ಶ್ರೀಮಂಗಲ, ಡಿ. 1 : ಸಾಹಿತ್ಯಕ್ಕೆ ಎಂದೂ ಸಾವಿಲ್ಲ. ಉತ್ತಮ ಸಾಹಿತ್ಯವು ಶತಶತಮಾನದವರೆಗೆ ಅಜರಾಮರವಾಗಿರುತ್ತದೆ. ಅಂತಹ ಸಾಹಿತ್ಯ ಸೃಷ್ಠಿಸಿದ ಸಾಹಿತಿಗಳ ಹೆಸರೂ ಕೂಡ ದಾಖಲೆಯಾಗಿ ಉಳಿಯುತ್ತದೆ. ಇದರಿಂದ ಸಾಹಿತ್ಯ ಹಾಗೂ ಆ ಸಾಹಿತ್ಯ ಸೃಷ್ಟಿ ಸಿದ ಸಾಹಿತಿಗೂ ಸಾವಿಲ್ಲ ಎಂದು ‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಭಿಪ್ರಾಯ ವ್ಯಕ್ತÀ್ತಪಡಿಸಿದರು.

‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’ದ ಆಶ್ರಯದಲ್ಲಿ ಬಿರುನಾಣಿ ಮಹಿಳಾ ಸಮಾಜ, ಮರೆನಾಡ್ ಕೊಡವ ಸಮಾಜ, ಬಿರುನಾಣಿ ಸರಕಾರಿ ಪ್ರಾಥಮಿಕ ಶಾಲೆ, ಹಾಗೂ ಬಿರುನಾಣಿ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಬಿರುನಾಣಿ ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ‘ಕೂಟ’ದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ 150ನೇ ಹೆಜ್ಜೆಯ ಲೇಖಕಿ ಚಿಮ್ಮಚ್ಚೀರ ಪವಿತ ರಜನ್ ಬರೆದ ‘ಪತ್ತ್ ಸಾಲ್‍ರ ಮುತ್ತ್’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ

ತಿಂಗಳಿಗೊಂದು ಪುಸ್ತಕ ಪ್ರಕಟಿಸುತ್ತಿರುವ ಕೂಟದ ಸಾಧನೆ ಶ್ಲಾಘನೀಯ. ಇಂದು 150ನೇ ಹೆಜ್ಜೆಯ ಪುಸ್ತಕ ಬಿಡುಗಡೆ ಮಾಡಿದ ಕೂಟದಿಂದ ಸಾವಿರಾರು ಪುಸ್ತಕ ಪ್ರಕಟಗೊಳ್ಳುವಂತಾಗಲಿ ಎಂದು ಹಾರೈಸಿದರು.

ಅಮ್ಮ ಕೊಡವ ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷೆ ಅಮ್ಮತ್ತೀರ ರೇವತಿ ಪರಮೇಶ್ವರ್ ಮಾತನಾಡಿ ಈ ರೀತಿಯ ಸಾಹಿತ್ಯ ಪರ ಕಾರ್ಯಕ್ರಮಕ್ಕೆ ಆದಷ್ಟು ಸಮಯ ಹೊಂದಿಸಿಕೊಂಡು ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿಯ ಬೆಳವಣಿಗೆಗೆ ಒತ್ತು ನೀಡಬೇಕಾಗಿರುವದು ಎಲ್ಲರ ಕರ್ತವ್ಯ. ಎಂದು ಸಲಹೆ ನೀಡಿದರು.

ಬಿರುನಾಣಿ ಮಹಿಳಾ ಸಮಾಜದ ಕಾರ್ಯದರ್ಶಿ ಬುಟ್ಟಿಯಂಡ ಸುನಿತಾ ಗಣಪತಿ ಮಾತನಾಡಿ ‘ಕೂಟ’ದ ಸಾಹಿತ್ಯ ಪರ ಚಟುವಟಿಕೆಗೆ ಸಹಯೋಗ ನೀಡಲು ನಮ್ಮ ಮಹಿಳಾ ಸಮಾಜಕ್ಕೆ ಅವಕಾಶ ಸಿಕ್ಕಿರುವದು ಹೆಮ್ಮೆ ಎನಿಸುತ್ತಿದೆ. ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಸಾಹಿತ್ಯಾಭಿಮಾನಿಗಳು ಇಂತಹ ಸಾಹಿತ್ಯ ಪರ ಚಟುವಟಿಕೆಗೆ ಪ್ರೋತ್ಸಾಹ ನೀಡುವದರೊಂದಿಗೆ ಕೊಡವ ಭಾಷೆ, ಸಾಹಿತ್ಯ ಸಂಸ್ಕøತಿಯ ಬೆಳವಣಿಗೆಗೆ ಸಹಕರಿಸಬೇಕೆಂದರು.

ಪುಸ್ತಕದ ಲೇಖಕಿ ಚಿಮ್ಮಚ್ಚೀರ ಪವಿತ ರಜನ್ ಮಾತನಾಡಿ ಸಾಹಿತ್ಯಾಭಿಮಾನಿಗಳು ಖರೀದಿಸಿ, ಓದಿ ಅಭಿಪ್ರಾಯ ವ್ಯಕ್ತಪಡಿಸಿದಾಗಲೇ ಆ ಸಾಹಿತ್ಯ ಸೃಷ್ಠಿಸಿದ್ದು ಸಾರ್ಥಕ ವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಪುಸ್ತಕವನ್ನು ಓದುವದರೊಂದಿಗೆ ಸಾಹಿತ್ಯದ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಕೊಡವ ಭಾಷೆಯಲ್ಲಿ ಹಾಡುಗಾರಿಕೆ, ಹಾಸ್ಯ ಹಾಗೂ ಓದುವ ಸ್ಪರ್ಧೆಯನ್ನು ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕರಿಗೆ ನಡೆಸಿ ಬಹುಮಾನಗಳನ್ನು ನೀಡಲಾಯಿತು. ‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’ ಇದುವರೆಗೆ ಪ್ರಕಟಿಸಿದ ಪುಸ್ತಕ ಹಾಗೂ ಧ್ವನಿ ಸುರುಳಿಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿತ್ತು.

ಮಹಿಳಾ ಸಮಾಜದ ಸದಸ್ಯೆ ಕರ್ತಮಾಡ ಧರಣಿ ಪ್ರಾರ್ಥಿಸಿ, ಗ್ರಾ.ಪಂ ಸದಸ್ಯೆ ಕುಪ್ಪಣಮಾಡ ಬೇಬಿ ದೇವಯ್ಯ ಸ್ವಾಗತಿಸಿ, ‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’ದ ಉಪಾಧ್ಯಕ್ಷೆ ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ ಲೇಖಕಿ ಹಾಗೂ ಧಾನಿಗಳ ಪರಿಚಯ ಮಾಡಿದರು. ಕೂಟದ ನಿರ್ದೇಶಕ ಕಾಳಿಮಾಡ ಮೋಟಯ್ಯ ನಿರೂಪಿಸಿ, ಬೊಜ್ಜಂಗಡ ನಿತಿನ್ ನಂಜಪ್ಪ ವಂದಿಸಿದರು.