ವೀರಾಜಪೇಟೆ, ನ. 23: ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕಾಕೋಟುಪರಂಬು ಹಾಗೂ ಹಾಕಿ ಕೊಡಗು ಸಂಸ್ಥೆಯ ಸಹಯೋಗದಲ್ಲಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಜಿಲ್ಲಾಮಟ್ಟದ ನಾಕೌಟ್ ಹಾಕಿ ಪಂದ್ಯಾಟದಲ್ಲಿ ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್, ಹಾತೂರು ಸ್ಪೋಟ್ರ್ಸ್ ಕ್ಲಬ್, ಕಾಕೋಟುಪರಂಬು ಎಸ್.ಆರ್.ಸಿ ಕುತ್ತುನಾಡು ಡ್ರಿಬ್ಲರ್ಸ್ ತಂಡಗಳು ಮುನ್ನಡೆ ಸಾಧಿಸಿದೆ.

ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ತಂಡವು 4-3 ಗೋಲುಗಳಿಂದ ಬೇರಳಿನಾಡು ಯುಎಸ್‍ಸಿ ತಂಡವನ್ನು ಸಡನ್‍ಡೆತ್‍ನಲ್ಲಿ ಮಣಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು 2-2 ಸಮಬಲ ಸಾಧಿಸಿತು. ಸಡನ್ ಡೆತ್‍ನಲ್ಲಿ ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಜಯ ಸಾಧಿಸಿತು. ಕೊಡವ ಸಮಾಜದ ಪರ ಗಣಪತಿ (21ನಿ), ಭರತ್ (60ನಿ), ಪೆನಾಲ್ಟಿ ಶೂಟೌಟ್ ಹಾಗೂ ಸಡನ್ ಡೆತ್‍ನಲ್ಲಿ ಪುನಿತ್ 2, ಪರಾಜಿತ ತಂಡದ ಪರ ರಮೇಶ್ (31,50ನಿ), ಚಂಗಪ್ಪ ಗೋಲು ದಾಖಲಿಸಿದರು.

ಹಾತೂರು ಸ್ಪೋಟ್ರ್ಸ್ ಕ್ಲಬ್ ತಂಡವು 3-0 ಗೋಲುಗಳಿಂದ ಅಮ್ಮತ್ತಿ ಸ್ಪೋಟ್ಸ್ ಕ್ಲಬ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ ಯಾವದೇ ಗೋಲಾಗದ ಕಾರಣ ಪೆನಾಲ್ಟಿ ಶೂಟೌಟ್‍ಗೆ ಮೊರೆ ಹೊಗಬೇಕಾಯಿತು. ಶೂಟೌಟ್‍ನಲ್ಲಿ ಹಾತೂರು ತಂಡದ ಪರ ಸೋಮಣ್ಣ, ಸತೀಶ್, ಶಣ್ಮುಗಂ ಗೋಲು ದಾಖಲಿಸಿದರು.

ಅತಿಥೇಯ ಕಾಕೋಟುಪರಂಬು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ತಂಡವು 2-1 ಗೋಲುಗಳಿಂದ ಗೋಣಿಕೊಪ್ಪ ಬಿಬಿಸಿ ತಂಡವನ್ನು ಸೋಲಿಸಿತು. ಕಾಕೋಟುಪರಂಬು ತಂಡದ ಪರ ಬೆಳ್ಳ್ಳಿಯಪ್ಪ (29ನಿ), ಪೂವಣ್ಣ (54ನಿ), ಬಿಬಿಸಿ ತಂಡದ ಪರ ರಾಹುಲ್ (4ನಿ)ದಲ್ಲಿ ಗೋಲು ದಾಖಲಿಸಿ ಗೋಲಿನ ಅಂತರವನ್ನು ಕಡಿಮೆ ಗೊಳಿಸಿದರು.

ಕುತ್ತುನಾಡು ಡ್ರಿಬ್ಲರ್ಸ್ ತಂಡವು 4-3 ಗೋಲುಗಳಿಂದ ಬೇಗೂರು ಈಶ್ವರ ಯೂತ್ ಕ್ಲಬ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು 1-1 ಗೊಲುಗಳ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಡ್ರಿಬ್ಲರ್ಸ್ ತಂಡವು ಗೋಲು ದಾಖಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಡ್ರಿಬ್ಲರ್ಸ್ ಪರ ಶ್ರೀಧರ್ (11ನಿ ಹಾಗೂ ಶೂಟೌಟ್), ಮೋಕ್ಷಿತ್, ಹರ್ಷಾ, ಪಾರಾಜಿತ ತಂಡದ ಪರ ಸುರ್ಜಿತ್(8ನಿ), ಬಾಲಾಜಿ, ಜೀತು ಗೋಲು ದಾಖಲಿಸಿದರು.