ಕೂಡಿಗೆ, ಡಿ. 4: ಸೈನಿಕ ಶಾಲೆಯಲ್ಲಿ ಅಂತರ ನಿಲಯ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು. ಶಾಲೆಯ ಪ್ರಾಂಶುಪಾಲ ಕ್ಯಾ.ಆರ್.ಆರ್. ಲಾಲ್ ಧ್ವಜದ ಸಂಕೇತವನ್ನು ಪ್ರದರ್ಶಿಸುವದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.
ಸ್ಪರ್ಧೆಯಲ್ಲಿ 5 ವಿಭಾಗಗಳಿದ್ದು, ‘ಎ’ ವಿಭಾಗದಿಂದ ಕೆಡೆಟ್‍ಗಳಾದ ಹುಸನ್ ಕುಮಾರ್ ಪ್ರಥಮ, ಪೃಥ್ವಿ ರಾಜ್ ದ್ವಿತೀಯ, ಶಶಿಕಾಂತ್ ತೃತೀಯ ಸ್ಥಾನವನ್ನು ಪಡೆದರು. ‘ಬಿ’ ವಿಭಾಗದಲ್ಲಿ ಸಿದ್ರಾಮ್ ಪ್ರಥಮ, ಬಸವರಾಜ್ ದ್ವಿತೀಯ, ಧೀಮಂತ್ ತೃತೀಯ, ‘ಸಿ’ ವಿಭಾಗದಲ್ಲಿ ಅರುಣ್ ಪ್ರಥಮ, ಪ್ರಸಾದ್ ದ್ವಿತೀಯ, ಸುಹಾಸ್ ತೃತೀಯ, ‘ಡಿ’ ವಿಭಾಗದಲ್ಲಿ ಏಳನೇ ತರಗತಿಯ ಶರಣಯ್ಯ ಪ್ರಥಮ, ರಮೇಶ್ ಕುರಿ ದ್ವಿತೀಯ, ಯಮನೂರಪ್ಪ ತೃತೀಯ, 6ನೇ ತರಗತಿಯ ಮಾನಸ್ ಪ್ರಥಮ, ಗಣಪತಿ ದ್ವಿತೀಯ, ಸಾಗರ್ ಗೌಡ ತೃತೀಯ ಸ್ಥಾನ ಪಡೆದರು.
ವಿದ್ಯಾರ್ಥಿನಿಯರ ‘ಇ’ ವಿಭಾಗದಲ್ಲಿ ಅಂಕಿತ ಪ್ರಥಮ, ಶ್ರಾವ್ಯ ದ್ವಿತೀಯ, ಅಂಜನಿ ತೃತೀಯ ಸ್ಥಾನ ಪಡೆದರು. ಶಾಲೆಯ ಕಠಾರಿ ಸದನವು 2017-18ನೇ ಸಾಲಿನ ಗುಡ್ಡಗಾಡು ಓಟ ಸ್ಪರ್ಧೆಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಮೆನನ್ ಸದನವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು. ಹಾಗೆಯೇ ವಿಜೇತ ಸದನಕ್ಕೆ 2017-18ನೇ ಸಾಲಿನ ಗುಡ್ಡಗಾಡು ಓಟ ಸ್ಪರ್ಧೆಯ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. ಸ್ಪರ್ಧೆಯನ್ನು ಶಾಲೆಯ ಶಿಕ್ಷಕ ಪ್ರಸಾದ್ ರಾಜು ಸಂಘಟಿಸಿದ್ದರು.
ಈ ಸಂದರ್ಭ ಶಾಲೆಯ ಹಿರಿಯ ಶಿಕ್ಷಕ ಎಸ್. ಸೂರ್ಯ ನಾರಾಯಣ, ಬೋಧಕ, ಬೋಧಕೇತರ ವರ್ಗ, ಸಾಮಾನ್ಯ ಸಿಬ್ಬಂದಿ ವರ್ಗ ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.