ಮಡಿಕೇರಿ, ಡಿ.1 : ದಕ್ಷಿಣ ಕಾಶಿ ತಲಕಾವೇರಿಯ ಪಾವಿತ್ರ್ಯಕ್ಕೆ ಧಕ್ಕೆಯನ್ನು ಉಂಟು ಮಾಡುವ ಸರ್ಕಾರದ 25 ಕೋಟಿ ರೂ. ವೆಚ್ಚದ ಹೈಟೆಕ್ ಅತಿಥಿ ಗೃಹ ನಿರ್ಮಾಣ ಮತ್ತು ಶ್ರೀಆದಿ ಚುಂಚನಗಿರಿಯ ಶಾಖಾ ಮಠವನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ತರುವದನ್ನು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸದಸ್ಯ ಯು.ಎಂ. ಪÀÇವಯ್ಯ, ತಮ್ಮ ವಿರೋಧಗಳ ನಡುವೆಯೂ ಕ್ಷೇತ್ರ ವ್ಯಾಪ್ತಿಯಲ್ಲಿ ಹೈಟೆಕ್ ಅತಿಥಿ ಗೃಹವನ್ನು ನಿರ್ಮಿಸಲು ಮುಂದಾದಲ್ಲಿ ರಾಜ್ಯ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುವದಕ್ಕೂ ಹಿಂದೇಟು ಹಾಕುವದಿಲ್ಲವೆಂದು ಸ್ಪಷ್ಟಪಡಿಸಿದರು. ತಲಕಾವೇರಿ ಕ್ಷೇತ್ರ ವ್ಯಾಪ್ತಿಯನ್ನು ಬಿಟ್ಟು ಬೆÉೀರೆಡೆ ಆದಿಚುಂಚÀನಗಿರಿಯ ಶಾಖಾ ಮಠ ತೆರೆಯುವದಿದ್ದಲ್ಲಿ ಅದಕ್ಕೆ ತಮ್ಮ ವಿರೊಧವಿಲ್ಲವೆಂದರು.

ತಲಕಾವೇರಿ ಕ್ಷೇತ್ರ ಪ್ರಕೃತಿಯ ನಡುವಿನ ಧಾರ್ಮಿಕ ಪುಣ್ಯ ಕ್ಷೇತ್ರವೇ ಹೊರತು ಪ್ರವಾಸಿ ತಾಣವಲ್ಲ. ಹೀಗಿದ್ದೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ 50 ಕೊಠಡಿಗಳ ಹೈಟೆಕ್ ಅತಿಥಿ ಗೃಹ, ಒಳಚರಂಡಿ, ಪಾರ್ಕಿಂಗ್ ವ್ಯವಸ್ಥೆಯ ಅಭಿವೃದ್ಧಿಗೆ 25 ಕೊಟಿ ರೂ.ಗಳ ಯೋಜನೆ ರೂಪಿಸಿದ್ದಾರೆ ಎಂದು ತಮ್ಮ ಅರಿವಿಗೆ ಬಂದಿದೆ. ಇಂತಹ ಕಾಮಗಾರಿಗಳು ಕ್ಷೇತ್ರದ ಪಾವಿತ್ರ್ಯತೆಗೆ ತೀವ್ರ ಧಕ್ಕೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಯಾವದೇ ನಿರ್ಮಾಣ ಕಾರ್ಯಗಳಿಗೂ ತಮ್ಮ ವಿರೋಧವಿರುದಾಗಿ ಸ್ಪಷ್ಟಪಡಿಸಿದರು.

ಬ್ರಹ್ಮಗಿರಿ ಪ್ರವೇಶಕ್ಕೆ ನಿರ್ಬಂಧ ಅಗತ್ಯ- ತಲಕಾವೇರಿ ಕ್ಷೇತ್ರದ ಬ್ರಹ್ಮಗಿರಿ ಬೆಟ್ಟದ ಹಸಿರ ಪರಿಸರದೊಂದಿಗೆ ಅಲ್ಲಿನ ಪಾವಿತ್ರ್ಯತೆಯ ರಕ್ಷಣೆÉಗೆ ಈ ಹಿಂದೆ ಜಿಲ್ಲಾಡಳಿತ ಬ್ರಹ್ಮಗಿರಿ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಆದರೆ, ಇದೀಗ ಪ್ರವೇಶ ಮುಕ್ತವಾಗಿದ್ದು, ಪ್ರವಾಸಿಗರು ಬೆಳಗ್ಗಿನಿಂದಲೆ ಈ ಪ್ರದೇಶಕ್ಕೆ ಲಗ್ಗೆ ಹಾಕಿ, ಮೋಜು ಮಸ್ತಿ ನಡೆಸುವ ಮೂಲಕ ಅಲ್ಲಿನ ಪ್ರಶಾಂತತೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಹ್ಮಗಿರಿ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಆಗ್ರ್ರಹಿಸಿದರು.

ಈ ಹಿಂದಿನಿಂದಲೂ ಕಾವೇರಿಯ ಕ್ಷೇತ್ರಕ್ಕೆ ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರವೇಶವಿಲ್ಲ. ಇದೀಗ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿಥಿ ಗೃಹ, ಶಾಖಾ ಮಠಗಳು ತಲೆ ಎತ್ತಿದಲ್ಲಿ ಹಿಂದಿನಿಂದಲೂ ನಡೆದು ಕೊಂಡು ಬಂದಿರುವ ಸಂಪ್ರದಾಯಕ್ಕೆ ಚ್ಯುತಿಯುಂಟಾಗಿ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುತ್ತದೆ. ಕ್ಷೇತ್ರದ ಪ್ರಾಕೃತಿಕ ನೆಲೆಯನ್ನು ಅದು ಇರುವಂತೆಯೇ ಸಂರಕ್ಷಿಸಬೇಕೆಂದು ಆಗ್ರಹಿಸಿದರು. ಕ್ಷೇತ್ರಕ್ಕೆ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ಮಾತ್ರ ಪ್ರವೇಶ ನೀಡುವದರೊಂದಿಗೆ ವಸ್ತ್ರ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿರುವದಾಗಿ ತಿಳಿಸಿದರು.

ವೇದಿಕೆಯ ಮುಖ್ಯ ಸಂಚಾಲಕ ಕೊಕ್ಕಲೆರ ಎ. ಕಾರ್ಯಪ್ಪ ಮಾತನಾಡಿ, 2008ರಲ್ಲೆ ಅಂದಿನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪೆರುಮಾಳ್ ಅವರು, ತಲಕಾವೇರಿ ಕ್ಷೇತ್ರದಲ್ಲಿ ನಿಗಮದಿಂದ ನಡೆಸುವ ಯಾವದೇ ನಿರ್ಮಾಣ ಕಾರ್ಯಗಳು ಇಲ್ಲವೆಂದು ಸ್ಪಷ್ಟಡಿಸಿದ್ದರು. ಆದರೆ, ಇದೀಗ ಅತಿಥಿ ಗೃಹ ನಿರ್ಮಾಣಕ್ಕೆ ಮುಂದಾಗಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ವೇದಿಕೆಯ ಕಾನೂನು ಸಲಹೆಗಾರ ಕಿರಿಯಮಾಡ ರತನ್ ತಮ್ಮಯ್ಯ ಮಾತನಾಡಿ ರಾಜ್ಯ ಉಚ್ಚ ನ್ಯಾಯಾಲಯ ಈ ಹಿಂದೆಯೇ ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವದೇ ನಿರ್ಮಾಣ ಕಾರ್ಯಗಳನ್ನು ನಡೆಸದೆ ಅಲ್ಲಿನ ಮೂಲ ಸ್ವರೂಪವನ್ನು ಸಂರಕ್ಷಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಯಾವದೇ ನಿರ್ಮಾಣ ಕಾರ್ಯ ನಡೆಯಕೂಡದು ಎಂದರು.