ಶ್ರೀಮಂಗಲ, ಸೆ. 13: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯ ವ್ಯಾಪಾರಿಗಳಾದ ಸೌರವ್ ಬಂಕ ಹಾಗೂ ಜತೀನ್ ಷಾ ಅವರಿಗೆ ಸೇರಿದ ರೊಸ್ ಮೇರಿ ಇಂಟರ್‍ನ್ಯಾಷನಲ್, ಕಾವೇರಿ ಎಂಟರ್‍ಪ್ರೈಸಸ್ ಹಾಗೂ ಬಾಲಾಜಿ ಎಂಟರ್‍ಪ್ರೈಸಸ್ ಮೂಲಕ ವಿಯೆಟ್ನಾಮ್ ದೇಶದಿಂದ ಆಮದು ಮಾಡಿಕೊಂಡ ಕರಿಮೆಣಸನ್ನು ಎಪಿಎಂಸಿ ಆವರಣದೊಳಗೆ ತಂದು ಕೊಡಗಿನ ಕರಿಮೆಣಸಿನೊಂದಿಗೆ ಬೆರೆಸಿ ಕೇರಳ ಹಾಗೂ ಕೊಡಗಿನ ಸುಂಠಿಕೊಪ್ಪಕ್ಕೆ ಮಾರಾಟ ಮಾಡಿರುವ ಆರೋಪದ ಪ್ರಕರಣದ ವಿರುದ್ಧ ಪೊಲೀಸ್ ದೂರು ದಾಖಲಾದ ಬೆನ್ನಲ್ಲೆ ಮಂಗಳವಾರ ರಾತ್ರಿ ಈ ವ್ಯಾಪಾರಿಗಳಿಗೆ ಸೇರಿದ ಇನ್ನಿತರ ಗೋದಾಮುಗಳನ್ನು ಪೊಲೀಸರು ಪರಿಸೀಲಿಸಿದರು.ಈಗಾಗಲೇ ಈ ವ್ಯಾಪಾರಿಗಳಿಗೆ ಸೇರಿದ ಎಪಿಎಂಸಿಯ ಒಂದು ಗೋದಾಮಿನಲ್ಲಿ ಸಂಗ್ರಹಿಸಿದ್ದ ಕರಿಮೆಣಸು ಕಲಬೆರಕೆ ಪುಡಿ ಎಂದು ಶಂಕೆಯಿಂದ 26 ಟನ್ ತೂಕದ ತಲಾ 25 ಕೆ.ಜಿ .ತೂಕವಿರುವ 1045 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕಾಳುಮೆಣಸು ಪುಡಿಗೆ ಹತ್ತಿ ಬೀಜದ ಪುಡಿಯನ್ನು ಕಲಬೆರಕೆ ಮಾಡಲಾಗುತ್ತಿದೆ ಎಂಬ ಆರೋಪದಡಿ ಗೋದಾಮಿನಲ್ಲಿ ಮೂರು ಹತ್ತಿ ಬೀಜದ ಪುಡಿ ಎಂದು ಶಂಕಿಸಲಾದ ಚೀಲಗಳನ್ನು ವಶಪಡಿಸಿ ಕೊಳ್ಳಲಾಗಿದೆ.

(ಮೊದಲ ಪುಟದಿಂದ) ಇವುಗಳ ಮಾದರಿಗಳನ್ನು ಪೊಲೀಸರು ಪರೀಕ್ಷೆ ಗಾಗಿ ಸಂಗ್ರಹಿಸಿದ್ದು, ಈ ಸಾಮಾಗ್ರಿ ಗಳನ್ನು ಅಮಾನತ್ತು ಮಾಡಿಕೊಂಡು ಗೋದಾಮಿಗೆ ಬೀಗ ಜಡಿದು ತಮ್ಮ ವಶಕ್ಕೆ ಪಡೆದಿದ್ದಾರೆ.

ಇದಲ್ಲದೆ, ಈ ಮೇಲಿನ ವ್ಯಾಪಾರಿಗಳು ತಮ್ಮ ಇತರೆ ಗೋದಾಮುಗಳನ್ನು ಬೀಗ ಹಾಕಿ ಕೊಡಗಿನ ಹೊರಗೆ ತೆರಳಿದ್ದ ಹಿನ್ನೆಲೆಯಲ್ಲಿ ಗೋದಾಮನ್ನು ತೆರೆಯಲು ಸಾಧ್ಯವಾಗದೆ ಪೊಲೀಸ್ ಮೊಕದ್ದಮೆ ದಾಖಲಾದ ತಾ.11ರಿಂದ ಗೋದಾಮುಗಳಿಗೆ ಪೊಲೀಸ್ ಕಾವಲನ್ನು ಇರಿಸಲಾಗಿತ್ತು. ಮಂಗಳವಾರ ರಾತ್ರಿ ಈ ಸಂಸ್ಥೆಗಳ ಮಾಲೀಕರಾದ ಜತೀನ್ ಷಾ ಅವರನ್ನು ಪೊಲೀಸರು ಸ್ಥಳಕ್ಕೆ ಕರೆಯಿಸಿ ಗೋದಾಮುಗಳನ್ನು ಪರಿಸೀಲನೆ ನಡೆಸಿದರು. ಈ ಸಂದರ್ಭ ಗೋದಾಮಿನೊಳಗೆ ಕರಿಮೆಣಸು ತುಂಬಲು ಹಲವು ಬ್ರಾಂಡ್‍ಗಳ ಹೆಸರಿಗಳನ್ನು ನಮೂದಿಸಿದ ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡರು. ಅಲ್ಲದೆ, ಉತ್ತರ ಪ್ರದೇಶ ರಾಜ್ಯಕ್ಕೆ ಸರಬರಾಜುದಾರ ರೊಬ್ಬರ ವಿಳಾಸ ನಮೂದಿಸಿದ ಚೀಲಗಳು ಸಹ ಪತ್ತೆಯಾಗಿವೆ. ಇವೆಲ್ಲರ ಚೀಲಗಳ ಮೇಲೆ ಪ್ಯಾಕಿಂಗ್ ಮಾಡಿದ ಮತ್ತು ಮಾರುಕಟ್ಟೆ ಮಾಡುತ್ತಿರುವ ಯಾವದೇ ಸಂಸ್ಥೆಯ ಹೆಸರು ವಿಳಾಸ ಇಲ್ಲದಿರುವದು ಗೋಚರಿಸಿದೆ.

ಗೋದಾಮು ಪರಿಶೀಲನೆ ವೇಳೆ ಬೆಳೆಗಾರರು ಹಾಗೂ ವ್ಯಾಪಾರಿ ಜತೀನ್ ಷಾ ನಡುವೆ ವಾಗ್ವಾದ ನಡೆಯಿತು. ಈ ಸಂದರ್ಭ ಪರಿಸ್ಥಿತಿ ವಿಕೋಪಕ್ಕೆ ತೆರಳುವದನ್ನು ಮನಗಂಡ ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ.ರಾಜು ಹಾಗೂ ಉಪನಿರೀಕ್ಷಕ ಹೆಚ್.ವೈ.ರಾಜು ಅವರು ಮಧ್ಯಪ್ರವೇಶಿಸಿ, ಪರಿಶೀಲನೆ ಹಾಗೂ ತನಿಖೆ ವೇಳೆ ಪ್ರಶ್ನಿಸಲು ಅವಕಾಶ ಇರುವುದಿಲ್ಲ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸಂಸದರೊಂದಿಗೆ ವಿಚಾರ ಪ್ರಸ್ತಾಪ

ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಈ ವೇಳೆ ಸಂಪರ್ಕಿಸಿದ ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಕೂಡಲೇ ಜಿಲ್ಲೆಯ ಬೆಳೆಗಾರರ ಹಿತಕ್ಕೆ ಧಕ್ಕೆ ತಂದಿರುವ ಗೋಣಿಕೊಪ್ಪ ಎಪಿಎಂಸಿಯ ಕರಿಮೆಣಸು ವ್ಯಾಪಾರಿಗಳ ಪರವಾನಗಿ ರದ್ದು ಗೊಳಿಸಬೇಕೆಂದು ಒತ್ತಾಯಿಸಿದರು. ಇದಲ್ಲದೆ, ಕೇಂದ್ರ ಸರ್ಕಾರ ಕೂಡಲೇ ಮಧÀ್ಯಪ್ರವೇಶಿಸಿ ಕರಿಮೆಣಸು ಆಮದಿನ ಮೇಲೆ ತೆರಿಗೆಯನ್ನು ಹಾಕಿ, ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಕ್ಕೆ ಭಾರತ ನೀಡಿರುವ ಮುಕ್ತ ತೆರಿಗೆ ವಿನಾಯಿತಿಯನ್ನು ಕೆಲವು ವ್ಯಾಪಾರಿಗಳು ಮತ್ತು ವಿಯೆಟ್ನಾಮ್ ದೇಶ ದುರುಪಯೋಗ ಪಡಿಸಿಕೊಂಡು ಈ ದೇಶಗಳ ಮೂಲಕ ಕರಿಮೆಣಸನ್ನು ಭಾರತಕ್ಕೆ ತರುತ್ತಿರುವದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವರ ಗಮನ ಸೆಳೆಯುವದಾಗಿ ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ.

ಮೈಸೂರಿನಲ್ಲಿ ಎಪಿಎಂಸಿ ಗೋದಾಮು ನೀಡದಂತೆ ಒತ್ತಾಯ: ಗೋಣಿಕೊಪ್ಪ ಎಪಿಎಂಸಿಯಲ್ಲಿ ವ್ಯಾಪಾರ ಮಾಡುತ್ತಿರುವ ಸೌರವ್ ಬಂಕ ಹಾಗೂ ಜತೀನ್ ಷಾ ಅವರ ಮೇಲೆ ಸ್ಥಳೀಯ ಬೆಳೆಗಾರರು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ತಮ್ಮ ವ್ಯಾಪಾರ ವಹಿವಾಟನ್ನು ಮೈಸೂರು ನಿರೀಕ್ಷಕ ಪಿ.ಕೆ.ರಾಜು ಹಾಗೂ ಉಪನಿರೀಕ್ಷಕ ಹೆಚ್.ವೈ.ರಾಜು ಅವರು ಮಧ್ಯಪ್ರವೇಶಿಸಿ, ಪರಿಶೀಲನೆ ಹಾಗೂ ತನಿಖೆ ವೇಳೆ ಪ್ರಶ್ನಿಸಲು ಅವಕಾಶ ಇರುವುದಿಲ್ಲ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸಂಸದರೊಂದಿಗೆ ವಿಚಾರ ಪ್ರಸ್ತಾಪ

ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಈ ವೇಳೆ ಸಂಪರ್ಕಿಸಿದ ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಕೂಡಲೇ ಜಿಲ್ಲೆಯ ಬೆಳೆಗಾರರ ಹಿತಕ್ಕೆ ಧಕ್ಕೆ ತಂದಿರುವ ಗೋಣಿಕೊಪ್ಪ ಎಪಿಎಂಸಿಯ ಕರಿಮೆಣಸು ವ್ಯಾಪಾರಿಗಳ ಪರವಾನಗಿ ರದ್ದು ಗೊಳಿಸಬೇಕೆಂದು ಒತ್ತಾಯಿಸಿದರು. ಇದಲ್ಲದೆ, ಕೇಂದ್ರ ಸರ್ಕಾರ ಕೂಡಲೇ ಮಧÀ್ಯಪ್ರವೇಶಿಸಿ ಕರಿಮೆಣಸು ಆಮದಿನ ಮೇಲೆ ತೆರಿಗೆಯನ್ನು ಹಾಕಿ, ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಕ್ಕೆ ಭಾರತ ನೀಡಿರುವ ಮುಕ್ತ ತೆರಿಗೆ ವಿನಾಯಿತಿಯನ್ನು ಕೆಲವು ವ್ಯಾಪಾರಿಗಳು ಮತ್ತು ವಿಯೆಟ್ನಾಮ್ ದೇಶ ದುರುಪಯೋಗ ಪಡಿಸಿಕೊಂಡು ಈ ದೇಶಗಳ ಮೂಲಕ ಕರಿಮೆಣಸನ್ನು ಭಾರತಕ್ಕೆ ತರುತ್ತಿರುವದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವರ ಗಮನ ಸೆಳೆಯುವದಾಗಿ ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ.

ಮೈಸೂರಿನಲ್ಲಿ ಎಪಿಎಂಸಿ ಗೋದಾಮು ನೀಡದಂತೆ ಒತ್ತಾಯ: ಗೋಣಿಕೊಪ್ಪ ಎಪಿಎಂಸಿಯಲ್ಲಿ ವ್ಯಾಪಾರ ಮಾಡುತ್ತಿರುವ ಸೌರವ್ ಬಂಕ ಹಾಗೂ ಜತೀನ್ ಷಾ ಅವರ ಮೇಲೆ ಸ್ಥಳೀಯ ಬೆಳೆಗಾರರು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ತಮ್ಮ ವ್ಯಾಪಾರ ವಹಿವಾಟನ್ನು ಮೈಸೂರು ಅವಕಾಶ ನೀಡುವದಿಲ್ಲ. ಈ ಬಗ್ಗೆ ರಾಜಕೀಯ ರಹಿತವಾಗಿ ಜನಪ್ರತಿನಿಧಿ ಗಳೊಂದಿಗೆ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಆಮದು ಕರಿಮೆಣಸು ತಡೆಗಟ್ಟಲು ಅಗತ್ಯ ಕ್ರಮಕ್ಯಗೊಳ್ಳಲು ಮನವಿ ಸಲ್ಲಿಸುವದಾಗಿ ತಿಳಿಸಿದರು.

ಈ ಸಂದರ್ಭ ತಹಶೀಲ್ದಾರರಾದ ಗೋವಿಂದ ಸ್ವಾಮಿ, ಎಪಿಎಂಸಿ ಸಹಾಯಕ ನಿರ್ದೇಶಕ ಯೋಗಾನಂದ, ಗೋಣಿಕೊಪ್ಪ ಎಪಿಎಂಸಿ ಕಾರ್ಯದರ್ಶಿ ಹಂಪಣ್ಣ, ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣಿರ ವಿಜಯ್ ನಂಜಪ್ಪ, ಸಲಹೆಗಾರ ಚೆಪ್ಪುಡೀರ ಶೆರಿ ಸುಬ್ಬಯ್ಯ, ಮಾಜಿ ಕಾರ್ಯದರ್ಶಿಗಳಾದ ಜಮ್ಮಡ ಮೋಹನ್ ಮಾದಪ್ಪ, ಯುಕೊ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಮಚ್ಚಮಾಡ ಅನೀಶ್ ಮಾದಪ್ಪ, ವಕೀಲ ಸಣ್ಣುವಂಡ ರತನ್, ಅಳಮೇಂಗಡ ಮುರುಳಿ ಮುತ್ತಣ್ಣ, ಕೊಟ್ಟಂಗಡ ಜೋಯಪ್ಪ, ತೀತರಮಾಡ ಗಣೇಶ್ ಮತ್ತಿತರು ಹಾಜರಿದ್ದರು. ಗೋದಾಮು ಪರಿಶೀಲನೆ ಸಂದರ್ಭ ಡಿವೈಎಸ್‍ಪಿ ನಾಗಪ್ಪ, ಗೋಣಿಕೊಪ್ಪ ವೃತ್ತ ನೀರಿಕ್ಷಕ ರಾಜು, ಉಪನಿರೀಕ್ಷಕ ಹೆಚ್.ವೈ. ರಾಜು, ಪೊನ್ನಂಪೇಟೆ ಉಪನಿರೀಕ್ಷಕ ಮಹೇಶ್, ಉಪತಹಶೀಲ್ದಾರ ರಾಧಕೃಷ್ಣ ಮತ್ತಿತರರು ಹಾಜರಿದ್ದರು.