ಗೋಣಿಕೊಪ್ಪ ವರದಿ, ನ. 30: ದಕ್ಷಿಣ ಕೊಡಗಿನ ಗ್ರಾಮದ ದೇವಸ್ಥಾನಗಳಲ್ಲಿ ತಾ. 3 ರಂದು ಗ್ರಾಮಸ್ಥರು ಸಾಮೂಹಿಕ ಕದಿರು ತೆಗೆಯುವ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಗ್ಗೆ ಹಾಗೂ ರಾತ್ರಿ ಕದಿರು ತೆಗೆಯುವ ಮೂಲಕ ವಿವಿಧ ಗ್ರಾಮದಲ್ಲಿ ಗ್ರಾಮದ ಸಂಪ್ರದಾಯದಂತೆ ಆಚರಣೆ ನಡೆಯಲಿದೆ.

ಗೋಣಿಕೊಪ್ಪ : ಇಗ್ಗುತ್ತಪ್ಪ ಕೊಡವ ಸಂಘದ ವತಿಯಿಂದ ತಾ. 3 ರಂದು ಪರಿಮಳ ಮಂಗಳ ವಿಹಾರ ಸಮೀಪವಿರುವ ಬ್ರಿಗೇಡಿಯರ್ ಮನೆಯಪಂಡ ದೇವಯ್ಯ ಅವರ ಗದ್ದೆಯಲ್ಲಿ ರಾತ್ರಿ 8.30 ಕ್ಕೆ ಕದಿರು ತೆಗೆಯಲಾಗುವದು. 7.30 ಕ್ಕೆ ಸಂಘದ ಕಚೇರಿಯಲ್ಲಿ ದೇವರಿಗೆ ದೀಪವಿಟ್ಟು ಪ್ರಾರ್ಥಿಸುವ ಮೂಲಕ ಮೆರವಣಿಗೆಯಲ್ಲಿ ಗದ್ದೆಗೆ ತೆರಳಿ ಕದಿರು ತೆಗೆಯಲಾಗುತ್ತದೆ ಎಂದು ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ ತಿಳಿಸಿದ್ದಾರೆ.

ಮಾಯಮುಡಿ: ಕಮಟೆ ಮಹಾದೇವರ ದೇವಸ್ಥಾನದಲ್ಲಿ ತಾ. 3 ರಂದು ರಾತ್ರಿ 7.30 ಕ್ಕೆ ಕದಿರು ತೆಗೆಯುವ ಕಾರ್ಯಕ್ರಮ ನಡೆಯುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸಣ್ಣುವಂಡ ರಮೇಶ್ ತಿಳಿಸಿದ್ದಾರೆ.

ರುದ್ರಬೀಡು : ಬಾಡತಯ್ಯಪ್ಪ ದೇವಸ್ಥಾನದಲ್ಲಿ ಬೆಳಗ್ಗೆ 10.30 ಕ್ಕೆ ಕದಿರು ತೆಗೆಯಲಾಗುತ್ತದೆ.

ಚಿಕ್ಕಮುಂಡೂರು: ಅಚ್ಚುನಾಯಕ ದೇವಸ್ಥಾನದಲ್ಲಿ ತಾ. 3 ರಂದು ಬೆಳಗ್ಗೆ 10 ಗಂಟೆಗೆ ಕದಿರು ತೆಗೆಯುಲಾಗುವದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬಲ್ಯಮುಂಡೂರು ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 10 ಕ್ಕೆ ಕದಿರು ತೆಗೆಯಲಾಗುತ್ತದೆ.

ಹರಿಹರ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆ. 10 ಕ್ಕೆ, ತೂಚಮಕೇರಿ ಮಹಾದೇವರ ದೇವಸ್ಥಾನದಲ್ಲಿ ಬೆ. 10 ಕ್ಕೆ, ಬೆಸಗೂರು: ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಬೆ. 11.30 ಕ್ಕೆ ನಡೆಯಲಿದೆ.