ಮಡಿಕೇರಿ, ನ. 30: ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ವೀರಾಜಪೇಟೆಯ ವಿದ್ವಾನ್ ಕೆ.ಓ. ರಾಜೇಶ್ ಆಚಾರ್ಯ ಅವರ ಜಗನ್ಮೋಹನ ನಾಟ್ಯಾಲಯವು ಶಾಸ್ತ್ರೀಯ ನೃತ್ಯ ವಿಭಾಗದ ಎಲ್ಲಾ ಪ್ರಾಕಾರಗಳಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಮಡಿಕೇರಿಯ ಕಾವೇರಿ ಕಲಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಕೊಡಗು ಜಿಲ್ಲಾ ಮಟ್ಟದ ಯುವ ಜನೋತ್ಸವದಲ್ಲಿ ವೀರಾಜಪೇಟೆಯ ಬಿ.ಎಂ. ಕಾರ್ತಿಕ್ ಶೆಣೈ ಕೂಚುಪುಡಿ ವಿಭಾಗದಲ್ಲಿ ಪ್ರಥಮ, ಒಡಿಸ್ಸಿ ವಿಭಾಗದಲ್ಲಿ ಬಿ.ಎಂ. ನಮಿತಾ ಶೆಣೈ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಇಬ್ಬರು ವೀರಾಜಪೇಟೆಯ ಬಿ.ಎನ್. ಮನುಶೆಣೈ ಮತ್ತು ಸುಮಾಶೆಣೈ ದಂಪತಿಗಳ ಮಕ್ಕಳಾಗಿದ್ದಾರೆ.

ಭರತನಾಟ್ಯ ವಿಭಾಗದಲ್ಲಿ ಹರ್ಷ ಕೀರ್ತಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ವೀರಾಜಪೇಟೆಯ ದಶರಥ ಹಾಗೂ ವಿಮಲಾ ದಶರಥ ಅವರ ಪುತ್ರಿಯಾಗಿದ್ದಾರೆ.

ಕಥಕ್ ವಿಭಾಗದಲ್ಲಿ ವೀರಾಜಪೇಟೆಯ ಗಾನವಿ ರಮೇಶ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈಕೆ ವೀರಾಜಪೇಟೆಯ ದಿ. ರಮೇಶ್ ಹಾಗೂ ಪುಷ್ಪ ಅವರ ಪುತ್ರಿಯಾಗಿದ್ದಾಳೆ.

ಮಣಿಪುರಿ ವಿಭಾಗದಲ್ಲಿ ನಿಖಿತ ಯೋಗೇಶ್ ಪ್ರಥಮ ಸ್ಥಾನವನ್ನು ಗಳಿಸಿದ್ದಾಳೆ. ಈಕೆ ವೀರಾಜಪೇಟೆಯ ಯೋಗೇಶ್ ಹಾಗೂ ಅನಿತಾ ಅವರ ಪುತ್ರಿಯಾಗಿದ್ದಾಳೆ.