ಮಡಿಕೇರಿ, ನ.29: ವಿಕಲ ಚೇತನರಿಗೆ ಅನುಕಂಪಕ್ಕಿಂತ ಅವರಲ್ಲಿರುವ ವಿಶೇಷ ಪ್ರತಿಭೆ ಗುರ್ತಿಸಿ ಪ್ರೋತ್ಸಾಹಿಸುವದು ಬಹಳ ಮುಖ್ಯ ಎಂದು ನಗರಸಭೆ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ವಿಕಲಚೇತನರ ಆಟೋಟ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಕಲ ಚೇತನರೆಲ್ಲಾ ವಿಶೇಷ ಚೇತನರು. ನಾಲ್ಕು ಗೋಡೆಯೊಳಗೆ ಇರದೆ ಎಲ್ಲರಂತೆ ಸಮಾನರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು. ಹಾಗೆಯೇ ಮಕ್ಕಳ ಪ್ರತಿಭೆಗೆ ಪೋಷಕರು ಸಹಕಾರ ನೀಡಬೇಕು ಎಂದು ಹೇಳಿದರು.

ಎಲ್ಲಾ ಮಕ್ಕಳು ವಿಕಲಚೇತನರು ಎನ್ನುವದನ್ನು ಮರೆತು ಕ್ರೀಡೆಯಲ್ಲಿ ಭಾಗವಹಿಸಿ ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಬೇಕು ಎಂದು ವಿಕಲಚೇತನರ ಜಿಲ್ಲಾ ಅಧ್ಯಕ್ಷ ಮಹೇಶ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಮಾತನಾಡಿ ವಿಕಲಚೇತನರಿಗೆ ಇದೊಂದು ಸ್ಪೂರ್ತಿದಾಯಕ. ಹಾಗೂ ಒಳ್ಳೆಯ ಅವಕಾಶವಾಗಿದೆ. ವಿಕಲಚೇತನರು ಕೊರತೆ ಇದೇ ಎಂದು ತಿಳಿದುಕೊಳ್ಳಬಾರದು. ಅದೇ ನಿಮಗೆ ಶ್ರೀರಕ್ಷೆ. ಕ್ರೀಡಾಕೂಟದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ಶಿಶು ಅಭಿವೃದ್ಧಿ ಇಲಾಖೆಯ ಮಾತೃಪೂರ್ಣ ಯೋಜನೆಯು ಪ್ರತಿಯೊಬ್ಬರಿಗೂ ಸಿಗಬೇಕು ಎಂದು ಹೇಳಿದರು.

ಮುಖ್ಯೋಪಾಧ್ಯಾಯಿನಿ ಗೀತಾ ಶ್ರೀಧರ್, ಹಿರಿಯ ಮೇಲ್ವ್ವಿಚಾರಕ ದಮಯಂತಿ, ತೀರ್ಪುಗಾರರಾದ ಪ್ರಸನ್ನ ಕುಮಾರ್ ಇತರರು ಇದ್ದರು.