*ಗೋಣಿಕೊಪ್ಪಲು, ಅ. 9 : ತೋಟ, ಗದ್ದೆಗಳನ್ನು ಹೊರಗಿನವರಿಗೆ ಮಾರದೆ ನಮ್ಮತನವನ್ನು ಉಳಿಸಿಕೊಳ್ಳಿ ಎಂದು ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.

ಹೊಸೂರು, ಕಾರ್ಮಾಡು, ಬೆಟ್ಟಗೇರಿ ಗ್ರಾಮದ ಕೊಡವ ಸಂಘ ವತಿಯಿಂದ ನಡೆದ ಕೈಲ್‍ಪೊಳ್ದ್ ಕ್ರೀಡಾಕೂಟದಲ್ಲಿ ಮಾತನಾಡಿದರು. ಕೊಡವ ಸಮಾಜ ಜನಾಂಗವನ್ನು ಉಳಿಸಿ ಬೆಳೆಸಬೇಕು. ಬಾಷೆ ಸಂಸ್ಕøತಿಯ ಬಗ್ಗೆ ಯುವಕರಲ್ಲಿ ಅಭಿಮಾನ ಮೂಡಿಸಬೇಕು ಎಂದು ಹೇಳಿದರು. ಈ ಸಂದರ್ಭ ಕೊಡವ ಸಂಘದ ಸ್ವಂತ ಕಟ್ಟಡಕ್ಕಾಗಿ ಅಧ್ಯಕ್ಷ ಪೂದ್ರಿಮಾಡ ಕಿಟ್ಟು ಬೋಪಣ್ಣ ಮತ್ತು ಸದಸ್ಯರ ಮನವಿ ಮೇರೆಗೆ 5 ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದರು. ವೇದಿಕೆಯಲ್ಲಿ ಹೊಸೂರು ಕೊಡವ ಸಂಘದ ಅದ್ಯಕ್ಷ ಕಿಟ್ಟು ಬೋಪಣ್ಣ, ಉಪಾಧ್ಯಕ್ಷ ಸುಭಾಷ್, ಕಾರ್ಯದರ್ಶಿ ಪಾಲಚಂಡ ಮನು ಮುತ್ತಣ್ಣ, ಗ್ರಾ.ಪಂ. ಅದ್ಯಕ್ಷ ಗೋಪಿ ಚಿಣ್ಣಪ್ಪ, ಜಿ.ಪಂ. ಮಾಜಿ ಸದಸ್ಯ ಧರ್ಮಜ ಉತ್ತಪ್ಪ, ಆರ್.ಎಂ.ಸಿ ಅಧ್ಯಕ್ಷ ಸುವಿನ್ ಗಣಪತಿ, ಸದಸ್ಯ ಗುಮ್ಮಟ್ಟಿರ ಕಿಲನ್ ಗಣಪತಿ, ಬಿ.ಜೆ.ಪಿ. ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಯುವಮೋರ್ಚ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ ಉಪಸ್ಥಿತರಿದ್ದರು.