ಗೋಣಿಕೊಪ್ಪ ವರದಿ, ನ. 30: ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ 14 ವರ್ಷದೊಳಗಿನ ಬಾಲಕರ ಮಂಡೇಪಂಡ ಸುಬ್ರಮಣಿ ಜ್ಞಾಪಕಾರ್ಥ ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪ ಲಯನ್ಸ್, ಸಂತ ಅಂಥೋಣಿ ಹಾಗೂ ಸೆಂಟ್ ಆನ್ಸ್ ತಂಡಗಳು ಸೆಮಿ ಫೈನಲ್ ಪ್ರವೇಶ ಪಡೆದವು.

ಪೊನ್ನಂಪೇಟೆ ಪದವಿಪೂರ್ವ ಗೋಣಿಕೊಪ್ಪ ವರದಿ, ನ. 30: ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ 14 ವರ್ಷದೊಳಗಿನ ಬಾಲಕರ ಮಂಡೇಪಂಡ ಸುಬ್ರಮಣಿ ಜ್ಞಾಪಕಾರ್ಥ ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪ ಲಯನ್ಸ್, ಸಂತ ಅಂಥೋಣಿ ಹಾಗೂ ಸೆಂಟ್ ಆನ್ಸ್ ತಂಡಗಳು ಸೆಮಿ ಫೈನಲ್ ಪ್ರವೇಶ ಪಡೆದವು.

ಪೊನ್ನಂಪೇಟೆ ಪದವಿಪೂರ್ವ ಮಣಿಸಿತು. ಅಂಥೋನಿ ಪರ 11 ರಲ್ಲಿ ದಿವಿನ್, 19 ಹಾಗೂ 21 ರಲ್ಲಿ ಬಿಪಿನ್ 2 ಗೋಲು, 25 ರಲ್ಲಿ ತಿಮ್ಮಯ್ಯ ಗೋಲು ಹೊಡೆದರು.

ವೀರಾಜಪೇಟೆ ಸೆಂಟ್ ಆನ್ಸ್ ತಂಡವು ಗೋಣಿಕೊಪ್ಪ ಲಯನ್ಸ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಸೆಂಟ್ ಆನ್ಸ್ ಪರ 8 ರಲ್ಲಿ ಧ್ಯಾನ್, 16 ರಲ್ಲಿ ಸುಬ್ರಮಣಿ ಗೋಲು ಹೊಡೆದರು.

ಮಡಿಕೇರಿ ಕ್ರೀಡಾ ವಸತಿ ಶಾಲಾ ತಂಡವು ಟಿ. ಶೆಟ್ಟಿಗೇರಿ ರೂಟ್ಸ್ ತಂಡದ ವಿರುದ್ಧ ಶೂಟೌಟ್‍ನಲ್ಲಿ ಗೆಲುವು ಪಡೆಯಿತು. ಪಂದ್ಯದ ಅವಧಿಯಲ್ಲಿ ಉಭಯ ತಂಡಗಳು ಗೋಲು ದಾಖಲಿಸಿಲಿಲ್ಲ. ಇದರಿಂದಾಗಿ ಶೂಟೌಟ್‍ನಲ್ಲಿ ಮಡಿಕೇರಿ ತಂಡವು 3-1 ಅಂತರದಲ್ಲಿ ಗೆಲುವು ಪಡೆಯಿತು.

ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆ ತಂಡವು ಮಡಿಕೇರಿ ಕ್ರೀಡಾ ವಸತಿ ಶಾಲೆ ತಂಡವನ್ನು 5-0 ಗೋಲುಗಳಿಂದ ಮಣಿಸಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿತು. 5, 11 ಹಾಗೂ 23 ನೇ ನಿಮಿಷಗಳಲಿ ವೇದ್ ಬಿದ್ದಪ್ಪ, 10 ರಲ್ಲಿ ಮೌರ್ಯ, 13 ರಲ್ಲಿ ದ್ರುವಿನ್ ಗೋಲು ಹೊಡೆದರು. ತಾ. 2 ರಂದು ಬಾಲಕರ ಸೆಮಿ ಫೈನಲ್, ಫೈನಲ್ ಹಾಗೂ ಬಾಲಕಿಯರ ಫೈನಲ್ ಪಂದ್ಯಗಳು ನಡೆಯಲಿವೆ.,

ಟೂರ್ನಿ ನಿರ್ದೇಶಕರಾಗಿ ಬುಟ್ಟಿಯಂಡ ಚೆಂಗಪ್ಪ, ತಾಂತ್ರಿಕ ವರ್ಗದಲ್ಲಿ ಮುಂಡ್ಯೋಳಂಡ ದರ್ಶನ್, ಮೇರಿಯಂಡ ಅಯ್ಯಣ್ಣ, ಮೇರಿಯಂಡ ಮುತ್ತಪ್ಪ, ಚೋಯಮಾಡಂಡ ಬಿಪಿನ್, ಹರಿಣಾಕ್ಷಿ ಕಾರ್ಯನಿರ್ವಹಿಸಿದರು.