ಮೂರ್ನಾಡು, ನ. 20 : ಬಾಡಗ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ನಡೆದ ಗ್ರಾಮಾಂತರ ಕ್ರೀಡಾಕೂಟದ ಹಾಕಿ ಪಂದ್ಯಾವಳಿಯಲ್ಲಿ ಬಾಡಗ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಗ್ರಾಮಾಂತರ ಕ್ರೀಡಾಕೂಟದ ಹಾಕಿ ಪಂದ್ಯದಲ್ಲಿ ಬಾಡಗ ಹಾಗೂ ಕಾಂತೂರು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ಫೈನಲ್ ಪಂದ್ಯದಲ್ಲಿ 5-4 ಗೋಲುನಿಂದ ಬಾಡಗ ತಂಡ ಕಾಂತೂರು ತಂಡದ ವಿರುದ್ಧ ಜಯಸಾಧಿಸಿತು. ಕಾಂತೂರು ತಂಡದ ಪರ ಮೊದಲ ಸುತ್ತಿನಲ್ಲಿ 27 ನಿಮಿಷದಲ್ಲಿ ಪ್ರಲೇಶ್ 1ಗೋಲು ಹೊಡೆದರು. ಬಾಡಗ ತಂಡದ ಪರ ಎರಡನೇ ಸುತ್ತಿನಲ್ಲಿ 45 ನಿಮಿಷದಲ್ಲಿ ರಮೇಶ್ 1ಗೋಲು ಬಾರಿಸಿ ಪಂದ್ಯ ಡ್ರಾ ಕಂಡಿತು. ಎರಡು ತಂಡಗಳ ನಡುವೆ ನಡೆದ ಪೆನಾಲ್ಟಿ ಸ್ಟೋಕ್‍ನಲ್ಲಿ 3-3 ಗೋಲುಗಳಿಸಿ ಸಮಬಲಗೊಂಡಿತು. ಬಳಿಕ ಸಡನ್ ಡೆತ್‍ನಲ್ಲಿ 1-0 ಗೋಲಿನಿಂದ ಬಾಡಗ ತಂಡ ಜಯ ಸಾಧಿಸಿತು. ಬಾಡಗ ತಂಡ 10ಸಾವಿರ ನಗದು ಹಾಗೂ ಟ್ರೋಫಿ, ಕಾಂತೂರು ತಂಡ 8ಸಾವಿರ ನಗದು ಹಾಗೂ ರನ್ನರ್ಸ್ ಟ್ರೋಫಿ ಪಡೆದುಕೊಂಡಿತು.

ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಕಾಂತೂರು ತಂಡ ಪ್ರಥಮ ಬಹುಮಾನ 5ಸಾವಿರ ಹಾಗೂ ಟ್ರೋಫಿ, ಬಾಡಗ ದ್ವಿತೀಯ ಬಹುಮಾನ 3ಸಾವಿರ ಹಾಗೂ ಟ್ರೋಫಿ ಪಡೆದುಕೊಂಡಿತು. ಭಾರದ ಕಲ್ಲು ಎಸೆತದಲ್ಲಿ ಮೂಡೇರ ಪೊನ್ನಪ್ಪ, ಕೋಡಂಬೂರು(ಪ್ರ), ಮಡೆಯಂಡ ಸುತನ್, ಬಾಡಗ(ದ್ವಿ), ಬಾಚೆಟ್ಟಿರ ಸುಬ್ಬಯ್ಯ, ಕಿಗ್ಗಾಲು(ತೃ) ಬಹುಮಾನ ಪಡೆದುಕೊಂಡರು. ಹಾಕಿ ಪಂದ್ಯದಲ್ಲಿ ಸರಣಿ ಪುರುಷೋತ್ತಮ ಕಾಂತೂರು ತಂಡದ ಅವರೆಮಾದಂಡ ಪಚ್ಚು, ಪಂದ್ಯ ಪುರುಷೋತ್ತಮ ಬಾಡಗ ತಂಡದ ಹೆಚ್.ಟಿ. ರಮೇಶ್ ಪ್ರಶಸ್ತಿ ಪಡೆದುಕೊಂಡರು. ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಹರ್ಷ ಮಂದಣ್ಣ ವೀಕ್ಷಕ ವಿವರಣೆ ನೀಡಿದರು. ಪಂದ್ಯಾವಳಿಯಲ್ಲಿ ಎಂ.ಬಾಡಗ, ಕಿಗ್ಗಾಲು, ಮುತ್ತಾರ್ಮುಡಿ, ಕಾಂತೂರು, ಕೋಡಂಬೂರು ಮತ್ತು ಐಕೊಳ ಗ್ರಾಮಗಳು ಭಾಗವಹಿಸಿದವು.

ಸಮಾರೋಪ ಸಮಾರಂಭ : ಎಂ. ಬಾಡಗ ಗ್ರಾಮದ ಕಾಫಿ ಬೆಳೆಗಾರರಾದ ಬಾರಿಯಂಡ ನರೇನ್ ತಿಮ್ಮಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟಗಳು ಪ್ರತಿವರ್ಷ ನಡೆಯಬೇಕು. ಇದರಿಂದ ಗ್ರಾಮದ ಜನತೆ ಒಂದೆಡೆ ಒಗ್ಗೂಡುವ ಅವಕಾಶ ದೊರೆತು ಎಲ್ಲರು ಒಂದೇ ಎಂಬ ಮನೋಭಾವನೆ ಬೆಳೆಯುತ್ತದೆ ಎಂದರು.

ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆಮ್ಮಂಡ ಪವಿತ್ರ ಕುಂಞಪ್ಪ ಮಾತನಾಡಿ ಕೊಡಗು ಜಿಲ್ಲೆ ಸೇನೆ ಹಾಗೂ ಕ್ರೀಡೆಗೆ ಹೆಸರುವಾಸಿಯಾಗಿದೆ. ಇಂತಹ ಕ್ರೀಡಾಕೂಟ ಆಯೋಜನೆಗೆ ದಾನಿಗಳ ಸಹಕಾರ ಅಗತ್ಯ ಎಂದರು.

ಬಾಡಗ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಕೋಟೆರ ಪ್ರತಾಪ್ ಕಾರ್ಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ದಾನಿಗಳಾದ ಮಡೆಯಂಡ ಪಾಲಿ ಪೊನ್ನಪ್ಪ, ಮಡೆಯಂಡ ಬಿ. ಚಂಗಪ್ಪ, ಕಂಬೀರಂಡ ಗೌತಮ್ ನಂಜುಡ, ಕಂಬೀರಂಡ ಬಾಬು ಕಾರ್ಯಪ್ಪ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಕಂಬೀರಂಡ ಕಿಟ್ಟು ಕಾಳಪ್ಪ, ಪುದಿಯೊಕ್ಕಡ ವಿಪ್ಪನ್ ಸೋಮಯ್ಯ, ಕೋಟೆರ ಸಚಿನ್, ಮಡೆಯಂಡ ಉಮ್ಮಯ್ಯ ತಿಮ್ಮಯ್ಯ, ಮುಕ್ಕಾಟಿರ ಮಿಟ್ಟು ಕಾಳಪ್ಪ, ಸಂಘದ ಉಪಾಧ್ಯಕ್ಷ ಕೈಪೆಟೀರ ಹರೀಶ್ ಅಯ್ಯಪ್ಪ, ಕಾರ್ಯದರ್ಶಿ ಕಂಬೀರಂಡ ಸತೀಶ್ ಮುತ್ತಪ್ಪ ಹಾಗೂ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಬೇಸ್‍ಬಾಲ್ ಕ್ರೀಡೆಯಲ್ಲಿ ಏಷ್ಯಾ ಕಪ್ 2017ರಲ್ಲಿ ಭಾರತವನ್ನು ಪ್ರತಿನಿಧಿಸಿದ ಎಂ ಬಾಡಗ ಗ್ರಾಮದ ಊರೊಳಮ್ಮಂಡ ಭವ್ಯ ಸುರೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.