ವೀರಾಜಪೇಟೆ, ಡಿ. 2: ಇಲ್ಲಿಗೆ ಸಮೀಪದ ಬೇಟೋಳಿ ಗ್ರಾಮದ ಚಿಟ್ಟಡೆಯ ಸುಶ್ಮಾ (36) ಎಂಬಾಕೆ ಜೋತಿಷ್ಯರೊಬ್ಬರು ಹೇಳಿದ ಭವಿಷ್ಯವಾಣಿಯಿಂದ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ದಲ್ಲಿ ಆತ್ಮಹತ್ಯೆಗೆ ಶರಣಾಗಿರುವದಾಗಿ ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೃತೆ ಸುಶ್ಮಾ ಹಾಗೂ ಪತಿ ನಾರಾಯಣ, 16 ವರ್ಷಗಳ ಹಿಂದೆ ವಿವಾಹವಾಗಿ ಅನ್ಯೋನ್ಯವಾಗಿದ್ದರು. ತಾ. 1 ರಂದು ಬೆಳಿಗ್ಗೆ ನಾರಾಯಣ ಅವರು ತಮ್ಮ ಎರಡು ಹೆಣ್ಣು ಮಕ್ಕಳನ್ನು ಶಾಲೆಗೆ ಬಿಟ್ಟು ಬಳಿಕ ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಮನೆಗೆ ಬಂದು ನೋಡಿದಾಗ ಬಾಗಿಲು ಹಾಕಿದ್ದು ತೆರೆಯಲಾಗದೆ ಕಿಟಕಿಯಿಂದ ನೋಡಿದಾಗ ಸೀರೆ ತುಂಡಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದು ಕಂಡು ಬಂದಿದ್ದು, ಕೂಡಲೆ ಸುಶ್ಮಾಳ ಸಂಬಂಧಿ ಅಪ್ಪುಕುಂಞÂ ಎಂಬವರು ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ಜೋತಿಷ್ಯರು ಸಂಸಾರದ ವಿರಸಕ್ಕೆ ಕಾರಣವಾಗುವ ಭವಿಷ್ಯ ಹೇಳಿದ ಮಾತಿಗೆ ಮನನೊಂದು ಆತ್ಮಹತ್ಯೆಗೆ ಕಾರಣ ಎಂದು ದೂರು ನೀಡಿಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಅವರು ಶವ ಪರಿಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.