ಮೂರ್ನಾಡು, ಡಿ. 1: ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಗಿ ಸೇವೆ ಸಲ್ಲಿಸಿ ವಯೋನಿವೃತಿ ಹೊಂದಿದ ಕೆ.ಎಸ್. ಗೌರಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.

ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಕೆ.ಎಸ್. ಗೌರಿ ಅವರನ್ನು ಸಂಘದ ನಿರ್ದೇಶಕಿ ಸ್ವಾತಿ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಬೊಳಕಾರಂಡ ಎಂ. ಮಂದಣ್ಣ, ಉಪಾಧ್ಯಕ್ಷ ಎ.ಎಂ. ಪೂವಯ್ಯ ಹಾಗೂ ನಿರ್ದೇಶಕರು ಕಿರುಕಾಣಿಕೆ ನೀಡಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪಿ.ಎ. ಪೆಮ್ಮಯ್ಯ, ಕೆ.ಸಿ. ಅಪ್ಪಣ್ಣ, ಕೆ.ಡಿ. ಪೆಮ್ಮಯ್ಯ, ಎನ್.ಟಿ. ಮುತ್ತಪ್ಪ, ಎನ್.ಸಿ. ಚಂಗಪ್ಪ, ಬಿ.ಜಿ. ಕುಟ್ಟಯ್ಯ, ಎಚ್.ಎಸ್. ರಾಜು, ಸಿ.ಎ. ಸ್ವಾತಿ, ಬಿ.ಎಸ್. ಜಯಂತಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.