ನಾಪೆÇೀಕ್ಲು, ನ. 20: ಕೊಡವರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕಳೆದ 25 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, ಈ ಹೋರಾಟವು ಬೇಡಿಕೆ ಈಡೇರುವ ವರೆಗೆ ನಿರಂತರವಾಗಿ ಮುಂದುವರೆ ಯುವದು ಎಂದು ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಹೇಳಿದರು.ಕಕ್ಕಬ್ಬೆ ಸಮೀಪದ ಯವಕಪಾಡಿ ಗ್ರಾಮದ ಅಪ್ಪಾರಂಡ ಮುಂದ್ ಮನೆಯಲ್ಲಿ ಆಯೋಜಿಸಲಾಗಿದ್ದ ಜನ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಕೊಡವ ಲ್ಯಾಂಡ್ ಹಕ್ಕೊತ್ತಾಯ ಸೇರಿದಂತೆ ಕೊಡವ ಬುಡಕಟ್ಟು ಜನಾಂಗಕ್ಕೆ ರಾಜ್ಯಾಂಗ ಖಾತ್ರಿ ಮತ್ತು ದೇವಟಿ ಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಬೇಕೆಂಬ ನಿಟ್ಟಿನಲ್ಲಿ ಸಿಎನ್‍ಸಿ 25 ವರ್ಷಗಳಿಂದ ಹೋರಾಡುತ್ತಾ ಬಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ಅಂಜಪರವಂಡ ಕಟ್ಟಿ, ಅಪ್ಪಾರಂಡ ದೇವಯ್ಯ, ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಅರೆಯಡ ಜೀವನ್ ದೇವಯ್ಯ, ಗಿರೀಶ್, ಅಪ್ಪಾರಂಡ ಪ್ರಕಾಶ್, ಬೊಳಿಯಾಡಿರ ಸಂತು ಸುಬ್ರಮಣಿ, ಕಲಿಯಂಡ ಸುನಂದಾ, ಕಲ್ಯಾಟಂಡ ರಘು ತಮ್ಮಯ್ಯ, ನಾಟೋಳಂಡ ದಿಲೀಪ್, ಅಪ್ಪಾರಂಡ ಸಾಗರ್, ಅಲ್ಲಾರಂಡ ಸನ್ನು ಅಯ್ಯಪ್ಪ, ಅಪ್ಪಾರಂಡ ಸುನಿಲ್, ಸೀನು ನಂಜಪ್ಪ, ಪ್ರಸಾದ್, ವಿಜು, ಕಲಿಯಂಡ ಪವನ್, ಬಡಕಡ ದೀನಾ ಪೂವಯ್ಯ, ಮತ್ತಿತರರು ಇದ್ದರು.