ಸಿದ್ದಾಪುರ, ಸೆ. 9: ಕಳೆದ ಎರಡು ವಾರಗಳ ಹಿಂದೆ ಸಿದ್ದಾಪುರದ ಮಾಲ್ದಾರೆ ಗ್ರಾಮದ ಮೈಲಾದಪುರ ದಲ್ಲಿ ಜಾನುವಾರಗಳ ಮೇಲೆ ಹುಲಿ ಧಾಳಿ ನಡೆಸಿ ಸಾಯಿಸಿದ ಹಿನ್ನೆಲೆಯಲ್ಲಿ ಹುಲಿಯನ್ನು ಹಿಡಿಯಲು ಬೋನ್ ಅಳವಡಿಸಲಾಗಿದೆ. ಮೈಲಾದಪುರದ ಬಿ.ಬಿ.ಟಿ.ಸಿ ಕಂಪೆನಿಗೆ ಸೇರಿದ ಕಾಫಿ ತೋಟಗಳಲ್ಲಿ ಮೇಯುತ್ತಿದ್ದ ಜಾನುವಾರಗಳ ಮೇಲೆ ಹುಲಿ ಧಾಳಿ ನಡೆಸಿ ಜಾನುವಾರಗಳು ಮೃತ ಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಹುಲಿಯ ಚಲನವಲನವನ್ನು ಕಂಡು ಹಿಡಿಯಲು ಅರಣ್ಯ ಇಲಾಖೆಯಿಂದ ಮಾಲ್ದಾರೆಯ ಮೈಲಾದಪುರ ಕಾಫಿ ತೋಟಗಳಲ್ಲಿ 5 ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸ ಲಾಗಿತ್ತು. ಕ್ಯಾಮೆರಾ ಅಳವಡಿಸಿದ ಬಳಿಕ ಹುಲಿಯ ಚಲನ ವಲನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಲ್ಲದೇ ಮಾಲ್ದಾರೆ ಘಟ್ಟದಳ್ಳ ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷವಾಗಿರುವದನ್ನು ಕಂಡ ತೋಟ ಕಾರ್ಮಿಕರು ಭಯ ಭೀತರಾಗಿದ್ದರು. ಶಾಲೆಗೆ ತೆರಳುವ ಮಕ್ಕಳು ಕೂಡ ಭಯದಿಂದಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನೆÀ್ನಲೆಯಲ್ಲಿ ಮಾಲ್ದಾರೆ ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸೇರಿ ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಈ ಹಿನೆÀ್ನಲೆಯಲ್ಲಿ ಇದೀಗ ತಿತಿಮತಿ ವಲಯ ಎ.ಸಿ.ಎಫ್ ಶ್ರೀಪತಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಧಿಕಾರಿ ಅಶೋಕ್, ಉಪ ವಲಯ ಅರಣ್ಯಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಆರ್.ಆರ್.ಟಿ. ತಂಡದವರು ಸೇರಿ ಮೈಲಾದಪುರ ಕಾಫಿ ತೋಟದೊಳಗೆ ಬೋನ್ ಗಳನ್ನು ಅಳವಡಿಸಿದ್ದು, ಹುಲಿ ಸೆರೆಗೆ ಎಲ್ಲಾ ಸಿದ್ಧತೆ ಕೈಗೊಂಡಿದ್ದಾರೆ.

-ಎ.ಎನ್. ವಾಸು