ಕುಶಾಲನಗರ, ಡಿ. 4: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಧರಣಿ ಮುಂದುವರೆದಿದೆ. ಆರ್ಯವೈಶ್ಯ ಮಂಡಳಿ ಆಶ್ರಯದಲ್ಲಿ ಭಾನುವಾರ ಧರಣಿ ನಡೆಯಿತು. ಕಾರು ನಿಲ್ದಾಣದ ಆವರಣದಲ್ಲಿನ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಧರಣಿಯಲ್ಲಿ ಪಾಲ್ಗೊಂಡ ಸಮಾಜದ ಪ್ರತಿನಿಧಿಗಳು ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ತಾಲೂಕು ರಚನೆಗೆ ಒತ್ತಾಯಿಸಿದರು.

ಆರ್ಯವೈಶ್ಯ ಮಂಡಳಿ ಪ್ರತಿನಿಧಿಗಳಾದ ಬಿ.ಆರ್. ನಾಗೇಂದ್ರ ಪ್ರಸಾದ್, ವಿ.ಆರ್. ಮಂಜುನಾಥ್, ಎಸ್.ಕೆ.ಸತೀಶ್, ಅಮೃತ್‍ರಾಜ್, ಆಶಾ ಅಶೋಕ್, ರಶ್ಮಿ, ಕೆ.ಜೆ.ಸತೀಶ್, ಕೆ.ಎಸ್.ನಾಗೇಶ್, ಕುಸುಮ ರಾಜ್ ಮತ್ತು ಹೋರಾಟ ಸಮಿತಿಯ ಕೇಂದ್ರ ಸಮಿತಿ ಪ್ರಮುಖರು ಇದ್ದರು.

ಕುಶಾಲನಗರ: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿಯಲ್ಲಿ ಸೋಮವಾರ ಕಾವೇರಿ ಕುಶಲ ಕರ್ಮಿಗಳ ಸಂಘ ಪಾಲ್ಗೊಂಡಿತ್ತು.

ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಧರಣಿಯಲ್ಲಿ ಪಾಲ್ಗೊಂಡ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ತಾಲೂಕು ರಚನೆಗೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಜಿ.ಧರ್ಮಪ್ಪ, ಮಾಜಿ ಅಧ್ಯಕ್ಷ ಕೆ.ಆರ್.ಶಿವಾನಂದ, ಉಪಾಧ್ಯಕ್ಷ ಮುನಿಸ್ವಾಮಿ, ಕಾರ್ಯದರ್ಶಿಗಳಾದ ಪರಮೇಶ್, ನಾಗೇಶ್, ಪ್ರಮುಖರಾದ ಜನಾರ್ಧನ್, ಪಳನಿಸ್ವಾಮಿ, ಆರ್ಮುಗಂ, ಪರಮೇಶ್, ತಮ್ಮಯ್ಯ ಹಾಗೂ ತಾಲೂಕು ಹೋರಾಟ ಸಮಿತಿ ಪ್ರಮುಖರು ಇದ್ದರು.