾರಿ ಮಂಡಳಿಯನ್ನು ನೇಮಿಸಲಾಯಿತು. ಮಡಿಕೇರಿ ತಾಲೂಕು ನೂತನ ಅಧ್ಯಕ್ಷರಾಗಿ ಬಿ.ಎನ್. ಪ್ರಸಾದ್ ಪೂಜಾರಿ, ಉಪಾಧ್ಯಕ್ಷರಾಗಿ ಬಿ.ಪಿ. ಬೇಬಿ, ಕಾರ್ಯದರ್ಶಿಯಾಗಿ ಭಾಗಮಂಡಲದ ಗಣೇಶ್, ಸಂಚಾಲಕರಾಗಿ ನಾಪೋಕ್ಲುವಿನ ಕುಶಾಲಪ್ಪ ಮತ್ತು ಸಮಿತಿ ಸದಸ್ಯರಾಗಿ ಎ.ಹೆಚ್. ಸುಬ್ರಮಣಿ, ಹೆಚ್.ಬಿ. ಮಂಜು, ಹೆಚ್.ಎಸ್. ರಾಜೇಂದ್ರ, ಹೆಚ್.ಎಸ್. ಮಣಿ, ಪಿ.ಬಿ. ಸುಬ್ರಮಣಿಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಮೊಣ್ಣಪ್ಪ ನೆರÀವೇರಿಸಿ, ಬಿ.ಎನ್. ಪ್ರಸಾದ್ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಷಣ್ಮುಗ ವಂದನೆ ಸಲ್ಲಿಸಿದರು.