ಮಡಿಕೇರಿ, ಡಿ.1 : ಕಂಬಿಬಾಣೆ ಅನ್ಸಾರುಲ್ ಜಮಾಅತ್ ಮತ್ತು ಈದ್ ಮಿಲಾದ್ ಸಮಿತಿಯ ವತಿಯಿಂದ ಕಂಬಿಬಾಣೆಯಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಶೈಖುನ ಕಾಕು ಉಪ್ಪಾಪ ಎಂಬ ಹೆಸರಿನ ಉಮರ್ ಫೈಝಿ ಅವರ 7ನೇ ವರ್ಷದ ಉರೂಸ್ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಡಿಸೆಂಬರ್ ತಾ. 2 ರಿಂದ (ಇಂದಿನಿಂದ) 4ರವರೆಗೆ ನಡೆಯಲಿದೆ ಎಂದು ಜಮಾಅತ್ ಸದಸ್ಯರು ಹಾಗೂ ಸುಂಟಿಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ.2 ರಂದು ಕುಂಜಿಲ ತಂಜಿಳ್‍ನ ಅಸಯ್ಯದ್ ಮುಹಸ್ಸೀನ್ ಅಲ್ ಬುಖಾರಿ ಅವರು ಮಗ್ರೀಲ್ ನÀಮಾಝ್‍ನ ಬಳಿಕ ಸ್ವಲಾತ್ ಹಾಗೂ ದುಅ ನೆರವೇರಿಸಲಿದ್ದಾರೆ. ತಾ. 3 ರಂದು ಬಹು ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ಎಮ್ಮೆಮಾಡು ತಂಙಳ್ ಮತ್ತು ಮಂಜೇಶ್ವರ ಮಲ್‍ಹರ್ ದವಾ ಕಾಲೇಜಿನ ಪ್ರಾಂಶುಪಾಲ ಅಹು ಅನಸ್ ಸಿದ್ದಿಕಿ ಖಾಮಿಲ್ ಸಖಾಫಿ ಭಾಷಣ ಮಾಡಲಿದ್ದಾರೆ ಎಂದರು.
ತಾ.4 ರಂದು ಬೆಳಿಗ್ಗೆ 11 ಗಂಟೆಗೆ ಸೌಹಾರ್ದ ಸಮ್ಮೇಳನ ನಡೆಯಲಿದ್ದು, ಶೈಖುನಾ ಆಲಿಕುಂಞ ಮುಸ್ಲಿಯಾರ್ ನೇತೃತ್ವದಲ್ಲಿ ದುಅ ನಡೆಯಲಿದೆ. ಮಿಲಾದ್ ಹಾಗೂ ಉರೂಸ್ ಸಮಿತಿಯ ಅಧ್ಯಕ್ಷ ಅಬ್ದುಲ್ಲಾ ಕುಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಹಜ್ ಮತ್ತು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ವಕ್ಫ್ ಸಚಿವರಾರ ತನ್ವೀರ್ ಶೇಟ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಂ. ಇಬ್ರಾಹಿಂ, ಪಿ.ಸಿ. ಹಸೈನಾರ್ ಹಾಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್, ಕೊಡಗು ಜಿಲ್ಲಾ ನಯಿಬ್ ಖಾಝಿ ಕೆ.ಎ ಮಹಮೂದ್ ಮುಸ್ಲಿಯಾರ್, ಕೊಡಗು ಜಿಲ್ಲಾ ಸಮಸ್ತ ನಯಿಬ್ ಖಾಝಿ ಎಂ.ಎಂ. ಅಬ್ದುಲ್ಲ ಫೈಜಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್, ಜಿಲ್ಲಾ ವಕ್ಫ್ ಅಧಿಕಾರಿ ಸಾದತ್ ಹಸನ್, ಮಾಜಿ ಸಚಿವ ಬಿ.ಎ. ಜೀವಿಜಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಎನ್.ಐ.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಹಾಗೂ ಇತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಅನ್ನದಾನ ಏರ್ಪಡಿಸಲಾಗಿದೆಯೆಂದು ಎಂ. ಎ. ಉಸ್ಮಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿಯ ಅಧ್ಯಕ್ಷ ಅಬ್ದುಲ್ಲಾ ಕುಟ್ಟಿ, ಕಾರ್ಯದರ್ಶಿ ಮಹಮ್ಮದ್ ಆಲಿ, ಖಜಾಂಚಿಯಾದ ಶರೀಫ್, ಜಮಾಅತ್ ಪ್ರಧಾನ ಕಾರ್ಯದರ್ಶಿಗಳಾದ ಮುನೀರ್ ಉಪಸ್ಥಿತರಿದ್ದರು.