ಕೂಡಿಗೆ, ಅ. 9: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಯಲ್ಲಿರುವ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಸ್ಥಗಿತ ಗೊಂಡಿದ್ದ ಮನೆ ನಿರ್ಮಾಣ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ.

552 ಕುಟುಂಬಗಳು ವಾಸಿಸುತ್ತಿರುವ ಈ ಕೇಂದ್ರಗಳಲ್ಲಿ ಕಳೆದ ಎರಡು ತಿಂಗಳ ಹಿಂದೆ ಸರಕಾರದಿಂದ ಹಣ ಮಂಜೂರಾಗದೆ ತಳಪಾಯ ಕಾಮಗಾರಿಯನ್ನು ಪೂರ್ಣಗೊಳಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿ¸ Àಲಾಗಿತ್ತು. ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರನ್ವಯ ಇಂದು ಮನೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಗೋಡೆ ಕಟ್ಟುವ ಕಾಮಗಾರಿ ನಡೆಸಲಾಗುತ್ತಿದೆ.

ಒಂದು ಮನೆ ನಿರ್ಮಾಣದ ವೆಚ್ಚ 3.91 ಲಕ್ಷ ರೂ ಆಗಿದ್ದು, ಹಣ ಬಿಡುಗಡೆಯ ಹಂತದಲ್ಲಿದೆ ಎಂದು ತಿಳಿದು ಬಂದಿದೆ. ಜಿಎಸ್‍ಟಿ, ಪರಿಣಾಮ ಮನೆಯ ಫಲಾನುಭವಿಗೆ 3.91 ಲಕ್ಷದಲ್ಲಿ 24,000 ರೂ ಜಿಎಸ್‍ಟಿಗೆ ಹೋಗಲಿದೆ. ಇನ್ನುಳಿದ ಹಣದಲ್ಲಿ ಕಾಮಗಾರಿ ನಡೆಸಲಾಗುತ್ತಿತ್ತು. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಮುಖೇನ ಸಮಾಜ ಕಲ್ಯಾಣ ಇಲಾಖೆ ಸರಕಾರಕ್ಕೆ ಹೆಚ್ಚುವರಿಯಾಗಿ ಒಂದು ಮನೆಗೆ 34,000 ರೂ ನೀಡುವಂತೆ ಪ್ರಸ್ತಾವನೆ ಕಳುಹಿಸ ಲಾಗಿದೆ.

ಇತರ ಸಂಘ ಸಂಸ್ಥೆಗಳು ಜಿಲ್ಲೆಯ ಆದಿವಾಸಿ ವಸತಿ ರಹಿತರಿಗೆ ಹಾಗೂ ಲೈನ್ ಮನೆಗಳಲ್ಲಿರುವ ವಸತಿ ರಹಿತರಿಗೆ ಹೆಚ್ಚುವರಿ ಮನೆಯನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿ, 1000 ವಸತಿ ರಹಿತರಿಗೆ ನಿವೇಶನ ನೀಡಲು ಬಸವನಹಳ್ಳಿ ಮತ್ತು ಮದಲಾಪುರ ಗ್ರಾಮಗಳಲ್ಲಿನ ಖಾಲಿ ಜಾಗದ ಪರಿಶೀಲನೆ ನಡೆಯುತ್ತಿದೆ. ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ಕುಟುಂಬಗಳಿಗೆ ಜನವರಿ ಅಥವಾ ಪೆಬ್ರವರಿ ಅಂತ್ಯದೊಳಗೆ ಎಲ್ಲಾ ಸೌಲಭ್ಯಗಳನ್ನೊಳಂಡಂತೆ ಹೊಸ ಮನೆಗಳು ಅವರಿಗೆ ವಾಸಕ್ಕೆ ದೊರಕಲಿವೆ ಎಂದು ತಿಳಿದು ಬಂದಿದೆ.

- ಕೆ. ಕೆ. ನಾಗರಾಜಶೆಟ್ಟಿ