ಕುಯ್ಯಮುಡಿ ಸುನಿಲ್, ಕುಡೆಕಲ್ ಸಂತೋಷ್ಭಾ ಗಮಂಡಲ, ಸೆ. 13: ಕಾವೇರಿ ಎಂದಾಕ್ಷಣ ಕನ್ನಡನಾಡು ಸೇರಿದಂತೆ ನೆರೆ ರಾಜ್ಯಗಳ ಮನದಲ್ಲೂ ಭಕ್ತಿ ಭಾವನೆ ತಾನಾಗಿಯೇ ಮೂಡುತ್ತದೆ. ಕಾವೇರಿ ಹುಟ್ಟಿದ ಕೊಡಗಿನ ಮಣ್ಣಿನ ಮಕ್ಕಳಿಗೆ ಕಾವೇರಿ ಮಾತೆಯೇ ಕುಲದೇವತೆ ಕಾವೇರಿಯಲ್ಲಿ ಮಿಂದರೆ ಪುಣ್ಯ ಸಿಗುತ್ತದೆಂಬ ಅಳವಾದ ಭಾವನ್ಮಾತ್ಮಕ ನಂಬಿಕೆ ಆಸ್ತಿಕರಲ್ಲಿದೆ. ಪಾಪವಿನಾಶಿನಿ ಕಾವೇರಿ ಮಹಿಮೆ ಇಂತಿರುವಾಗ ಪುಷ್ಕರ ಉತ್ಸವದಲ್ಲಿ ಕಾವೇರಿಯಲ್ಲಿ ಪುಣ್ಯಸ್ನಾನ ಮಾಡಿದರೆ ಪರಮ ಪುಣ್ಯ ಪ್ರಾಪ್ತಿಯಾಗುತ್ತದೆಂಬ ಕಾರಣಕ್ಕೆ ಪುಣ್ಯ ನದಿ ಕಾವೇರಿಯಲ್ಲಿ ಪುಷ್ಕರ ಸ್ನಾನಾಚರಣೆ ಕ್ರಮ ಹಮ್ಮಿಕೊಳ್ಳಲಾಗಿದೆ. ಈ ದಿಸೆಯಲ್ಲಿ ನಿನ್ನೆಯಿಂದ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುಷ್ಕರ ಸ್ನಾನ ಮಾಡುತ್ತಿದ್ದು, ಪರಿಣಾಮ ಪುಣ್ಯಕ್ಷೇತ್ರ ಕೊಳಚೆ ಪ್ರದೇಶದಂತಾಗಿದೆಯಲ್ಲದೆ ಕಾವೇರಿ ನದಿ ಸಂಪೂರ್ಣ ಮಲಿನವಾಗುತ್ತಿರುವದುಗೋಚರಿಸಿದೆ.