ವೀರಾಜಪೇಟೆ, ಸೆ. 9: ಆಧ್ಯಾತ್ಮಿಕ ಚಿಂತನೆ ಧಾರ್ಮಿಕ ಆಚರಣೆಯಿಂದ ಅಂತರಂಗದ ಮನ ಶುದ್ಧಿಯಾಗಲಿದೆ. ಇದರಿಂದ ಸಮಾಜ ಸನ್ಮಾರ್ಗದಲ್ಲಿ ಮುಂದುವರೆಯುವದರೊಂದಿಗೆ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಾಧ್ಯವಾಗಲಿದೆ ಎಂದು ಅರಮೇರಿ ಕಳಂಚೇರಿ ಮಠದ ಶಾಂತಾ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ವೀರಾಜಪೇಟೆಯ ಗಾಂಧಿ ನಗರದ ಗಣಪತಿ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ವಾಮೀಜಿ ಮಾತನಾಡಿದರು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪ್ರಾಚೀನ ಕಾಲದಲ್ಲಿ ಮನೆ ಮನೆಯಲ್ಲಿ ವಿಘ್ನೇಶ್ವರನನ್ನು ಪೂಜಿಸುವಂತಹ ವಾಡಿಕೆ ಇತ್ತು. ನಂತರದ ದಿನಗಳಲ್ಲಿ ಪ್ರೀತಿ ವಾತ್ಸಾಲ್ಯ ಪರಸ್ಪರ ಅನ್ಯೋನ್ಯತೆಯನ್ನು ಹಾಗೂ ಸಮಾಜದಲ್ಲಿ ಒಗ್ಗಟ್ಟನ್ನು ಸಾಧಿಸಲು ಬಾಲಗಂಗಾಧರ್ ತಿಲಕ್ ಗಲ್ಲಿ-ಗಲ್ಲಿಗಳಲ್ಲಿ ಗಣೇಶೋತ್ಸವವನ್ನು ಆಚರಣಗೆ ತಂದಿದ್ದು, ಇಂದಿಗೂ ಪ್ರಚಲಿತವಾಗಿದೆ. ಇದೊಂದು ಧಾರ್ಮಿಕ ಆಚರಣೆಯಲ್ಲಿ ಒಗ್ಗೂಡಿಸುವ ಉತ್ತಮ ಕಾರ್ಯ ಎಂದರು. ಜನತಾದಳದ ಜಿಲ್ಲಾ ಆಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ದೇಶದಲ್ಲಿ ಏಕತೆಯನ್ನು ಸಾಧಿಸಲು ಇಂತಹ ಉತ್ಸವ ಉತ್ತೇಜನ ನೀಡಲಿದೆ. ಹಬ್ಬದ ಆಚರಣೆಗಳು ಕೇವಲ ಆಚರಣೆಯಾಗಿ ಉಳಿಯದೆ ಹಿಂದಿನ ಸಂಸ್ಕøತಿ ಪದ್ಧತಿ ಪರಂಪರೆಯನ್ನು ಬಿಂಬಿಸು ವಂತಾಗಬೇಕು ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ವಕೀಲರು ಗಳಾದ ಡಿ.ಸಿ. ಧ್ರುವ, ಸಿ.ಎಸ್. ಜಗದೀಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಸನ್ಮಾನಿತರಾದ ಅಂತರಾಷ್ಟ್ರೀಯ ಖ್ಯಾತ ರ್ಯಾಲಿ ಪಟು ಜಗತ್ ನಂಜಪ್ಪ ಹಾಗೂ ಉದ್ಯಮಿ ಚೋಪಿ ಜೋಸೆಫ್ ಮಾತನಾಡಿದರು.

ವೇದಿಕೆಯಲ್ಲಿ ಜಯ ಕರ್ನಾಟಕ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ಕಾಫಿ ಬೆಳೆಗಾರ ಅಪ್ಪನೆರವಂಡ ಜಾನ್ಸಿ ಕಿರಣ್

ಸಮಿತಿ ಸಂಸ್ಥಾಪಕ ಮಾಳೇಟಿರ ಕಾಶಿ ಕುಂಞಪ್ಪ, ಪಟ್ಟಣ ಪಂಚಾಯಿತಿ ಸದಸ್ಯೆ ರತಿ ಬಿದ್ದಪ್ಪ, ಶಂಕರ್ ಜ್ಯುವೆಲ್ಲರ್ಸ್ ಮಾಲೀಕ ಎಸ್.ಹೆಚ್. ಮಂಜುನಾಥ್ ಉಪಸ್ಥಿತರಿದ್ದರು.

ಉತ್ಸವ ಸಮಿತಿಯ ಅಧ್ಯಕ್ಷ ಪಿ.ಎ. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿಯ ಎಂ.ಎಂ. ಶಶಿಧರ್ ನಿರೂಪಿಸಿದರು.

ಸಮಾರಂಭದ ನಂತರ ಕೇರಳದ ಕಣ್ಣಾನೂರಿನ “ಅಮ್ಮಾ ಇವೆಂಟ್ಸ್” ತಂಡದವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.