ಮಡಿಕೇರಿ, ನ. 29: ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಭಾರತ್ ಆಸ್ಪತ್ರೆ ಮತ್ತು ಗಾಂಧಿ ಸಂಸ್ಥೆ ಮೈಸೂರು, ಇಂಡಿಯಾನ ಆಸ್ಪತ್ರೆ ಮಂಗಳೂರು, ಲಯನ್ಸ್ ಕ್ಲಬ್ ಸಂಪಾಜೆ ಇವರ ಸಹಭಾಗಿತ್ವದಲ್ಲಿ ಉಚಿತ ಕ್ಯಾನ್ಸರ್ ಮತ್ತು ಹೃದಯ ತಪಾಸಣಾ ಶಿಬಿರ ನಡೆಯಿತು. ಸಭಾ ಕಾರ್ಯಕ್ರಮವನ್ನು ಡಾ. ಜಿ.ಕೆ. ಸುಬ್ರಮಣ್ಯ ಭಟ್ ಅಧ್ಯಕ್ಷತೆಯಲ್ಲಿ, ಮಾಜಿ ಲಯನ್ಸ್ ಅಧ್ಯಕ್ಷ ಡಾ. ಸದಾನಂದ ನಾಯಕ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮೈಸೂರು ಭಾರತ ಆಸ್ಪತ್ರೆಯ ತಜ್ಞ ಡಾ. ರಾಮಚಂದ್ರ, ಮಂಗಳೂರಿನ ಇಂಡಿಯಾನ ಆಸ್ಪತ್ರೆ ತಜ್ಞ ಡಾ. ದೇವ್, ಗ್ರಾ.ಪಂ. ಸದಸ್ಯೆ ರಾಜೇಶ್ವರಿ, ಶ್ರೀ ಹರ್ಷ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಹರ್ಷ ಭಾಗವಹಿಸಿದ್ದರು.
ಆರೋಗ್ಯ ಇಲಾಖೆ, ಭಾರತ್ ಆಸ್ಪತ್ರೆ, ಇಂಡಿಯಾನ ಆಸ್ಪತ್ರೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಗಳ ಸಿಬ್ಬಂದಿ ವರ್ಗದವರು ತಮ್ಮ ಸಹಕಾರ ನೀಡಿದರು. ಲಯನ್ಸ್ ಕ್ಲಬ್ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಶ್ರೀಲತಾ ಪ್ರಾರ್ಥಿಸಿ, ಲೋಕನಾಥ್ ಸ್ವಾಗತಿಸಿ, ವಾಸುದೇವ ಕಟ್ಟೆಮನೆ ವಂದಿಸಿ, ಗುರುಪ್ರಸಾದ್ ನಿರೂಪಿಸಿದರು.