ಮಡಿಕೇರಿ, ನ. 10: ಕಳೆದ 2015ರಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ಸಂದರ್ಭ ಉಂಟಾದ ಗಲಭೆಯಲ್ಲಿ ಸಾವನ್ನಪ್ಪಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ದೇವಪ್ಪಂಡ ಕುಟ್ಟಪ್ಪ ಅವರ ಹುತಾತ್ಮ ದಿನವನ್ನು ಜಿಲ್ಲೆಯ ವಿವಿಧೆಡೆ ಆಚರಿಸಲಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಕುಟ್ಟಪ್ಪ ಅವರ ಹೆಸರಿನಲ್ಲಿ ಶಾಂತಿಪೂಜೆ ನೆರವೇರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಾಂತೆಯಂಡ ರವಿಕುಶಾಲಪ್ಪ, ರಾಬಿನ್ ದೇವಯ್ಯ, ಅರುಣ್ ಕುಮಾರ್, ಜಗದೀಶ್, ಬಿಜೆಪಿ ನಗರ ಅಧ್ಯಕ್ಷ ಮಹೇಶ್ ಜೈನಿ, ಭಜರಂಗದಳ ಜಿಲ್ಲಾ ಸಂಚಾಲಕ ಅಜಿತ್ ಕುಮಾರ್, ಸಹ ಸಂಚಾಲಕ ಚೇತನ್, ಹಿಂಜಾವೇ ಪ್ರಮುಖರಾದ ಕುಕ್ಕೇರ ಅಜಿತ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧನಂಜಯ, ಅರುಣ್ ಶೆಟ್ಟಿ, ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.ಸೋಮವಾರಪೇಟೆ

ಕುಟ್ಟಪ್ಪ ಅವರ ಹುತಾತ್ಮ ದಿನವನ್ನು ಮಾದಾಪುರದ ಯಡಿಯೂರಪ್ಪ ಸಮುದಾಯ ಭವನದಲ್ಲಿ ಆಚರಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಟ್ಟಪ್ಪ ಅವರ ಭಾವಚಿತ್ರಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಕುಟ್ಟಪ್ಪ ಅವರ ಪತ್ನಿ ಡಿ.ಕೆ. ಚಿಣ್ಣವ್ವ, ಪುತ್ರ ಡಿ.ಕೆ. ಡಾಲಿ ಸೇರಿದಂತೆ ಕುಟುಂಬಸ್ಥರು, ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿದರು.

ಕುಟ್ಟಪ್ಪ ಅವರು ಹಿಂದೂ ಸಮಾಜದ ಧೀಮಂತ ಹೋರಾಟಗಾರರಾಗಿದ್ದು, ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವನ್ನುಂಟುಮಾಡಿದೆ. ಸರ್ಕಾರ ಬಲಾತ್ಕಾರವಾಗಿ ಕೊಡಗಿನವರ ಮೇಲೆ ಟಿಪ್ಪು ಜಯಂತಿಯನ್ನು ಹೇರಿದೆ. ಸ್ವಾಭಿಮಾನಿ ಕೊಡಗಿನ ಜನರು ಇದರ ವಿರುದ್ಧ ನಿರಂತರ ಹೋರಾಟ ಮಾಡಬೇಕಿದೆ ಎಂದು ಶಾಸಕ ರಂಜನ್ ಹೇಳಿದರು.

ಕಾರ್ಯಕ್ರಮದಲ್ಲಿ ಮಾದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ 150ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.

ಸೋಮವಾರಪೇಟೆಯಲ್ಲಿ

ಇಲ್ಲಿನ ಹಿಂದೂಪರ ಸಂಘಟನೆಗಳ ವತಿಯಿಂದ ಕರ್ಕಳ್ಳಿ ರಸ್ತೆಯಲ್ಲಿರುವ ಕಟ್ಟೆ ಬಸವೇಶ್ವರ ದೇವಾಲಯದಲ್ಲಿ ಕುಟ್ಟಪ್ಪ ಹುತಾತ್ಮ ದಿನ ಆಚರಿಸಲಾಯಿತು. ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖ ಸುಭಾಷ್ ತಿಮ್ಮಯ್ಯ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಬಿ.ಜೆ. ದೀಪಕ್, ಪ್ರಮುಖರಾದ ರೂಪಾ ಸತೀಶ್, ಬನ್ನಳ್ಳಿ ಗೋಪಾಲ್ ಸೇರಿದಂತೆ 50ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು.ವೀರಾಜಪೇಟೆಯಲ್ಲಿ ಸ್ಮರಣೆ

ರಾಜ್ಯದಲ್ಲಿ ಅಳ್ವಿಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಕೊಮು ಗಲಭೆಗಳು ನಡೆಯಲು ಪರೋಕ್ಷವಾಗಿ ಬೆಂಬಲ ಸೂಚಿಸಿದ ಪರಿಣಾಮ ಇಂದು ಹಿಂದೂ ಧರ್ಮದ ಪರ ನಿಂತ ದಿ. ದೇವಪಂಡ ಕುಟ್ಟಪ್ಪ ಅವರನ್ನು ಕೆಳೆದುಕೊಂಡಿದೆ. ದಿವಂಗತರ ಸ್ಮರಣೆಯನ್ನು ಟಿಪ್ಪು ಜಯಂತಿಯಂದು ಆಚರಣೆ ಮಾಡುತ್ತಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್‍ನ ತಾಲೂಕು ಕಾರ್ಯಾಧ್ಯಕ್ಷ್ಷ ಉದ್ದಪಂಡ ಜಗತ್ ಹೇಳಿದರು.

ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಜರಂಗ ದಳ ಹಾಗೂ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿಯ ಸಂಯುಕ್ತ ಅಶ್ರಯದಲ್ಲಿ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ಗಣಪತಿ ದೇವಸ್ಥಾನದಲ್ಲಿ ಕುಟ್ಟಪ್ಪ ಹುತಾತ್ಮ ದಿನ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಘಚಾಲಕ ಪ್ರಿನ್ಸ್ ಗಣಪತಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಅನ್ಯ ಕೋಮಿನ ಮತಗಳನ್ನು ಓಲೈಕೆ ಮಾಡಲು ಟಿಪ್ಪು ಸುಲ್ತಾನ ಜಯಂತಿಯನ್ನು ಆಚರಿಸಲು ಮುಂದಾಗಿದೆ. ಟಿಪ್ಪು ರಾಜ್ಯವನ್ನು ವಿಸ್ತರಿಸಲು ಹೋರಾಟ ಮಾಡಿದ್ದು, ರಾಜ್ಯ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸುತ್ತಿರುವದು ಅಪಹಾಸ್ಯವಾಗಿದೆ ಎಂದು ವ್ಯಂಗ್ಯ ಮಾಡಿದರು,

ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿಯ ಉಪಾಧ್ಯಕ್ಷ ಐನಂಡ ಜಪ್ಪು ಅಚ್ಚಪ್ಪ ಮಾತನಾಡಿ ಕೊಡಗಿನ ಎಲ್ಲ ಇತಿಹಾಸಕಾರರು ರಚನೆ ಮಾಡಿರುವ ಗ್ರಂಥಗಳಲ್ಲಿ ಟಿಪ್ಪು ಸುಲ್ತಾನನ ಬಗ್ಗೆ ಉಲ್ಲೇಖವಿದೆ. ಕೊಡಗಿನ ಜನತೆಗೆ ಆತ ಮಾಡಿರುವ ಹಿಂಸೆಗಳು ಭೀಕರತೆಯಿಂದ ಇದ್ದಿತ್ತು ಎಂಬದು ತಿಳಿದಿದೆ ಎಂದು ಹೇಳಿದರು.

ತಾಲೂಕು ಭಜರಂಗ ದಳದ ಸಂಚಾಲಕ ವಿವೇಕ್ ರೈ, ವಿಶ್ವ ಹಿಂದೂ ಪರಿಷತ್ ನಗರ ಸಂಚಾಲಕ ಪೊನ್ನಪ್ಪ ರ್ಯೆ, ರಾ.ಸ್ವಂ.ಸೇ ಸಂಘದ ನಗರ ಸಂಚಾಲಕ ಪುರುಷೋತ್ತಮ್, ವಕೀಲ ಟಿ.ಪಿ ಕೃಷ್ಣ, ಜಿಲ್ಲ್ಲಾ ಪ್ರಮುಖ ನಾಗೇಶ್, ಸಂಘದ ಅಭಿಮಾನಿಗಳು ಹಾಜರಿದ್ದರು.

ಶಾಂತಿ ಪೂಜೆ

ನಗರದ ಮುಖ್ಯ ರಸ್ತೆಯಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ದಿ. ಕುಟ್ಟಪ್ಪ ಅವರ ಹೆಸರಿನಲ್ಲಿ ಶಾಂತಿ ಪೂಜೆ ಮಾಡಿಸಲಾಯಿತು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ, ತಾಲೂಕು ಸಂಚಾಲಕ ಯೋಗೇಶ್, ಪ್ರಮುಖರಾದ ಎಂ.ಬಿ.ಚಂದ್ರನ್, ನಗರ ಸಂಚಾಲಕ ಸುರೇಶ್ ಮತ್ತು ಸಂಘಟನೆಯ ಸದಸ್ಯರು ಹಾಜರಿದ್ದರು.ಸುಂಟಿಕೊಪ್ಪದಲ್ಲಿ ಸ್ಮರಣೆ

ಸುಂಟಿಕೊಪ್ಪ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶ್ರೀ ರಾಮ ಮಂದಿರದಲ್ಲಿ ಒಗ್ಗೂಡಿ ಜಿಲ್ಲಾ ವಿಹೆಚ್‍ಪಿ ಮುಖಂಡ ಕುಟ್ಟಪ್ಪ ಅವರ ಹುತಾತ್ಮ ದಿನಾಚರಣೆಯನ್ನು ಆಚರಿಸಿದರು. ಬೆಳಿಗ್ಗೆ ರಾಮ ಮಂದಿರದಲ್ಲಿ ಸೇರಿದ ಹಿಂದೂ ಸಂಘಟನೆಯ ಪ್ರಮುಖರು ಕುಟ್ಟಪ್ಪ ಅವರ ಬಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡುವದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ವಿಹೆಚ್‍ಪಿ ನಗರ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಭಜರಂಗದಳ ನಗರ ಸಂಚಾಲಕ ವಿಘ್ನೇಶ್, ಹಿರಿಯರಾದ ಸಹದೇವನ್, ಗ್ರಾ.ಪಂ.ಸದಸ್ಯ ಸಿ.ಚಂದ್ರ, ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಂಜಿತ್ ಪೂಜಾರಿ, ನಾಗೇಶ್ ಪೂಜಾರಿ, ಧನುಕಾವೇರಪ್ಪ, ತೇಜಸ್, ಶಶಿ, ರಾಕೇಶ್, ಬಿ.ಎ.ರವಿ, ಧನುಕಾವೇರಪ್ಪ, ಶಶೀಂದ್ರ, ಹರೀಶ ಇತರರು ಇದ್ದರು.ಸಿದ್ದಾಪುರ

ಎರಡು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಟಿಪ್ಪು ಆಚರಣೆಯ ಸಂದರ್ಭ ಮೃತರಾದ ಹಿಂದು ಸಂಘಟನೆಯ ಮುಖಂಡ ಕುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಂಬಂಧ ಸಿದ್ದಾಪುರದ ಹಿಂದು ಪರ ಸಂಘಟನೆಗಳು ಸಿದ್ದಾಪುರದ ಅಯ್ಯಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕುಟ್ಟಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭ ಹಿಂದೂ ಸಂಘಟನೆಯ ಮುಖಂಡರುಗಳಾದ ಪ್ರವೀಣ್, ಪದ್ಮನಾಭ, ಅಪ್ಪು, ಮತ್ತಿತರರು ಹಾಜರಿದ್ದರು.ಬ್ರಹ್ಮಗಿರಿಯಲ್ಲಿ ಸ್ಮರಣೆ

ಬಂದ್ ಕರೆ ಹಿನ್ನೆಲೆಯಲ್ಲಿ ಭಾಗಮಂಡಲ ಸಂಪೂರ್ಣ ಬಂದ್ ಆಗಿತ್ತು. ಯಾವದೇ ವಾಹನಗಳ ಓಡಾಟವಿರಲಿಲ್ಲ. ನಿನ್ನೆ ದಿನ ಕ್ಷೇತ್ರಕ್ಕೆ ಆಗಮಿಸಿದ್ದ ಪ್ರವಾಸಿಗರು ಇಂದು ವಾಪಸ್ ತೆರಳಲಾಗದೆ ಇಲ್ಲಿಯೇ ಉಳಿಯುವಂತಾಯಿತು.

ಆಟೋ ಚಾಲಕರ ಸಂಘದವರು ಆಟೋ ಸಂಚಾರ ಸ್ಥಗಿತಗೊಳಿಸಿ ಬ್ರಹ್ಮಗಿರಿ ಬೆಟ್ಟ ಶ್ರೇಣಿಯ ಮೂಲಮಟ್ಟ ಎಂಬಲ್ಲಿಗೆ ಚಾರಣ ಕೈಗೊಂಡು ಬೆಟ್ಟದ ತುದಿಯಲ್ಲಿ ದಿ. ಕುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಭಾಸ್ಕರ, ಕಾರ್ಯದರ್ಶಿ ಸಿರಕಜೆ ಭವನ್ ಕುಮಾರ್, ಖಜಾಂಚಿ ಸುನಿಲ್, ಪಟ್ಟಮಾಡ ಸುಧೀರ್, ಪದಾಧಿಕಾರಿಗಳು, ಸದಸ್ಯರುಗಳು ಪಾಲ್ಗೊಂಡಿದ್ದರು.ನಾಪೆÉÇೀಕ್ಲು

ಟಿಪ್ಪು ಜಯಂತಿ ಸಂದರ್ಭದಲ್ಲಿ ಮಡಿಕೇರಿಯಲ್ಲಿ ನಡೆದ ಗಲಭೆಯಲ್ಲಿ ಹುತಾತ್ಮರಾದ ಕುಟ್ಟಪ್ಪ ಮತ್ತು ದೇವಟಿ ಪರಂಬುವಿನಲ್ಲಿ ಟಿಪ್ಪುವಿನಿಂದ ಹತರಾದ ಕೊಡಗಿನ ಜನರ ದಿವ್ಯಾತ್ಮಗಳಿಗೆ ನಾಪೆÇೀಕ್ಲು ಗಣಪತಿ ದೇವಳದಲ್ಲಿ ಸಂಘ ಪರಿವಾರದಿಂದ ಶಾಂತಿ ಪೂಜೆಯನ್ನು ನಡೆಸಿ ಸ್ಮರಿಸಲಾಯಿತು.

ಈ ಸಂದರ್ಭ ಕೊಡವ ಸಮಾಜದ ಕಾರ್ಯದರ್ಶಿ ಮಂಡಿರ ರಾಜಪ್ಪ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೇಲೇಟಿರ ಸಾಬು ನಾಣಯ್ಯ, ಆರ್‍ಎಸ್‍ಎಸ್ ಮುಖಂಡ ಕಂಗಾಂಡ ಜಾಲಿ ಪೂವಪ್ಪ, ಬಿಜೆಪಿ ಹಿರಿಯ ಮುಖಂಡ ಎಂ.ಎಂ.ನರೇಂದ್ರ, ಪಾಡಿಯಮ್ಮಂಡ ಮನು ಮಹೇಶ್, ಚೀಯಕಪೂವಂಡ ಗಣೇಶ್, ಶಿವಚಾಳಿಯಂಡ ಕಿಶೋರ್, ಕೊಡವ ಸಮಾಜದ ಖಜಾಂಚಿ ಅಪ್ಪಾರಂಡ ಸುದೀರ್ ಅಯ್ಯಪ್ಪ, ನಿರ್ದೇಶಕ ಕುಲ್ಲೇಟಿರ ಅಜಿತ್ ನಾಣಯ್ಯ, ಕೊಡವ ಸಮಾಜದ ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್, ಬಡ್ಡೀರ ಸಂಜು, ಕೇಟೋಳಿರ ಫಿರೋಜ್ ಗಣಪತಿ, ಇದ್ದರು.