*ಗೋಣಿಕೊಪ್ಪಲು, ಸೆ. 18: ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ ರೂ. 95.93 ಲಕ್ಷ ಲಾಭ ಗಳಿಸುವ ಮೂಲಕ ಪ್ರಗತಿ ಹೊಂದಿದೆ ಎಂದು ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾಹಿತಿ ನೀಡಿದರು.

ತಾ. 21 ರಂದು ಮಹಾಸಭೆ ನಡೆಯಲಿದ್ದು, 2016-17ನೇ ಸಾಲಿನಲ್ಲಿ ಬ್ಯಾಂಕ್ ಗ್ರಾಹಕರ ಉಪಯೋಗಕ್ಕಾಗಿ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದೆ. ಈ ಮೂಲಕ ಬ್ಯಾಂಕಿನ ಚಟುವಟಿಕೆಯ ಸಂಪನ್ಮೂಲ ಕೇಂದ್ರವಾದ ಠೇವಣಿಗಳನ್ನು ಸಂಘವು ಹಲವು ವಿಧದ ಮುಖಾಂತರ ಸಂಗ್ರಹಿಸಿ, ತಾ. 31.3.2017ರ ಅಂತ್ಯಕ್ಕೆ 2044.89 ಲಕ್ಷ ಠೇವಣಿ ಸಂಗ್ರಹಿಸಲಾಗಿದೆ. ಸದಸ್ಯರ ಮತ್ತು ಪಾಲು ಹಣವಾಗಿ 1069 ಸದಸ್ಯರ ರೂ. 104.54 ಲಕ್ಷ ಪಾಲು ಬಂಡವಾಳವಿದೆಯೆಂದು ಮಾಹಿತಿ ನೀಡಿದ್ದಾರೆ.

ರಾಜ್ಯ ಸರಕಾರದ ಯೋಜನೆ ಯಾದ ಅಲ್ಪಾವಧಿ ಬೆಳೆಸಾಲದಲ್ಲಿ ರೂ. 3 ಲಕ್ಷದೊಳಗಿನ ಸಾಲಗಾರರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 3 ಲಕ್ಷದಿಂದ 5 ಲಕ್ಷದವರೆಗಿನ ಸಾಲಕ್ಕೆ 10.75 ಬಡ್ಡಿದರದಲ್ಲಿ 642.07 ಲಕ್ಷ ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಕೃಷಿ ಸಾಲ ಶೇ. 99ರಷ್ಟು ವಸೂಲಾತಿ ಆಗಿದೆ.

2016-17ನೇ ಸಾಲಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ರೂ. 546.79 ಲಕ್ಷ ಅಲ್ಪಾವಧಿ ಫಸಲು ಸಾಲವನ್ನು ಪಡೆದುಕೊಂಡು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಲಾಗಿದೆ.

ಅಲ್ಲದೇ ಸಂಘದಿಂದ ಸದಸ್ಯರು ಪಡೆದುಕೊಂಡ ಬೆಳೆ ಸಾಲ ಮನ್ನಾ 326 ಸದಸ್ಯರಿಗೆ ಪ್ರಯೋಜನಕಾರಿ ಯಾಗಿದ್ದು, ಬ್ಯಾಂಕಿನಲ್ಲಿ 1 ಕೋಟಿ 53 ಲಕ್ಷ ಸಾಲ ಮನ್ನಾ ಮಾಡಲಾಗಿದೆ.

ಕೃಷಿಯೇತರ ಗೊಬ್ಬರ ಸಾಲವಾಗಿ ರೂ. 59.52 ಲಕ್ಷ, 156.45 ಲಕ್ಷ ಕಾಫಿ ಮತ್ತು ಕರಿಮೆಣಸು ಸಾಲ, ರೂ. 659.79 ಲಕ್ಷ ಆಭರಣ ಸಾಲ, ಪಿಗ್ಮಿ ಠೇವಣಿ ಆಧರಿತ ನಗದು ಸಾಲ ರೂ. 568.95 ಲಕ್ಷ, ವಾಹನ ಸಾಲ ರೂ. 45.9 ಲಕ್ಷ ಇತರೆ ಸಾಲಗಳಾಗಿ ರೂ. 81.62 ಲಕ್ಷಗಳನ್ನು ನೀಡಲಾಗಿದೆ.

ಬ್ಯಾಂಕಿನ ಮೂಲಕ ಸ್ವಸಹಾಯ ಸಂಘವನ್ನು ಅನುಷ್ಠಾನಗೊಳಿಸ ಲಾಗಿದೆ. ಈ ಮೂಲಕ ಸ್ವಸಹಾಯ ಸಂಘಕ್ಕೆ ರೂ. 88.50 ಲಕ್ಷ ಸಾಲ ಇದುವರೆಗೆ ವಿತರಿಸಲಾಗಿದೆ ಎಂದರು.

ರೈತರ ಆರೋಗ್ಯ ವಿಮಾ ಯೋಜನೆಯಲ್ಲಿ 972 ಮಂದಿ ಸದಸ್ಯರು ಆರೋಗ್ಯ ವಿಮೆಗೆ ನೊಂದಣಿಯಾಗಿದ್ದಾರೆ. ನೂತನವಾಗಿ ಸದಸ್ಯತ್ವ ನೊಂದಾಣಿಗೆ ಮತ್ತು ನವೀಕರಿಸಿಕೊಳ್ಳುವವರಿಗೆ ಸಂಘದ ಮೂಲಕ ರೂ. 300 ನೀಡಲಾಗುತ್ತಿದೆ ಎಂದು ಹೇಳಿದರು.

2017ನೇ ಸಾಲಿನ 10ನೇ ತರಗತಿ ಮತ್ತು ದ್ವೀತೀಯ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ, ಕ್ರೀಡಾಪಟುಗಳಿಗೆ ಪ್ರೋತ್ಸಾಹಕರ ಬಹುಮಾನ, ಅತೀ ಹೆಚ್ಚು ಗೊಬ್ಬರ ಮತ್ತು ಹತ್ಯಾರು ಖರೀದಿಸಿದ ಸದಸ್ಯರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ, ಉತ್ತಮ ವ್ಯವಹಾರ ಮಾಡುವ ಸ್ವಸಹಾಯ ಸಂಘಗಳಿಗೆ, ಅತೀ ಹೆಚ್ಚು ಪಿಗ್ಮಿ ಠೇವಣಿ ಸಂಗ್ರಹಿಸಿದ ಸಂಗ್ರಹಗಾರರಿಗೆ ಪ್ರೋತ್ಸಾಹಕರ ಬಹುಮಾನ ಮಹಾಸಭೆಯಲ್ಲಿ ನೀಡಲಾಗುವದು.

ಈ ಸಂದÀರ್ಭ ಉಪಾಧ್ಯಕ್ಷ ಸದಾ ಅಪ್ಪಚ್ಚು, ನಿರ್ದೇಶಕರುಗಳಾದ ಬೋಜಮ್ಮ, ಕೊಲ್ಲಿರ ಧರ್ಮಜ ಉತ್ತಪ್ಪ, ಜಪ್ಪೆಕೊಡಿ ಸುಭಾಷಿಣಿ, ಜೆ.ಕೆ. ಸುಬ್ರಮಣಿ, ಕಾಳಪ್ಪ, ಡಾಲು, ದಿನೇಶ್, ಶ್ಯಾಮ್ ಚಂದ್ರ ಮತ್ತು ಕಾರ್ಯದರ್ಶಿ ಕೃಷ್ಣ ಉಪಸ್ಥಿತರಿದ್ದರು.