ಶ್ರೀಮಂಗಲ, ನ. 28: ನಮ್ಮ ಪೂರ್ವಜರು ಅತ್ಯಂತÀ ಶÀೃದ್ಧೆಯಿಂದ ರೂಪಸಿರುವ ವ್ಯವಸ್ಥೆಗೆ ಸಂಸ್ಕøತಿ ಎಂಬ ಭಾಷ್ಯವನ್ನು ನೀಡಿ ಒಂದು ಜನಾಂಗದ ಸಾಮಾಜಿಕ ವ್ಯವಸ್ಥೆಯನ್ನು ಅತ್ಯಂತ ಶೃದ್ಧೆಯಿಂದ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ವ್ಯವಸ್ಥೆ ಯನ್ನು ರೂಪಿಸಿದ್ದರು. ಆ ವ್ಯವಸ್ಥೆಯೂ ಇಂದಿನ ಲೌಖಿಕ ಸಮಾಜದ ಎಲ್ಲಾ ಉನ್ನತೀಕರಣಕ್ಕೆ ಬುನಾದಿಯಂತೆ ಕಾರ್ಯನಿರ್ವ ಹಿಸುತ್ತಿದೆ. ಆದ್ದರಿಂದ ಸಂಸ್ಕøತಿಯನ್ನು ಬಿಟ್ಟು ನಡೆದಲ್ಲಿ ಸಮಾಜದ ಅವನತಿ ಖಂಡಿತ ಎಂದು ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಪ್ರತಿಪಾದಿಸಿದರು.
ಅವರು ಮಂಚಳ್ಳಿಯ ಬಾಂಧವ್ಯ ಮಹಿಳಾ ಸಾಂಸ್ಕøತಿಕ ಕೇಂದ್ರದಲ್ಲಿ ಯುಕೊ ಆಶ್ರಯದಲ್ಲಿ ಡಿಸಂಬರ್ 24 ಮತ್ತು 25ರಂದು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ನಡೆಯುವ ನಾಲ್ಕನೇ ವರ್ಷದ ಕೊಡವ ಮಂದ್‍ನಮ್ಮೆ ಕಾರ್ಯಕ್ರಮದ ಸಂಘಟನಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮಂದ್ ಎನ್ನುವದು ಕೊಡವ ಸಂಸ್ಕøತಿಯ ತಳಹದಿ. ಇದನ್ನು ಉಳಿಸಿ ಬೆಳೆಸಿಕೊಳ್ಳುವದು ನಮ್ಮ ಕರ್ತವ್ಯವಾಗಿದೆ. ಯಾವುದೇ ಸಮಾಜದಲ್ಲಿ ಸಂಸ್ಕøತಿಯು ಅಧಃಪತನ ಹಿಡಿದಾಗ ವಿಕೃತಿಯ ಹಿಡಿತಕ್ಕೆ ಸಮಾಜ ತಳ್ಳಲ್ಪಟ್ಟು ಸಮಾಜದ ಸ್ವಾಸ್ಥ್ಯ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ವಿಶ್ಲೇಷಿಸಿದರು.
ನಮ್ಮ ಹಿರಿಯರು ರೂಪಿಸಿದಂತ ಸಾಂಸ್ಕøತಿಕ ವ್ಯವಸ್ಥೆಯನ್ನು ಅಷ್ಟೇ ಶೃದ್ಧಾಪೂರ್ವಕವಾಗಿ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯನ್ನು ಅರಿತು ಹೆಜ್ಜೆ ಇಡಬೇಕಿದೆ. ಯುಕೊ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಕೊಡವ ಮಂದ್ ನಮ್ಮೆ ಕಾರ್ಯಕ್ರಮ ಒಂದು ಮಹತ್ತರವಾದ ಹೆಜ್ಜೆಯಾಗಿದೆ. ಕೊಡವ ಸಂಸ್ಕøತಿಯ ವಿವಿಧ ಆಯಾಮಗಳ ಸಮ್ಮಿಲನ ಹಾಗೂ ಕೊಡವರ ಜಾಗತಿಕ ವ್ಯವಸ್ಥೆಯ ಬಹುದೊಡ್ಡ ಸಮಾವೇಶ ವಾಗಿರುವ ಈ ಕಾರ್ಯಕ್ರಮಕ್ಕೆ ಎಲ್ಲಾ ಕೊಡವರು ಭಾಗವಹಿಸುವಂತಾಗ ಬೇಕೆಂದು ಹೇಳಿದರು.
ಬಾಂಧವ್ಯ ಮಹಿಳಾ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷೆ ಜಿ.ಪಂ ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿ ಯುಕೊ ಸಂಘಟನೆಯ ಕಾರ್ಯಪ್ರಕಾರಗಳನ್ನು ಪ್ರಾರಂಭ ದಿಂದಲೇ ಗಮನಿಸುತ್ತಿದ್ದೇನೆ. ಇದರಿಂದ ಕೊಡವ ಸಮಾಜದಲ್ಲಿ ಕಳೆದ 5 ವರ್ಷಗಳಿಂದ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ಕ್ಷೇತ್ರಗಳಲ್ಲಿ ಬಹಳಷ್ಟು ಪರಿವರ್ತನೆಯಾಗುತ್ತಿ ರುವದನ್ನು ನಾವು ಗಮನಿಸಬೇಕಾಗಿದೆ. ಯುಕೊ ಸಂಘಟನೆಯಲ್ಲಿ ಕೊಡವ ಸಮಾಜವನ್ನು ಅತ್ಯಂತ ಪರಿಣಾಮ ಕಾರಿ ಯಾಗಿ ಮುನ್ನಡೆಸುವಂತಹ ಜವಾಬ್ದಾರಿಯುತ ಲಕ್ಷಣಗಳು ಪ್ರಾರಂಭದಿಂದಲೇ ಗೋಚರಿಸಿದ್ದವು ಎಂದು ಹೇಳಿದರು. ಕೊಡವರ ಸಾಂಸ್ಕøತಿಕ ಲೋಕದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿರುವ ಕೊಡವ ಮಂದ್‍ನಮ್ಮೆ ಕಾರ್ಯಕ್ರಮಕ್ಕೆ ನಮ್ಮ ಸಂಘದ ಸರ್ವ ಸದಸ್ಯರು ಸಹ ಸಾಂಪ್ರದಾಯಿಕ ಉಡುಗೆ ತೊಡುಗೆ ಯೊಂದಿಗೆ ಭಾಗವಹಿಸಿ ಸಂಪೂರ್ಣ ಬೆಂಬಲ ನೀಡುವದಾಗಿ ಈ ಸಂದರ್ಭ ಘೋಷಿಸಿದರು.
ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಾದ ತೀತಿರ ತೀರ್ಥ ಮಂಜುನಾಥ್, ಮಚ್ಚಮಾಡ ಪದ್ಮ ಸೋಮಯ್ಯ, ಬೊಳ್ಳೇರ ಕುಸುಮಾ ದೇವಯ್ಯ, ಉಳುವಂಗಡ ಕಮಲ ಕರುಂಬಯ್ಯ, ಮಚ್ಚಮಾಡ ರುಕ್ಕು ಕಾಶಿ, ಅಜ್ಜಮಾಡ ಪೊನ್ನಮ್ಮ ಗಣಪತಿ, ಲೀಲಾ ಸುಬ್ಬಯ್ಯ, ಮಾನ್ಯ ಅಣ್ಣಯ್ಯ, ಗಂಗೂ ಪೂಣಚ್ಚ, ತೀತಿರ ಕುಸುಮಾ ಚಂಗಪ್ಪ, ಇಂದಿರಾ ದೇವಯ್ಯ, ರುಕ್ಕು ನಂಜಪ್ಪ, ಬಲ್ಯಮಾಡ ಸರೋಜ ಸುಗಂದ, ಕುಂಞಂಗಡ ಸುಮತಿ ಅರಸು, ಕೋಟ್ರಂಗಡ ಕಮಲ ಉತ್ತಪ್ಪ, ಚೋಡುಮಾಡ ಗೀತಾ ಸೋಮಯ್ಯ, ಮಚ್ಚಮಾಡ ಜಾಜಿ ಕುಟ್ಟಪ್ಪ, ಅಜ್ಜಿಕುಟ್ಟೀರ ಪೊನ್ನು ಬಿದ್ದಪ್ಪ, ಚೋಡುಮಾಡ ಡೈಸಿ ಕರುಂಬಯ್ಯ, ಮಚ್ಚಮಾಡ ಶ್ವೇತ ನವೀನ್, ಶಾರದ, ರೀಣಾ ಕಾಶಿ, ಸೋಜಿ, ಕೋಳೆರ ಲೀಲಾ ಅಪ್ಪಣ್ಣ, ಚೋಡುಮಾಡ ಮೀನಾಕ್ಷಿ ಬಿದ್ದಪ್ಪ, ಚಿಂಡಮಾಡ ನಿರತ ವಿಶ್ವ, ಚಿಂಡಮಾಡ ಬೋಜ, ತೀತಿರ ಗಿರಿಜ ಬೋಪಣ್ಣ, ಬೊಜ್ಜಂಗಡ ಲೀಲಾ, ಚೆಪ್ಪುಡೀರ ಸುಮತಿ, ಕೋಟ್ರಮಾಡ ರೇಶ್ಮ, ತೀತಿರ ರೈನ ಗಣಪತಿ, ಬೊಜ್ಜಂಗಡ ಮೆನಕಾ ರೈ, ಅಪ್ಪಂಡೇರಂಡ ಲೀಲಾ, ತೀತಿರ ಪುಷ್ಪ ಪೂಣಚ್ಚ, ಅಜ್ಜಮಾಡ ಶುಭ, ಶೋಭ, ಅಪ್ಪಂಡೇರಂಡ ಜಾನ್ಸಿ ಜೀವನ್, ಕೋಟ್ರಮಾಡ ನಳಿನಿ, ರಾಣಿ, ಮಚ್ಚಮಾಡ ಶ್ವೇತ, ಶಾಂತಿ ಸುಬ್ರಮಣಿ ಹಾಗೂ ಯುಕೊ ಸಂಘಟನೆಯ ಉಳುವಂಗಡ ಲೋಹಿತ್ ಭೀಮಯ್ಯ ಮತ್ತಿತರರು ಹಾಜರಿದ್ದರು.