ಮಡಿಕೇರಿ, ಸೆ. 9: ಮಾತೆ ಮರಿಯಮ್ಮ ಅವರ ಜನ್ಮ ದಿನವನ್ನು ಮಡಿಕೇರಿ ನಗರದ ಸಂತ ಮೈಕಲರ ಚರ್ಚ್‍ನಲ್ಲಿ ಆಚರಿಸಲಾಯಿತು.

ಚರ್ಚ್‍ನಲ್ಲಿ ಆಯೋಜಿಸಿದ ವಿಶೇಷ ಪ್ರಾರ್ಥನೆಯಲ್ಲಿ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಬಗೆ ಬಗೆ ಪುಷ್ಪಗಳನ್ನು ಮಾತೆ ಮರಿಯಮ್ಮ ಅವರ ಪುತ್ಥಳಿಗೆ ಸಮರ್ಪಿಸಿದರು.