ಕುಶಾಲನಗರ, ಸೆ. 9: ನದಿಗಳ ಸಂರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಅರಿವು, ಜಾಗೃತಿ ಮೂಡಿಸಬೇಕಾಗಿದೆ. ಮುಂದಿನ ಪೀಳಿಗೆಗೆ ಸಮೃದ್ಧವಾದ ಭೂಮಿಯನ್ನು ಹಸ್ತಾಂತರಿಸ ಬೇಕಾಗಿರುವದು ನಮ್ಮ ಕರ್ತವ್ಯವಾಗಿದೆ ಎಂದು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಕರೆ ನೀಡಿದ್ದಾರೆ.

20 ದಿನಗಳ ಕಾಲ ನದಿ ಸಂರಕ್ಷಣೆ ನಿಟ್ಟಿನಲ್ಲಿ ಆಂದೋಲನ ಹಮ್ಮಿಕೊಂಡಿ ರುವ ಅವರು ಶುಕ್ರವಾರ ಮೈಸೂರಿಗೆ ಆಗಮಿಸಿದ ಸಂದರ್ಭ ಕೆಆರ್‍ಎಸ್‍ನ ಹಿನ್ನೀರು ಪ್ರದೇಶ ಮೀನಾಕ್ಷಿಪುರಂ ನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಭಾರತದ ನದಿಗಳು ದುಸ್ಥಿತಿಗೆ ತಲುಪಿವೆ. ವರ್ಷಾವಧಿ ಹರಿಯುತ್ತಿದ್ದ ನದಿಗಳು ಮಳೆಗಾಲದಲ್ಲಿ ಮಾತ್ರ ಹರಿ ಯುವ ರೀತಿ ಪರಿವರ್ತನೆಗೊಳ್ಳುತ್ತಿದೆ. ಈ ನಡುವೆ ಪ್ರವಾಹ ಹಾಗೂ ಬರಗಾಲಗಳು ಸಾಲು ಸಾಲಾಗಿ ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಜೀವನದಿ ಕಾವೇರಿ ಸೇರಿದಂತೆ ಎಲ್ಲಾ ನದಿಗಳಲ್ಲಿ ಶೇ.60 ಭಾಗದಷ್ಟು ನೀರಿನ ಕೊರತೆ ಉಂಟಾಗಿದೆ. ಮೂರನೆ ಎರಡರಷ್ಟು ಭಾಗದ ನಗರಗಳಲ್ಲಿ ದಿನನಿತ್ಯ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕುಡಿಯುವ ನೀರಿಗಾಗಿ ಭಾರೀ ಬೆಲೆ ತೆರಬೇಕಾದ ಸಂದರ್ಭ ಒದಗಲಿದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯ ರಾಜ್ಯಗಳ ನಡುವೆ ತಲೆದೋರಿರುವ ಜಲವ್ಯಾಜ್ಯವನ್ನು ಮಾತುಕತೆ ಮೂಲಕ ಬಗೆಹರಿಸಬೇಕಾಗಿದೆ. ಈಶಾ ಫೌಂಡೇಶನ್ ಮೂಲಕ ರಾಷ್ಟ್ರೀಯ ಜಲನೀತಿ ರೂಪಿಸುವ ನಿಟ್ಟಿನಲ್ಲಿ ಕರಡು ಪ್ರತಿ ರಚಿಸಿದ್ದು ಅದನ್ನು ಸರಕಾರಗಳ ಗಮನಕ್ಕೆ ತರಲಾಗುವದು ಎಂದರು. ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನದ ತಮಿಳುನಾಡು-ಕರ್ನಾಟಕ ರಾಜ್ಯಗಳ ಸಂಯೋಜಕ ಸ್ವಾಮಿ ಕಾಳೀಶ್ವಾರಾನಂದ ಸರಸ್ವತಿ, ಯುಕ್ತೇಶ್ವರಾನಂದಪುರಿ ಸ್ವಾಮೀಜಿ, ರಾಜ್ಯ ಸಂಚಾಲಕ ಚಂದ್ರಮೋಹನ್, ನದಿ ಜಾಗೃತಿ ಸಮಿತಿಯ ಪ್ರಮುಖ ರಾದ ಡಿ.ಆರ್. ಸೋಮಶೇಖರ್, ವಿನೋದ್, ಹರ್ಷ, ಕನ್ನಿ ಕಾವೇರಿ ಟ್ರಸ್ಟ್ ಪ್ರಮುಖ ಚೇಂದಂಡ ಪೂವಯ್ಯ ಅವರುಗಳು ಗಿಡವೊಂದನ್ನು ನೀಡುವ ಮೂಲಕ ರ್ಯಾಲಿಗೆ ಶುಭ ಹಾರೈಸಿದರು.ಮಡಿಕೇರಿ, ಸೆ. 9: ಹೈಟೆಕ್ ಮಾರುಕಟ್ಟೆ ಕಾಮಗಾರಿಯು ಪ್ರಾರಂಭಗೊಂಡು ಸುಮಾರು 4 ವರ್ಷಗಳು ಕಳೆದಿದ್ದು, ಇದೀಗ ಸ್ಥಗಿತಗೊಂಡು ಸುಮಾರು 3 ತಿಂಗಳು ಕಳೆದಿದೆ. ಪ್ರತಿಬಾರಿಯು ಕಾಟಚಾರಕ್ಕೆ ಎಂಬಂತೆ ಕೆಲವು ದಿನಗಳು ತೋರ್ಪಡಿಕೆಗೆ ಕೆಲಸ ನಿರ್ವಹಿಸಿ ನಂತರದ ದಿನಗಳಲ್ಲಿ ಸ್ಥಗಿತಗೊಳಿಸುತ್ತಿ ರುವದು ಮಾಮೂಲಿಯಾಗಿದೆ. ಸದರಿ ಮಾರುಕಟ್ಟೆ ಪ್ರದೇಶವು ಕೆಸರಿನ ಕೊಂಪೆಂತಾಗಿದ್ದು, ಗ್ರಾಹಕರಿಗೂ ಮತ್ತು ವ್ಯಾಪಾರಸ್ಥರಿಗೂ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಜನಪ್ರತಿನಿಧಿಗಳಾದ ಜನತೆಯು ನಮ್ಮನ್ನೆ ತಪ್ಪಿತಸ್ಥರಂತೆ ನೋಡುವಂತಾ ಗಿದೆ ಎಂದು ನಗರಸಭಾ ಸದಸ್ಯ ಹಾಗೂ ಎಸ್‍ಡಿಪಿಐ ನಗರ ಅಧ್ಯಕ್ಷ ಕೆ.ಜೆÉ. ಪೀಟರ್ ಪ್ರತಿಕ್ರಿಯಿಸಿದ್ದಾರೆ.