ನಾಪೆÇೀಕ್ಲು, ಸೆ. 18: ನಾಪೆÇೀಕ್ಲು ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 24,92,720 ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನೂರಂಬಡ ಉದಯ ಶಂಕರ್ ಹೇಳಿದರು. ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ನೂರಂಬಡ ಉದಯ ಶಂಕರ್ ಮಾತನಾಡಿ ವಿವರಣೆ ನೀಡಿದರು.

ಸಂಘದಲ್ಲಿ 2412 ಜನ ಸದಸ್ಯರಿದ್ದು ಸಂಘವು 20,06,19181=12 ಠೇವಣಿಯನ್ನು ಹೊಂದಿದ್ದು. 86,02,202=00 ರೂ. ಪಾಲು ಬಂಡವಾಳವನ್ನು ಹೊಂದಿದೆ ಎಂದು ತಿಳಿಸಿದರು. ಸಂಘವು ಸದಸ್ಯರಿಗೆ ಪ್ರಶಕ್ತ ಸಾಲಿನಲ್ಲಿ 19 ಕೋಟಿ 25 ಲಕ್ಷ ಸಾಲವನ್ನು ನೀಡಿದ್ದು ಶೇ. 95 ರಷ್ಟು ವಸೂಲಾತಿಯಾಗಿದ್ದು, ಕೆ.ಸಿ.ಸಿ. ಸಾಲ ಶೇ. 99 ವಸೂಲಾತಿಯಾಗಿದ್ದು “ಎ” ತರಗತಿಯನ್ನು ಹೊಂದಿದೆ ಎಂದರು.

ಸಂಘದಿಂದ ಮದ್ಯಮಾವಧಿ ಕೃಷಿ ಸಾಲವನ್ನು ನೀಡಲಾಗುತ್ತಿದ್ದು, ಕೆರೆಗೆ ಗರಿಷ್ಠ 60 ಸಾವಿರ, ಗೋದಾಮು ಸಾಲ ಗರಿಷ್ಠ 5 ಲಕ್ಷ ಏಕರೆಗೆ 50 ಸಾವಿರದಂತೆ, ಕಾಂಕ್ರೀಟ್ ಕಣ ಸಾಲ 5 ಲಕ್ಷ ಏಕರೆಗೆ 50 ಸಾವಿರದಂತೆ, ಕೃಷಿ ಯಂತ್ರೋಪಕರಣ ಸಾಲ 6 ಲಕ್ಷ ಅಥವಾ ಕೋಟೇಷನ್‍ನ ಶೇ. 80 ರಷ್ಟು ಮತ್ತು ಕೃಷಿಯೇತರ ಸಾಲಗಳು, ವಾಹನ ಸಾಲ ಗರಿಷ್ಠ 6 ಲಕ್ಷ ಅಥವಾ ಕೋಟೇಷನ್‍ನ ಶೇ. 75 ರಷ್ಟು, ಜಾಮೀನು ಸಾಲ 15 ಸಾವಿರ, ಆಭರಣ ಸಾಲ ಗ್ರಾಂ.ಗೆ 2 ಸಾವಿರ ಮತ್ತು ಸ್ವಸಹಾಯ ಗುಂಪುಗಳಿಗೆ ಸಾಲವನ್ನು ನೀಡಲಾಗುವದು ಎಂದರು.

ಸಂಘವು ಮಾರಾಟ ಮಳಿಗೆ, ಅಕ್ಕಿಗಿರಣಿ, ಟ್ರ್ಯಾಕ್ಟರ್, ಗೊಬ್ಬರ ಮಾರಾಟ ಮಳಿಗೆಯನ್ನು ಹೊಂದಿದೆ ಎಂದ ಅವರು ಸಂಘದಲ್ಲಿ ಇ ಸ್ಟಾಂಪ್ ವ್ಯವಸ್ಥೆ ಇದ್ದು, ಲಾಕರ್ ವ್ಯವಸ್ಥೆಯನ್ನು ಹೊಂದಿದೆ ಎಂದರು. ಈ ಸಂದರ್ಭ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಡಿಗ್ರಿ ಮುಂತಾದ ಸ್ನಾತಕೋತ್ತರ ಪದವಿಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಲಾಯಿತು.

ಸಂಘದ ಹೊಸ ಕಟ್ಟಡವನ್ನು ಸುಮಾರು 80 ಲಕ್ಷ ರೂಗಳಲ್ಲಿ ಮೊದಲ ಅಂತಸ್ತು ಸೇರಿ ಮೇಲೆ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದ್ದು ಕಾಮಗಾರಿಯನ್ನು ಒಂದು ವರ್ಷದೊಳಗೆ ಮುಗಿಸಲು ಗುತ್ತಿಗೆದಾರನಿಗೆ ತಿಳಿಸಲಾಗಿದ್ದು, ಸದಸ್ಯರುಗಳು ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಈ ವರ್ಷ ಸಂಘದಿಂದ ನೀಡುವ ಡಿವಿಡೆಂಡ್ ಅನ್ನು ಬಿಟ್ಟು ಕೊಟ್ಟು ಸಹಕರಿಸುವಂತೆ ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಕಾಂಡಂಡ ಜಯ ಕರುಂಬಯ್ಯ, ಅರೆಯಡ ಅಶೋಕ, ಪಾಡಿಯಮ್ಮಂಡ ಮುರುಳಿಧರ್, ಕುಲ್ಲೇಟಿರ ಅರುಣ ಬೇಬ, ಕೇಟೋಳಿರ ಹರೀಶ್ ಪೂವಯ್ಯ, ಹೆಚ್.ಎ. ಬೊಳ್ಳು, ಕೇಲೆಟೀರ ಮಾಲ ಬೋಪಯ್ಯ, ಕುಂಡ್ಯೋಳಂಡ ಕವಿತ ಮುತ್ತಣ್ಣ, ಬಿದ್ದಾಟಂಡ ರಾಧ, ಕಾರ್ಯ ವಿರ್ವಾಹಣಾಧಿಕಾರಿ ಶಿವಚಾಳಿಯಂಡ ವಿಜು ಪೂಣಚ್ಚ. ಇದ್ದರು.