ಮಡಿಕೇರಿ, ಡಿ. 4: ತಾಜುಲ್ ಉಲಮಾ ಬದ್ರಿಯಾ ಸುನ್ನಿ ಮದರಸ ವತಿಯಿಂದ ಈದ್ ಮಿಲಾದ್ ಸಮಾವೇಶ ನಡೆಯಿತು.

ನಮಾಜಿನ ನಂತರ ಮೌಲೂದ್ ಪಾರಾಯಣ, ನಂತರ ಸ್ವಾಗತ ಸಮಿತಿಯ ಅಧ್ಯಕ್ಷ ಮಮ್ಮುಟಿ ಪಿ.ಸಿ. ಧ್ವಜಾರೋಹಣ ನೆರವೇರಿಸಿದರು. ಪ್ರವಾದಿ ಚರಿತ್ರೆಯ ಬಗೆ ಅಶ್ರಫ್ ಜಾಹ್ವರಿ ಉಸ್ತಾದ್ ಎರ್ಮಾಡ್ ಭಾಷಣ ಮಾಡಿದರು.

ವೇದಿಕೆಯಲ್ಲಿ ಅಧ್ಯಕ್ಷ ಜಲೀಲ್ ಸಖಾಫಿ, ಮದ್ರಸದ ಗೌರವಾಧ್ಯಕ್ಷ ಮೊಯಿದ್ದೀನ್ ಹಾಜಿ, ಯು.ಎ.ಇ. ಅಧ್ಯಕ್ಷ ಹಂಸ ಎಂ.ಎ, ಎಸ್.ವೈ.ಎಸ್. ಕರ್ನಾಟಕ ರಾಜ್ಯ ಸದಸ್ಯ ಅಬೂಬಕರ್ ಎಂ.ಎ. ಹಾಗೂ ಹಸೈನಾರ್ ಕೆ.ಜಿ. ಉಪಸ್ಥಿತರಿದ್ದರು.

ಎರಡನೇ ದಿನ ಸಂದೇಶ ರ್ಯಾಲಿ ಮುಖ್ಯರಸ್ತೆಯಲ್ಲಿ ಸಂಚರಿಸಿತು. ನಂತರ ಅಬ್ದುಲ್ ರೆಹಮಾನ್ ಸಅದಿ ಪ್ರಾರ್ಥನೆ ಸಲ್ಲಿಸಿ ಮದರಸ ವಿದ್ಯಾರ್ಥಿ ಫಯಾಜ್ ಕೆ.ಎಂ. ಖಿರಾಅತ್ ಪಠಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮದರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಯು.ಎ.ಇ. ಶಾಖಾ ವತಿಯಿಂದ ದಾನಿ ಮದರಸದ ಗೌರವಾಧ್ಯಕ್ಷ ಮೊಯಿದ್ದೀನ್ ಹಾಜಿ ಮತ್ತು ಎಸ್.ವೈ.ಎಸ್. ಕರ್ನಾಟಕ ರಾಜ್ಯ ಸದಸ್ಯರಾಗಿ ಆಯ್ಕೆಯಾದ ಅಬೂಬಕರ್ ಎಂ.ಎ. ಮತ್ತು ಮದರಸ ಅಧ್ಯಾಪಕರಾದ ಜಲೀಲ್ ಸಖಾಫಿ, ಅಬ್ದುಲ್ ರಹ್ಮಾನ್ ಸಅದಿ, ಇಬ್ರಾಹಿಂ ಮುಸ್ಲಿಯಾರ್ ಹಾಗೂ ರಾಶೀದ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎಸ್.ಎಸ್.ಎಫ್. ಸದಸ್ಯ ಸಿ.ಎ. ಮಹಮ್ಮದ್ ನಿಸಾರ್ ಸಖಾಫಿ ಅಲ್ ಅಫ್ಲಲಿ, ಮದ್ರಸ ಉಪಾಧ್ಯಕ್ಷ ಸಿ.ಎಂ. ಮೊಯಿದು, ಮೊಯ್ದು ಹಾಜಿ, ಹಸೈನಾರ್, ಪಿ.ಸಿ. ಮಮ್ಮುಟಿ, ಎಂ.ಎ. ಹಂಸ, ಮೊಹಮ್ಮದ್ ಕುಂಜ್ಞಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.