ಗೋಣಿಕೋಪ್ಪ, ಡಿ. 2: ಅರುವತೋಕ್ಲುವಿನ ಸರ್ವದ್ಯೆವತಾ ವಿದ್ಯಾ ಸಂಸ್ಥೆ 27ನೇ ವರ್ಷದ ವಾರ್ಷಿಕೋತ್ಸವವ ಇತ್ತೀಚೆಗೆ ನಡೆಯಿತು.

ವಿದ್ಯಾರ್ಥಿಗಳು ಅದೃಷ್ಟವನ್ನು ನಂಬಿ ಕೂರದೆ, ಶ್ರಮವಹಿಸಿ ಆಸಕ್ತಿ ಯಿಂದ, ಶ್ರದ್ದೆ, ದೃಢ ನಿರ್ಧಾರದಿಂದ ತಮ್ಮ ಕಲಿಕೆಯಲ್ಲಿ ತೊಡಗಿಕೊಂಡಾಗ ಅದೃಷ್ಟವು ತಮ್ಮನ್ನು ಹುಡುಕಿ ಬರುತ್ತದೆ ಎಂದು ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ನುಡಿದರು.

ವೇದಿಕೆಯಲ್ಲಿ ಅರಣ್ಯ ಮಹಾ ವಿದ್ಯಾಲಯದ ಡೀನ್ ಸಿ.ಜಿ. ಕುಶಾಲಪ್ಪ, ಸಂತ ಥೋಮಸ್ ಚರ್ಚಿನ ಪಾದ್ರಿ ಒ.ಎಕ್ಸ್ ಅಲೆಕ್ಸ್, ಸರ್ವದೈವತಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ, ಸಂಸ್ಥೆಯ ಆಡಳಿತಾಧಿಕಾರಿ ಆದಿತ್ಯ ಅಯ್ಯಪ್ಪ ಹಾಗೂ ಮುಖ್ಯೋಪಾ ಧ್ಯಾಯರು ಉಪಸ್ಥಿತರಿದ್ದರು.

ವಿಶೇಷವಾಗಿ ಗಣಿತ, ವಿಜ್ಞಾನ ಮಾದರಿಗಳು ಅಲ್ಲದೆ ವಿವಿಧ ಬಗೆಯ ಕಲಾ ಮಾದರಿಗಳು ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಮನ ಸೆಳೆಯಿತು.