ಮಡಿಕೇರಿ, ನ. 29: ಸಂಸ್ಕøತಿಯ ಪ್ರತೀಕವಾಗಿ ನಡೆದುಕೊಂಡು ಬಂದಿರುವ ಪುತ್ತರಿ ಈಡ್ ಕಾರ್ಯಕ್ರ ಮಕ್ಕೆ ಇಂದು ಮಡಿಕೇರಿ ಕೊಡವ ಸಮಾಜದ ವತಿಯಿಂದ ನಗರದ ಮ್ಯಾನ್ಸ್ ಕಾಂಪೌಂಡ್‍ನಲ್ಲಿರುವ ಮಂದ್‍ನಲ್ಲಿ ಚಾಲನೆ ನೀಡಲಾಯಿತು.

ಮಡಿಕೇರಿಯಲ್ಲಿ ತಾ. 29 ರಿಂದ ಡಿಸೆಂಬರ್ 1ರ ವರೆಗೆ ಸಂಜೆ ಈಡ್ ನಡೆಯಲಿದೆ.

ಹಿರಿಯರು ಹುತ್ತರಿಯ ಸಂಸ್ಕøತಿ, ಆಚಾರ-ವಿಚಾರ, ಕೋಲಾಟ ಇವುಗಳ ಬಗ್ಗೆ ಕಿರಿಯರಿಗೆ ಈಡ್‍ನ ಮೂಲಕ ಮಾರ್ಗದರ್ಶನ, ತರಬೇತಿ ನೀಡುವದು ಸಂಪ್ರದಾಯ.

ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಮಾಜಿ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಸೇರಿದಂತೆ ಕೊಡವ ಸಮಾಜದ ಪದಾಧಿಕಾರಿಗಳು ಹಾಜರಿದ್ದರು, ಮುತ್ತಪ್ಪ ಅವರು ದೇವರನ್ನು ಸ್ತುತಿಸಿ, ಈಡ್‍ನ ಮಹತ್ವದ ಬಗ್ಗೆ ತಿಳಿಸಿದರು. ಸಾಮೂಹಿಕವಾಗಿ ಅಕ್ಕಿ ಹಾಕುವದರೊಂದಿಗೆ ಚಾಲನೆ ನೀಡಲಾಯಿತು.