ಸೋಮವಾರಪೇಟೆ,ಡಿ.1: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಶನಿವಾರಸಂತೆ ಸಮೀಪದ ಗೋಪಾಲಪುರದಲ್ಲಿ ತಾ. 3ರಂದು (ನಾಳೆ) ಆಯೋಜಿಸಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಪಟ್ಟಣದಲ್ಲಿರುವ ವಲಯ ಕಚೇರಿಯಲ್ಲಿ ನಡೆಯಿತು.ಯೋಜನಾಧಿಕಾರಿ ವೈ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೂಜೆಯ ಯಶಸ್ಸಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಯೋಜನೆಯ ಸೋಮವಾರಪೇಟೆ ವಲಯ, ಗೋಪಾಲಪುರದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಗ್ರಾಮಸ್ಥರುಗಳ ಸಹಯೋಗದೊಂದಿಗೆ ಪೂಜಾ ವಿಧಿ-ವಿಧಾನಗಳನ್ನು ಅತ್ಯಂತ ಪಾವಿತ್ರ್ಯತೆ ಹಾಗೂ ಶ್ರದ್ದಾಭಕ್ತಿಯಿಂದ ಆಚರಿಸಲು ಬೇಕಾದ ತಯಾರಿ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಪೂಜೆಯ ಆಮಂತ್ರಣ ಹಾಗೂ ಅಭಿನಂದನಾ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ ಉಪಾಧ್ಯಕ್ಷ ಮುಳ್ಳೂರಿನ ಅನಿಲ್ಕುಮಾರ್, ವಲಯ ಮೇಲ್ವಿಚಾರಕ ಕೆ. ರಮೇಶ್ ಹಾಗೂ ಯೋಜನೆಯ ಪ್ರಮುಖರುಗಳಾದ ಭವ್ಯ, ತಾರಾಲಕ್ಷ್ಮಿ, ಮಹೇಶ್, ಶೈಲಾ, ಎಂ.ಎ. ರುಬೀನಾ, ಪವಿತ್ರ, ತಾರಾಮಣಿ, ಚೈತ್ರ ಪಾಲ್ಗೊಂಡಿದ್ದರು.