ನಾಪೆÇೀಕ್ಲು, ಸೆ. 4: ಫಿ.ಎಫ್.ಐ, ಕೆ.ಎಫ್.ಡಿ.ಗಳ ನಿಷೇಧ - ಕೊಡಗಿನಲ್ಲಿ ಅಗತ್ಯವಿರದ ಟಿಪ್ಪು ಜಯಂತಿ - ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂಗಳ ಧಮನ ರೀತಿ... ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಕಿಡಿಕಾರಿದ ಬಿಜೆಪಿ ಪ್ರಮುಖರು ದೇವಾಲಯ ಅಪವಿತ್ರ ಸಂಬಂಧ ತಾ. 11ರಂದು ನಾಪೋಕ್ಲುವಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವದೆಂದು ಎಚ್ಚರಿಸಿದರು.ದೇವಾಲಯದಲ್ಲಿ ದನದ ಕಾಲು ನೇತು ಹಾಕಿದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ, ನಾಪೋಕ್ಲು ಪಟ್ಟಣದಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಶಾಸಕರುಗಳೂ ಸೇರಿದಂತೆ ಹಲವು ಪ್ರಮುಖರು ಆಕ್ರೋಶದ ಮಾತುಗಳನ್ನಾಡಿದರು.

ದೇವಳದಲ್ಲಿ ಗೋ-ಮಾಂಸ ಹಾಕುವದು. ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದಿರುವದು ಮುಖ್ಯ ಮಂತ್ರಿ ಸಿದ್ದಾರಾಮಯ್ಯ ಜನತೆಗೆ ನೀಡಿರುವ ಮತ್ತೊಂದು ಭಾಗ್ಯವೇ? ಎಂದು ವೀರಾಜಪೇಟೆ ವಿಧಾನ ಸಭಾಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ ಹಿಂದೂ ಸಮಾಜವನ್ನು ನಿರಂತರ ಶೋಷಣೆ ಮಾಡುವ, ಕಿರುಕುಳ ನೀಡುವ ಕೆಲಸವಾಗುತ್ತಿದೆ. ಹಿಂದೂ ಸಮಾಜ ಏನು ಮಾಡಿದರೂ ಸಹಿಸಿಕೊಳ್ಳತ್ತದೆ ಎಂಬ ಭ್ರಮೆ ಅವರಲ್ಲಿದೆ. ದೈವನೆಲೆಗಳನ್ನು ನಿರಂತರವಾಗಿ ಅಪವಿತ್ರಗೊಳಿಸುವ ಕಾರ್ಯವಾಗುತ್ತಿದೆ. ಹೆಣ್ಣು ಮಕ್ಕಳು ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ, ಇದು ಮುಖ್ಯಮಂತ್ರಿಗಳ ಮತ್ತೊಂದು ಭಾಗ್ಯವಾಗಿರಬೇಕು ಎಂದು ವ್ಯಂಗ್ಯವಾಡಿದ ಅವರು, ಪಿ.ಎಫ್.ಐ, ಕೆ.ಎಫ್.ಡಿ, ಎಸ್.ಡಿ.ಪಿ.ಐ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವದು ಮುಖ್ಯಮಂತ್ರಿಗಳ ವಿನೂತನ ಭಾಗ್ಯವೇ? ಎಂದು ಪ್ರಶ್ನಿಸಿದರು.

ಕೊಡಗು ಜಿಲ್ಲೆಯಲ್ಲಿ ಗೋ-ಹತ್ಯೆ ಮತ್ತು ಗೋ-ಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ಆದರೂ ಇದು ಜಿಲ್ಲೆಯಲ್ಲಿ

(ಮೊದಲ ಪುಟದಿಂದ) ನಿರಂತರವಾಗಿ ನಡೆಯುತ್ತಿದೆ. ಅಧಿಕಾರ ಯಾರಿಗೂ ಶಾಶ್ವÀÀತವಲ್ಲ. ಪೆÇಲೀಸ್ ಇಲಾಖೆ ಸಮಾಜದ, ಜನಸಾಮಾನ್ಯರ ರಕ್ಷಣೆ ಮಾಡಬೇಕು. ಇದು ಕಾನೂನಿನ ಚೌಕಟ್ಟಿನಲ್ಲಿರಬೇಕು ಎಂದು ಸಲಹೆ ನೀಡಿದರು. ಹಿಂದೂ ಸಮಾಜವನ್ನು ಕೆಣಕುವ ಕೆಲಸ ಯಾರಿಗೂ ಬೇಡ. ಎಲ್ಲರೂ ಒಂದೇ. ಸ್ವಾಭಿಮಾನಿ ಜೀವನ ಮಾಡುವ ಗುರಿ ನಮ್ಮದು. ಇವರನ್ನು ಏನು ಬೇಕಾದರೂ ಮಾಡಬಹುದು ಎನ್ನುವ ಕಲ್ಪನೆ ಬೇಡ ನಾವೂ ಜಾಗೃತರಾಗಿದ್ದೇವೆ ಎಂದು ಎಚ್ಚರಿಸಿದರು.

ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ತಪ್ಪಿದ್ದಸ್ಥರನ್ನು ಕೂಡಲೇ ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಪುನರುಚ್ಚರಿಸಿದರು.

ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಘಟನೆ ನಡೆದು ಒಂದು ವಾರವಾದರೂ ಕಿಡಿಗೇಡಿಗಳ ಪತ್ತೆಗೆ ಸರಕಾರ ಯಾವದೇ ಕ್ರಮಕೈಗೊಂಡಿಲ್ಲ. ಉಸ್ತುವಾರಿ ಸಚಿವರು ಕೂಡ ಒಂದು ಸಭೆಯನ್ನೂ ಕರೆದಿಲ್ಲ. ಇದರಿಂದ ಸರಕಾರಕ್ಕೆ ಹಿಂದೂಗಳ ಮೇಲಿರುವ ಅಭಿಮಾನ ಎಷ್ಟಿದೆ ಎಂಬದು ತಿಳಿಯುತ್ತದೆ. ಕೊಡಗಿನವರು ಶಾಂತಿ ಪ್ರೀಯರು ಆದರೆ ತೊಂದರೆಯಾದರೆ ಯಾರೂ ಸಹಿಸುವದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಟಿಪ್ಪು ಜಯಂತಿಯನ್ನು ಹುಟ್ಟು ಹಾಕಿದರು. ಟಿಪ್ಪುವಿನ ಹೆಸರು ಹೇಳಿದವರು ಉಳಿದ ಇತಿಹಾಸ ಇಲ್ಲ. ಮುಖ್ಯಮಂತ್ರಿಗಳಿಗೂ ದುರ್ಗತಿ ಕಾದಿದೆ ಎಂದರು. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಮಾಡಿ ಬಂಧಿಸಿ. ಜನರ ತಾಳ್ಮೆ ಪರೀಕ್ಷೆಗೆ ಇದು ಕಾಲವಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಮಾತನಾಡಿ, ಭಾರತ ದೇಶದಲ್ಲಿ ಶಾಂತಿ, ನೆಮ್ಮದಿ, ಗೌರವವನ್ನು ಹಿಂದೂಗಳು ಉಳಿಸಿಕೊಂಡು ಬಂದಿದ್ದಾರೆ. ಎಲ್ಲರೂ ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು ಎಂಬ ವಿಶಾಲ ಮನೋಭಾವನೆ ಹೊಂದಿದವರಾಗಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಿಂದೂಗಳ ಶ್ರದ್ಧಾ ಕೇಂದ್ರಗಳು, ದೇವಾಲಯ, ಪೂಜಾ ಕೇಂದ್ರ, ಗೋ-ಹತ್ಯೆಯಂತಹ ಅಪವಿತ್ರ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಇದು ಖಂಡನೀಯ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಪ್ರಾಸ್ತಾವಿವಾಗಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳನ್ನು ಧಮನ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೊಲೆ ಪಾತಕಿಗಳಿಗೆ ಕ್ಲೀನ್ ಚೀಟ್ ನೀಡುತ್ತಿದ್ದಾರೆ ಎಂದು ಆರೋಪಿಸಿದ, ಮುಂದಿನ ಸೋಮವಾರದ ಒಳಗೆ ಆರೋಪಿಗಳನ್ನು ಬಂಧಿಸದಿದ್ದರೆ, ಸೋಮವಾರ ಜಿಲ್ಲೆಯ ಜನತೆಯ ಸಹಕಾರದೊಂದಿಗೆ ನಾಪೆÇೀಕ್ಲುವಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

ಹಳೇತಾಲೂಕು ರಸ್ತೆಯ ಪೆಟ್ರೋಲ್ ಬಂಕ್‍ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ನಾಡ ಕಚೇರಿವರೆಗೆ ಸಾಗಿ ಕಂದಾಯ ಪರಿವೀಕ್ಷರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವದರ ಮೂಲಕ ಮುಕ್ತಾಯಗೊಂಡಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯರಾದ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ಮಾಜಿ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಮುಖಂಡರಾದ ಬಲ್ಲಾರಂಡ ಮಣಿ ಉತ್ತಪ್ಪ, ಕೇಟೋಳಿರ ಹರೀಶ್ ಪೂವಯ್ಯ, ಬಿದ್ದಾಟಂಡ ಬಿ.ಬೆಳ್ಯಪ್ಪ, ರಮೇಶ್ ಚಂಗಪ್ಪ, ಪಾಂಡಂಡ ನರೇಶ್, ಉದಿಯಂಡ ಸುರ ನಾಣಯ್ಯ, ಕಲಿಯಂಡ ಸುನಂದ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಜಗದೀಶ್ ಮತ್ತಿತರರಿದ್ದರು.

ಮಡಿಕೇರಿ ಡಿವೈಎಸ್ಪಿ ಸುಂದರ್ ರಾಜ್ ನೇತೃತ್ವದಲ್ಲಿ ಮಡಿಕೇರಿ ಗ್ರಾಮಂತರ ಠಾಣಾ ವೃತ್ತ ನಿರೀಕ್ಷಕ ಪ್ರದೀಪ್, ಠಾಣಾಧಿಕಾರಿಗಳಾದ ನಂಜುಂಡ ಸ್ವಾಮಿ, ಸದಾಶಿವ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದರು.