ವೀರಾಜಪೇಟೆ, ಸೆ. 9: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಇಲ್ಲಿನ ಗಡಿಯಾರ ಕಂಬದ ಬಳಿ ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಂತಕರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಸರಕಾರ ಹಂತಕರನ್ನು ಪತ್ತೆ ಹಚ್ಚಿ ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.

ಬಂಧನಕ್ಕೆ ಆಗ್ರಹ

ಸಿದ್ದಾಪುರ: ಆರೋಪಿಗಳನ್ನು ಕೂಡಲೆ ಪತ್ತೆಹಚ್ಚಿ ಕಾನೂನು ರೀತಿಯ ಶಿಕೆÀ್ಷ ನೀಡಬೇಕೆಂದು ಸಿ.ಪಿ.ಐ ಪಕ್ಷದ ಮುಖಂಡ ಸುನಿಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೌರಿ ಲಂಕೇಶ್ ಹತ್ಯೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಹೀನ ಕೃತ್ಯವನ್ನು ಖಂಡಿಸಿದ್ದು, ಬರ್ಬರ ಹತ್ಯೆಗೈದವರನ್ನು ಪೊಲೀಸ್ ಇಲಾಖೆಯು ಕೂಡಲೆ ಬಂಧಿಸಬೇಕೆಂದ ಅವರು ಕಲ್ಬುರ್ಗಿ ಹತ್ಯೆಯಾಗಿ ಮೂರು ವರ್ಷಗಳಾದರೂ ಕೂಡ ಇದುವರೆಗೂ ರಾಜ್ಯ ಸರ್ಕಾರ ಆರೋಪಿಗಳನ್ನು ಬಂಧಿಸಲು ವಿಫಲವಾಗಿದ್ದು ಇದರ ವಿರುದ್ಧ ಯಾವದೇ ಹೋರಾಟಕ್ಕೂ ಬೆಂಬಲ ನೀಡುವದಾಗಿ ಹೇಳಿದರು.

ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯüಕ್ಷ ಬಷಿರ್ ಮಾತನಾಡಿ ಪ್ರಗತಿಪರ ಚಿಂತಕರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದು ಇವರ ಮೇಲೆ ನಿರಂತರ ಧಾಳಿ ನಡೆಸುತ್ತಿದ್ದು, 70ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಕೆಲವು ದಿನಗಳಲ್ಲಿ ಈ ರೀತಿಯ ಕೊಲೆಯಾಗಿರುವದು ಖಂಡನೀಯ ಎಂದರು.

ಗೋಷ್ಠಿಯಲ್ಲಿ ಸಾಲಿಡಾರಿಟಿ ಯೂತ್ ಮೂಮೆಂಟ್‍ನ ಸಂಚಾಲಕ ಬಶಿರ್ ಅಹಮ್ಮದ್, ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಉಪಸ್ಥಿತರಿದ್ದರು.