ಮಡಿಕೇರಿ, ಸೆ. 9: ಕಳೆದ 98 ವರ್ಷಗಳಿಂದ ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 99ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗಿದೆ.

ಮಂಟಪ ಸಮಿತಿಯ ಅಧ್ಯಕ್ಷರಾಗಿ ಕೆ.ಎಸ್. ಆನಂದ್ ಅವರು ಕಾರ್ಯನಿರ್ವಹಿಸುತ್ತಿದ್ದು, ಮಂಟಪದಲ್ಲಿ ಈ ಬಾರಿ ‘ಶ್ರೀಕೃಷ್ಣನಿಂದ ದೇವೇಂದ್ರನ ಗರ್ವಭಂಗ’ ಎಂಬ ಕಥಾ ಸಾರಾಂಶವನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಆನಂದ್ ಅವರು ಮಾಹಿತಿ ನೀಡಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ಚಾರ್ಲಿ ಮತ್ತು ತಂಡದವರು ಪ್ಲಾಟ್‍ಫಾರಂನ್ನು ನಿರ್ಮಿಸಲಿದ್ದಾರೆ. ಮಂಟಪಕ್ಕೆ ಲೈಟಿಂಗ್ ಬೋರ್ಡ್, ಧ್ವನಿವರ್ಧಕ, ಸ್ಟುಡಿಯೋ ಲೈಟ್ಸ್, ಟ್ರ್ಯಾಕ್ಟರ್ ಸೆಟ್ಟಿಂಗ್ಸ್, ಧ್ವನಿಮುದ್ರಣವನ್ನು ಮಡಿಕೇರಿಯ ಪುಣ್ಯ ಫ್ಯಾಬಿರಿಕೇಶನ್ಸ್‍ನ ಪ್ರಮೋದ್ ಮತ್ತು ನಂದಕುಮಾರ್ ಬಳಗದವರು ವ್ಯವಸ್ಥೆ ಮಾಡಲಿದ್ದಾರೆ. 12 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಪುಣ್ಯ ಫ್ಯಾಬಿರಿಕೇಶನ್ಸ್‍ನವರೆ ಕಲಾಕೃತಿಗಳನ್ನು ತಯಾರಿಸಲಿದ್ದಾರೆ.

ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದ್ದು, ಜನಾಕರ್ಷಣೆಯ ಜೊತೆಯಲ್ಲಿ ಬಹುಮಾನಕ್ಕೂ ಪೈಪೋಟಿ ನೀಡಲಾಗುವದು ಎಂದು ಆನಂದ್ ತಿಳಿಸಿದ್ದಾರೆ.

-ಉಜ್ವಲ್ ರಂಜಿತ್