ಮಡಿಕೇರಿ, ಸೆ. 4: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಸಾಂಪ್ರದಾಯಿಕ ಕೈಲ್‍ಮುಹೂರ್ತ ಆಚರಿಸಲಾಯಿತು. ಶ್ರೀಮಂಗಲ ಕೊಡವ ಹಿತರಕ್ಷಣ ಬಳಗ ಕ್‍ಗ್ಗಟ್ಟ್‍ನಾಡ್ ಪೊನ್ನಂಪೇಟೆ ವತಿಯಿಂದ ಕೈಲ್‍ಪೆÇಳ್ದ್ ಅನ್ನು ಸಾಂಪ್ರದಾಯಿಕವಾಗಿ ಆಯುಧಪೂಜೆ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ, ಸೆ. 4: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಸಾಂಪ್ರದಾಯಿಕ ಕೈಲ್‍ಮುಹೂರ್ತ ಆಚರಿಸಲಾಯಿತು.ಶ್ರೀಮಂಗಲ ಕೊಡವ ಹಿತರಕ್ಷಣ ಬಳಗ ಕ್‍ಗ್ಗಟ್ಟ್‍ನಾಡ್ ಪೊನ್ನಂಪೇಟೆ ವತಿಯಿಂದ ಕೈಲ್‍ಪೆÇಳ್ದ್ ಅನ್ನು ಸಾಂಪ್ರದಾಯಿಕವಾಗಿ ಆಯುಧಪೂಜೆ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಿಯರಿಗೆ ಪ್ರತಿಜ್ಞ ವಿಧಿಯನ್ನು ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ ಭೋದಿಸಿ ಕೋವಿಯನ್ನು ಹಸ್ತಾಂತರಿಸಿದರು.

ನಂತರ ಸಾಮೂಹಿಕವಾಗಿ ವಾಹನಗಳಿಗೂ ಪೂಜೆಯನ್ನು ಮಾಡಲಾಯಿತು. ಪೊನ್ನಂಪೇಟೆ ಕೊಡವ ಸಮಾಜದಿಂದ ಪೊನ್ನಂಪೇಟೆಯ ಮುಖ್ಯ ಬೀದಿಗಳಲ್ಲಿ ಅಲಂಕರಿಸಿದ ವಾಹನ ಮೆರವಣಿಗೆಯನ್ನು ನಡೆಸಲಾಯಿತು. ಹಬ್ಬದ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ನಡೆಸಲಾಯಿತು. ಕೊಡವ ಹಿತರಕ್ಷಣ ಬಳಗದ ವತಿಯಿಂದ ಪ್ರಪ್ರಥಮವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನರು ಹಾಜರಿದ್ದರು.

* ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ನೆಮ್ಮಲೆ ಗ್ರಾಮ ಕೆ.ಕೆ.ಆರ್.ನ ಕಾವೇರಿ ಕೊಡವ ಸಾಂಸ್ಕøತಿಕ ಕೇಂದ್ರದಲ್ಲಿ ಕೈಲ್‍ಪೊಳ್ದ್ ಪ್ರಯುಕ್ತ ಕೃಷಿ ಪರಿಕರ ಹಾಗೂ ಕೋವಿ ಸೇರಿದಂತೆ ಸಾಂಪ್ರದಾಯಿಕವಾಗಿ ಆಯುಧ ಪೂಜೆ ಸಲ್ಲಿಸಲಾಯಿತು.

ಆಟೋಟ ಸ್ಪರ್ಧೆಯನ್ನು ಕೋವಿಯಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕೇಂದ್ರದ ಅಧ್ಯಕ್ಷ ಮೀದೇರಿರ ಕೆ. ಸೋಮಯ್ಯ ಉದ್ಘಾಟಿಸಿದರು. ಈ ಸಂದರ್ಭ ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ತೆಂಗಿನಕಾಯಿಗೆ ಕಲ್ಲು ಹೊಡೆದು ಒಡೆಯುವದು, ಓಡುವದು, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸ ಲಾಗಿತ್ತು.

(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಕೇಂದ್ರದ ಉಪಾಧ್ಯಕ್ಷ ಮುಲ್ಲೇಂಗಡ ಕೆ. ಮುದ್ದಪ್ಪ, ಕಾರ್ಯದರ್ಶಿ ಚೆಟ್ಟಂಗಡ ಅರಸು ಅಚ್ಚಪ್ಪ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ಆಹಾರ ಪದ್ದತಿಯ ಸಹಬೋಜನ ಏರ್ಪಡಿಸಲಾಗಿತ್ತು.

ಕುಶಾಲನಗರ

ಕುಶಾಲನಗರದ ವ್ಯಾಪ್ತಿಯಲ್ಲಿ ಕೈಲ್‍ಪೊಳ್ದ್ ಹಬ್ಬ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಸುತ್ತಮುತ್ತ ಗ್ರಾಮಗಳಾದ ಗುಡ್ಡೆಹೊಸೂರು, ನಂಜರಾಯಪಟ್ಟಣ, ವಾಲ್ನೂರು, ಹಾರಂಗಿ, ಕೂಡಿಗೆ ವ್ಯಾಪ್ತಿಯಲ್ಲಿ ಹಬ್ಬ ಆಚರಣೆ ನಡೆಯಿತು.

ಸ್ಥಳೀಯ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅವರು ತಮ್ಮ ನಿವಾಸದಲ್ಲಿ ಪುರಾತನ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸುವದರೊಂದಿಗೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕೈಲ್‍ಪೊಳ್ದ್ ಆಚರಿಸಿದರು.

ಅಪ್ಪಣ್ಣ ದಂಪತಿಗಳು ಪೂರ್ವಜರು ಬಳಸುತ್ತಿದ್ದ ಹಳೆಯ ಪರಿಕರಗಳನ್ನು ತಮ್ಮ ಮನೆಯಂಗಳದಲ್ಲಿ ಪ್ರದರ್ಶನಕ್ಕಿಟ್ಟಿದ್ದರು.

ಚಿನ್ನದ ಗಟ್ಟಿಯ ಲೇಪನವುಳ್ಳ ಪೀಚೆ ಕತ್ತಿ, ಪಡೆಬಾಳು ಚಿನ್ನಾಭರಣಗಳನ್ನು ಸಂಗ್ರಹಿಸಿಡಲು ಬಳಸುತಿದ್ದ ಪೊಂದಾಯ ಚಂದೂಕಗಳು, ಪೂರ್ವಜರು ಭಕ್ತಿ ಪೂರ್ವಕವಾಗಿ ಬಳಸುತ್ತಿದ್ದ ವಿಭೂತಿ ಮೊದಲಾದ ಪವಿತ್ರ ಸಾಮಗ್ರಿಗಳನ್ನು ಇಡುತ್ತಿದ್ದ ಕುರಿಕೂಟ್, ತೂಕ್‍ಬೊಳಕ್, ಮಣ್ಣಿನ ದೀಪ, ಪೂರ್ವಜರು ಅವರ ಆತ್ಮ ರಕ್ಷಣೆಗೆ ಬಳಸುತ್ತಿದ್ದ ಚಳ್ಳೆ ಮತ್ತಿತರ ಸಾಮಗ್ರಿಗಳು, ಪಾನಿ ಸೇರು ತೂಕದ ಬೊಟ್ಟುಗಳು, ಮಕ್ಕಳ ತೊಟ್ಟಿಲು, ಅನ್ನ ಬಸಿಯಲು ಬಳಸುತ್ತಿದ್ದ ಕೂಚಟ್ಟಿ ತೂತುಗಳುಳ್ಳ ಮಣ್ಣಿನ ಮಡಿಕೆ, ಮರದಿಂದ ಎಂಬ ಪಾದುಕೆ, ಬಿಸಿನೀರು ತೆಗೆಯಲು ಬಳಸುತ್ತಿದ್ದ ಬಾಚೆರಟಿ (ಸೌಟು) ಜೇನು ಮಡಿಕೆ ಹೀಗೆ ನೂರಾರು ಬಗೆಬಗೆಯ ಪೂರ್ವಜರು ಬಳಸುತ್ತಿದ್ದ ಪರಿಕರಗಳನ್ನು ವೀಕ್ಷಿಸುವ ಅವಕಾಶವನ್ನು ಅಪ್ಪಣ್ಣ ಅವರು ಕಲ್ಪಿಸಿದ್ದರು. ಕೋವಿ, ಕತ್ತಿ, ಪ್ರಾಚೀನ ಆಯುಧಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ವಂಶದ ಮೂಲ ಪುರುಷರಿಗೆ ನೈವೇದ್ಯಗಳನ್ನು ಅರ್ಪಿಸುವ ಕಾರ್ಯ ನಡೆಯಿತು.

ಈ ಸಂದರ್ಭ ಮಾತನಾಡಿದ ಬಾಚರಣಿಯಂಡ ಅಪ್ಪಣ್ಣ, ವ್ಯವಸಾಯ ಉಪಕರಣಗಳನ್ನು ಕೃಷಿ ಚಟುವಟಿಕೆಯ ನಂತರ ಅವುಗಳನ್ನು ತೊಳೆದು ಸಂರಕ್ಷಿಸುವದು ಮತ್ತು ಕೃಷಿ ಚಟುವಟಿಕೆಗಳಿಗೆ ಬಳಸಿದ ಜಾನುವಾರುಗಳನ್ನು ಪೂಜಿಸುವದು, ಕೃಷಿಗೆ ಶ್ರಮಿಸಿದ ಮಂದಿ ಸಂಭ್ರಮಿಸುವ ಸಂತೋಷಕೂಟವಾಗಿರುವ ಈ ಕೈಲ್‍ಪೊಳ್ದ್ ವಿಶೇಷ ಅರ್ಥ ಪಡೆದುಕೊಂಡಿದೆ ಎಂದು ಹಬ್ಬದ ಇತಿಹಾಸದ ಬಗ್ಗೆ ವಿವರಿಸಿದರು. ಬಳಿಕ ಅಪ್ಪಣ್ಣ ಮತ್ತು ಅವರ ಪತ್ನಿ ರಾಣು ಅಪ್ಪಣ್ಣ ತೆಂಗಿನಕಾಯಿಗೆ ಗುಂಡು ಹೊಡೆಯುವ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡರು.

ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಅವರ ಮನೆಯಲ್ಲಿ ಕೈಲ್‍ಪೊಳ್ದ್ ಅಂಗವಾಗಿ ಆಯುಧಗಳಿಗೆ ಪೂಜಾ ಕಾರ್ಯಕ್ರಮ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಆಚರಿಸಿದರು.

ಪುತ್ತರಿರ ಐನ್‍ಮನೆ

ಚೆಟ್ಟಳ್ಳಿಯ ಪುತ್ತರಿರಕುಟುಂಬದ ಐನ್ ಮನೆಯಲ್ಲಿ ತಾ. 3ರಂದು ಕೊಡಗಿನ ಕೈಲ್ ಪೊಲ್ದ್ ಹಬ್ಬ ಸಾಂಪ್ರದಾಯಬದ್ದವಾಗಿ ಆಚರಿಸಲಾಯಿತು.

ಬೆಳಿಗ್ಗೆ 11 ಗಂಟೆಗೆ ಕುಟುಂಬದ ಹಿರಿಯರು, ಪುರುಷರು, ಮಹಿಳೆಯರು ಹಾಗೂ ಮಕ್ಕಳೆಲ್ಲ ಐನ್‍ಮನೆಯಲ್ಲಿ ಸೇರಿ ನೆಲ್ಲಕ್ಕಿ ನಡುಬಾಡೆಯಲ್ಲಿ ದೇವರ ದೀಪಕ್ಕೆ ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದರು.

ಮದ್ಯಾಹ್ನ 12 ಗಂಟೆಗೆ ನೆಲ್ಲಕ್ಕಿ ನಡುಬಾಡೆಯಲ್ಲಿ ಕೊಡವರ ಸಾಂಪ್ರದಾಯಿಕ ಕೋವಿ, ಒಡಿಕತ್ತಿ ಹಾಗೂ ಹಲವು ಅಯುಧಗಳನ್ನೆಲ್ಲ ಇಟ್ಟು ವಿಶೇಷವಾಗಿ ತೋಕ್ ಪೂ, ಗಂಧ ಎಡೆಯನ್ನಿಟ್ಟು ಪಟ್ಟೆದಾರ ಪುತ್ತರಿರ ಬಾಬಿಬಿದ್ದಪ್ಪ ಪೂಜೆ ಸಲ್ಲಿಸಿ ಈ ಕೈಲ್ ಪೊಲ್ದ್ ಹಬ್ಬದ ಆಚರಣೆಯನ್ನು ಕುಟುಂಬದವರೆಲ್ಲ ಸೇರಿ ಆರಿಸಿದರು.

ಹಬ್ಬದ ವಿಶೇಷ ಭೋಜನವನ್ನು ಕುಟುಂಬದವರೆಲ್ಲ ಸೇರಿ ಸವಿದು ನಂತರ ಪುರುಷರು, ಮಹಿಳೆಯರು ವiಕ್ಕಳು ಐನ್‍ಮನೆಯ ಮುಂದಿನ ಹಟ್ಟಿಯಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆದು ಸಾಂಪ್ರದಾಯಿಕ ವಾಲಗ ಕುಣಿತಕ್ಕೆ ಹೆಜ್ಜೆ ಹಾಕಿದರು.

ಈ ಕಾರ್ಯಕ್ರಮದಲ್ಲಿ ಎನ್‍ಸಿಸಿಯ ಶೂಟಿಂಗ್ ವಿಭಾಗದಲ್ಲಿಉತ್ತಮ ಸಾಧನೆ ತೋರಿದ ಪುತ್ತರಿರರಿ ಶಾಂಕ್ ನಂಜಪ್ಪನಿಗೆ ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ನೃತ್ಯ ಸ್ಫರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ದೀಪ್ನಾ ಮುತ್ತಮ್ಮ, ರಾಕ್ ಸಿಂಗರ್ ಕಿರಣ್‍ಕಾರ್ಯಪ್ಪ, ಬೊಡಿನಮ್ಮೆಯಲ್ಲಿ ಶೂಟಿಂಗ್‍ನಲ್ಲಿ ಉತ್ತಮ ಸಾಧನೆ ತೋರಿದ ಕಿರಿಯ ಮಕ್ಕಳಾದ ಪುತ್ತರಿರ ಲಕ್ಷಣ್‍ಅಯ್ಯಪ್ಪ ಹಾಗೂ ಕಾರ್ತಿಕ್ ಕಾರ್ಯಪ್ಪನಿಗೆ ಗೌರವ ಸಲ್ಲಿಸಿದರು. ಕುಟುಬಂಸ್ಥ ಸದಸ್ಯರಿಂದ ಹಾಡುಗಾರಿಕೆ ಏರ್ಪಡಿಸಲಾಗಿತ್ತು. ಪುತ್ತರಿರ ಗಣೇಶ ಭೀಮಯ್ಯ ವಂದಿಸಿದರು.

ಚೆಟ್ಟಳ್ಳಿಯಲ್ಲಿ ಬೊಡಿನಮ್ಮೆಯ ವಿಜೇತರು

* ಚೆಟ್ಟಳ್ಳಿಯ ಪುತ್ತರಿರಕುಟುಂಬಸ್ಥರು ಕೈಲ್‍ಪೊಳ್ದ್ ಹಬ್ಬದ ಪ್ರಯುಕ್ತ ಅಯೋಜಿಸಿದ್ದ ನಾಲ್ಕನೇ ವರ್ಷದ ಬೊಡಿನಮ್ಮೆಯಲ್ಲಿ ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನÀ ನೀಡಲಾಯಿತು.

12 ಬೋರಿನ ಕೋವಿನ ತೆಂಗಿನ ಕಾಯಿಗೆ ಗುಂಡುಹೊಡೆಯುವ ಸ್ಫರ್ಧೆಯಲ್ಲಿ 92 ಸ್ಪರ್ಧಿಗಳು ಭಾಗವಹಿಸಿದ್ದು ಮೊದಲನೇ ಬಹುಮಾನ ಮಾಳೆಯಂಡ ಸುಬ್ಬಯ್ಯ, ಎರಡನೆ ಬಹುಮಾನ ಬಟ್ಟಿರ ನವಿನ್ ನಾಣಯ್ಯ ಮೂರನೇ ಬಹುಮಾನ ಕಚ್ಚಿರ ವಿಜು ಬೆಳ್ಯಪ್ಪ, ನಾಲ್ಕನೇ ವಿಜೇತ ಪ್ರಿನ್ಸ್ ಮಂದಣ್ಣ , ಪುತ್ತರಿರ ಅಯ್ಯಪ್ಪ ಹಾಗೂ ಕಾವ್ಯ ಅಯ್ಯಪ್ಪ ಸಮಾಧಾನಕರ ಬಹುಮಾನವನ್ನು ಪಡೆದರು.

0.22 ರೈಫಲ್‍ನಿಂದ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ 160 ಸ್ಪರ್ಧಿಗಳು ಭಾಗವಹಿಸಿದ್ದು ಮೊದಲನೇ ಬಹುಮಾನ ಬಡುವಂಡ ದೇವಯ್ಯ,ಎರಡನೇ ಬಹುಮಾನಚೀಯಕ್ ಪೂವಂಡ ಚೇತನ್ ಚಂಗಪ್ಪ, ಮೂರನೇ ಬಹುಮಾನ ಕೇಲೇಟಿರ ಪವಿತ್ ಪೊನ್ನಣ್ಣ ಪಡೆದರು. ಮಕ್ಕಳ ವಿಭಾಗದಲ್ಲಿ ಮೊದಲನೇ ಬಹುಮಾನ ಮಣವಟ್ಟಿರ ನೀಲಿಕ್, ಎರಡನೇ ಬಹುಮಾನ ಬಡುವಂಡ ತ್ರಿಶಾಲಿ, ಮೂರನೇ ಬಹುಮಾನ ಪುತ್ತರಿರ ಅಯ್ಯಪ್ಪ ಹಾಗೂ ಕಾವ್ಯ ಅಯ್ಯಪ್ಪ ಸಮಾಧಾನಕರ ಬಹುಮಾನ ಪುತ್ತರಿರ ನಂಜಪ್ಪ ಪಡೆದರು.

ಏರ್ ರೈಫಲ್‍ನಿಂದ ಗುರಿಯಿಡುವಲ್ಲಿ ಮೊದಲನೇ ಬಹುಮಾನ ಕಬ್ಬಚಿರ ಶರತ್, ಎರಡನೇ ಬಹುಮಾನ ಮನಿಯಪಂಡ ನಾಣಯ್ಯ, ಮೂರನೇ ಬಹುಮಾನ ಬಡುವಂಡ ಮುತ್ತಪ್ಪ. ಪಿಸ್ತೂಲ್ ಹಾಗೂ ರಿವಾಲ್ವರ್‍ನಿಂದ ಮೊದಲನೇ ಬಹುಮಾನ ಚಿಯಕ್‍ಪೂವಂಡ ಚೇತನ್‍ಚಂಗಪ್ಪ, ಎರಡನೇ ಬಹುಮಾನ ಪ್ರಸನ್ನಕುಮಾರ್, ಮೂರನೇ ಬಹುಮಾನ ಕೆಲೇಟಿರ ಪವಿತ್ ಪೊನ್ನಣ್ಣ ಪಡೆದರು. ಎಲ್ಲಾ ಸ್ಪರ್ಧೆ ಮೊದಲನೇ ವಿಜೇತರಿಗೆ ಮಡಿಕೇರಿಯ ಪ್ರಶಾಂತ್ ಭಂಡಾರಿ ಮಾಲೀಕರಿಂದ ಬಹುಮಾನ ಕೂಪನ್ ನೀಡಲಾಯಿತು. ಕುಟುಂಬದ ಪಟ್ಟೆದಾರರಾದ ಪುತ್ತರಿರ ಬಾಬಿಬಿದ್ದಪ್ಪ ನೀಡಿದ ಉತ್ತಮ ಶೂಟರ್ ಬಹುಮಾನವನ್ನು ಸಣ್ಣುವಂಡ ವಿನು ಪಡೆದರು. ಯಶೋಧ ಕರುಂಬಯ್ಯ ಇಟ್ಟಂತ ಉತ್ತಮ ಶೂಟರ್ ಬಹುಮಾನವನ್ನು ಬ್ರಿಜೇಶ್ ಸಿರಿಯಾಕ್ ಪಡೆದರು. ಕಾರ್ಯಕ್ರಮದಲ್ಲಿ ಸಹಕರಿಸಿದವರಿಗೆ ಹಾಗೂ ಸಮಿತಿಯ ಸದಸ್ಯರಿಗೆಲ್ಲ ನೆನಪಿನ ಕಾಣಿಕೆ ನೀಡಲಾಯಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಪುತ್ತರಿರ ಕುಟುಂಬದ ಪುತ್ತರಿರ ಬಾಬಿಬಿದ್ದಪ್ಪ, ಗಣೇಶ್ ಭೀಮಯ್ಯ, ಟುಟ್ಟು ಕಾರ್ಯಪ್ಪ, ಪುತ್ತರಿರ ಕೆ.ಪೂವಯ್ಯ, ಪುತ್ತರಿರ ಕಾಶಿಸುಬ್ಬಯ್ಯ, ಪುತ್ತರಿರ ದೇವಿದೇವಯ್ಯ, ಪುತ್ತರಿರ ರಾಬಿನ್ ಚಂಗಪ್ಪ, ಹರೀಶ್ ಅಯ್ಯಪ್ಪ, ಯಶೋಧ ಕರುಂಬಯ್ಯ ಹಾಗೂ ಪ್ರೇಮಭೀಮಯ್ಯ ಹಾಜರಿದ್ದರು. ಪಪ್ಪು ತಿಮ್ಮಯ್ಯ ನಿರೂಪಿಸಿದರು. ರಾಪ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

ಪೇರೂರು

ಪೇರೂರು ಗ್ರಾಮದಲ್ಲಿ ಕೈಲ್ ಮೂಹೂರ್ತ ಪ್ರಯುಕ್ತ ಕ್ರೀಡಾ ಕೂಟಗಳನ್ನು ಏರ್ಪಡಿಸಲಾಗಿತ್ತು. ಕ್ರೀಡಾ ಕೂಟವನ್ನು ತೆಂಗಿನ ಕಾಯಿಗೆ ಗುಂಡು ಹಾರಿಸುವ ಮೂಲಕ ರಸಶ್ರೀ ಎಸ್ಟೇಟ್‍ನ ವ್ಯವಸ್ಥಾಪಕ ಪಿ.ಎಸ್.ರಾಧಾಕೃಷ್ಣ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಸಂಸ್ಕøತಿ, ಪದ್ಧತಿ, ಆಚಾರ - ವಿಚಾರವನ್ನು ಯುವ ಪೀಳಿಗೆಗೆ ಪರಿಚಯಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ. ಈ ಹಬ್ಬ, ಕ್ರೀಡಾಕೂಟಗಳಿಗಾಗಿ ಹೊರಗಿನ ಊರುಗಳಲ್ಲಿ ಉದ್ಯೋಗದಲ್ಲಿದ್ದವರೂ ಕೂಡ ರಜೆಯ ಮೇಲೆ ಆಗಮಿಸುತ್ತಿರುವದರಿಂದ ಸಂಸ್ಕøತಿ ಉಳಿದಿದೆ ಎಂದರು.

ಪುಟ್ಟ ಮಕ್ಕಳಿಗೆ ಕಾಳು ಹೆಕ್ಕುವÀ ಸ್ಪರ್ಧೆ, ಕಪ್ಪೆ ಓಟ, 100 ಮೀ ಓಟ, 75 ಮೀ ಓಟ, ಸಾರ್ವಜನಿಕ ಮಹಿಳೆಯರಿಗೆ ಮತ್ತು ಪುರುಷರಿಗೆ ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ಪರ್ಧೆ, ಬಾರದ ಗುಂಡು ಎಸೆತ, ಹಗ್ಗ ಜಗ್ಗಾಟ, ವಾಲಗತಾಟ್ ಮುಂತಾದ ಸ್ಪರ್ಧೆಗಳು ನಡೆದವು. ಎಲ್ಲಾ ವಿಜೇತರಿಗೆ ನಗದು ಬಹುಮಾನವನ್ನು ನೀಡಿಲಾಯಿತು.

ಈ ಸಂದರ್ಭ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದವÀರನ್ನು ಸನ್ಮಾನಿಸಲಾಯಿತು. ಹೊಸದಾಗಿ ಮದುವೆಯಾದ ದಂಪತಿಗಳಿಗೆ ನೆನಪಿನ ಕಾಣಿಕೆ ಮತ್ತು ಮದುವೆಯಾಗಿ 50 ವರ್ಷ ಪೂರೈಸಿದ ದಂಪತಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೇರ್‍ಮೆ ಬಲ್ಲತ್ತ್‍ನಾಡು ಶ್ರೀ ಇಗ್ಗುತ್ತಪ್ಪ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಚ್ಚುರ ಡಿ.ತಮ್ಮಯ್ಯ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಮಾಜಿ ಸೈನಿಕ ಅಪ್ಪಚ್ಚಿರ ಕೆ.ಪೂವಪ್ಪ, ಬೆಳೆಗಾರ ಅಪ್ಪಚೆಟ್ಟೋಳಂಡ ಶ್ಯಾಮ್ ಕಾಳಯ್ಯ, ಮಚ್ಚುರ ಎಸ್.ಅಮ್ಮಣ್ಣ ಚೋಂದವ್ವ, ಕೈಲ್ ಪೆÇೀಳ್ದ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಬೊಟ್ಟೋಳಂಡ ಯು.ಕರುಂಬಯ್ಯ, ಕಾರ್ಯದರ್ಶಿ ಬೊಟ್ಟೋಳಂಡ ಮಿಟ್ಟು ಪೂಣಚ್ಚ ಮತ್ತಿತರರು ಉಪಸ್ಥಿತರಿದ್ದರು.

ಮೂರ್ನಾಡು

ಇಲ್ಲಿಗೆ ಸಮೀಪದ ಮೇಕೇರಿಯ ಸ್ವಾಗತ ಯುವಕ ಸಂಘ, ಜಿಲ್ಲಾ ಯುವ ಒಕ್ಕೂಟ, ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿಯ ನೆಹರು ಯುವ ಕೇಂದ್ರ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಮೇಕೇರಿಯ ಅಟಲ್ ಬಿಹಾರಿ ವಾಜಪೇಯಿ ಹೆಲ್ತ್‍ಲೈನ್, ಮೇಕೇರಿ ರೋಟರಿ ಸಮುದಾಯ ದಳ, ಜಿಲ್ಲಾ ಬಿ.ಎಂ.ಎಸ್, ಮೇಕೇರಿ ಸುಭಾಶ್ ಯುವ ಸಮಿತಿ ಮತ್ತು ಮೇಕೇರಿ ಛತ್ರಪತಿ ಸ್ವಸಹಾಯ ಸಂಘದ ಸಂಯುಕ್ತ ಆಶ್ರಯದಲ್ಲಿ 28ನೇ ವರ್ಷದ ಕೈಲು ಮುಹೂರ್ತ ಹಬ್ಬದ ಗ್ರಾಮೀಣ ಕ್ರೀಡಾಕೂಟ ನಡೆಯಿತು.

ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕೈಲ್ ಮುಹೂರ್ತ ಹಬ್ಬದ ಗ್ರಾಮೀಣ ಕ್ರೀಡಾಕೂಟವನ್ನು ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಬಲೂನ್‍ಗೆ ಗುಂಡು ಹೊಡೆಯುವದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೈಲ್ ಮುಹೂರ್ತ ಹಬ್ಬ ಕೊಡಗಿನ ವಿಶೇಷ ಹಬ್ಬವಾಗಿದೆ ಎಂದರು. ಮಡಿಕೇರಿ ತಾಲೂಕು ಪಂಚಾಯಿತಿ ಸದ್ಯಸೆ ಕುಮುದಾ ರಶ್ಮಿ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮೇಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭೀಮಯ್ಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಾಳಿಯಂಡ ನಾಚಪ್ಪ, ಸ್ವಾಗತ ಯುವಕ ಸಂಘದ ಅಧ್ಯಕ್ಷ ಜೆ. ಹರೀಶ್, ಕಾರ್ಯದರ್ಶಿ ಶ್ರೇಯಸ್, ಸಹಕಾರ್ಯದರ್ಶಿ ರಾಜೇಶ್, ಖಜಾಂಚಿ ಬಿ.ಎಸ್. ಅಶೋಕ್ ಉಪಸ್ಥಿತರಿದ್ದರು.

ಪುರುಷರಿಗೆ, ಮಹಿಳೆಯರಿಗೆ, ಶಾಲಾ ಮಕ್ಕಳಿಗೆ ಭಾರದ ಗುಂಡು ಎಸೆತ, ಕಾಳು ಹೆಕ್ಕುವದು, ಕಪ್ಪೆ ಕುಪ್ಪಳಿಸುವದು, ಓಟ, ನಿಂಬೆ ಚಮಚ ಓಟ, ಸಂಗೀತ ಕುರ್ಚಿ, ವಯಸ್ಕರ ಓಟ, ಸ್ಲೋ ಬೈಕ್ ರೇಸ್, ಸ್ಲೋ ಸೈಕಲ್ ರೇಸ್, ಓಲಗ ಕುಣಿತ, ಕಣ್ಣು ಕಟ್ಟಿ ಮಡಿಕೆ ಒಡೆಯುವದು ಹಾಗೂ ಹಗ್ಗ - ಜಗ್ಗಾಟ ಸ್ಪರ್ಧೆಗಳು ನಡೆದವು.

ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ. ಜೋಯಪ್ಪ, ಮೇಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ, ಆಧಿಶಕ್ತಿ ಮಹಿಳಾ ಸಂಘ ಅಧ್ಯಕ್ಷೆ ಇಂದಿರಾ ರೈ, ಮೇಕೇರಿ ಗ್ರಾಮ ಪಂಚಾಯಿತಿ ಸದಸ್ಯೆ ಅರ್ಪಿತಾ ಸಂಧ್ಯಾ, ಅನುಸೂಯ, ಮೇಕೇರಿ ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕಿ ಕುಸುಮಾವತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷ ನವೀನ್ ದೇರಳೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಹಬ್ಬ ಒಗ್ಗಟ್ಟಿನ ಸಂಕೇತ

*ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ಕ್ರೀಡಾಕೂಟಗಳ ಆಯೋಜನೆಯಿಂದ ಗ್ರಾಮಸ್ಥರು ಒಂದೆಡೆ ಒಗ್ಗೂಡುವ ಭಾಗ್ಯ ದೊರಕುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮೂರ್ನಾಡು ಸಹಕಾರ ಸ್ಪೋಟ್ಸ್ ಕ್ಲಬ್ ವತಿಯಿಂದ ನಾಡ್‍ಮಂದ್ ಹಾಗೂ ಶಾಲಾ ಮೈದಾನದಲ್ಲಿ ಆಯೋಜಿಸಲಾದ 93ನೇ ವಾರ್ಷಿಕ ಕೈಲ್ ಮುಹೂರ್ತ ಹಬ್ಬದ ಆಟೋಟ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಆಟೋಟ ಸ್ಪರ್ಧೆಗೆ ಚಾಲನೆ ನೀಡಿದರು.

ಸಾರ್ವಜನಿಕರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಪ್ರೌಢಶಾಲಾ, ಪ್ರಾಥಮಿಕ ಶಾಲೆ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ, ಕಿರಿಯರಿಗೆ ವಿವಿಧ ಬಗೆಯ ಓಟದ ಸ್ಪರ್ಧೆ, ಕಾಲು ಕಟ್ಟಿ ಓಟ, ಭಾರದ ಗುಂಡು ಎಸೆತ, ಸಂಗೀತ ಕುರ್ಚಿ, ಸೈಕಲ್ ರೇಸು, ನಿಂಬೆ ಹಣ್ಣು ಚಮಚ ಓಟ, ವಾದ್ಯದ ಕುಣಿತ, ವಯಸ್ಕರ ಓಟ, ಹಾಗೂ ಆರು ಗ್ರಾಮದ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಿತು.

ಮೂರ್ನಾಡು ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಪಳಂಗಂಡ ಕೆ. ಅಪ್ಪಣ್ಣ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಬಿಳಿಯಾರ ಹೇಮಂತ್ ಕುಮಾರ್, ನಿರ್ದೇಶಕರುಗಳಾದ ಅಲ್ಮಚಂಡ ಮೊಣ್ಣಪ್ಪ, ಮೂಡೇರ ಮಾದಪ್ಪ, ಪುದಿಯೊಕ್ಕಡ ರಮೇಶ್, ಅವರೆಮಾದಂಡ ಬೋಪಯ್ಯ, ಕೋಟೇರ ಮೇದಪ್ಪ ಇನ್ನಿತರರು ಹಾಜರಿದ್ದರು. ಮೂಡೇರ ಹರೀಶ್ ಕಾಳಯ್ಯ, ತೀರ್ಕಚೇರಿ ತಮ್ಮಯ್ಯ ಆಟೋಟ ಸ್ಪರ್ಧೆಗಳ ವೀಕ್ಷಕ ವಿವರಣೆ ನೀಡಿದರು. ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾಕೋಟು ಪರಂಬು

ಆಚಾರ, ವಿಚಾರ, ಸಂಸ್ಕøತಿ, ಪದ್ದತಿ, ಪರಂಪರೆಯನ್ನು ಮರೆತರೆ ಅಭಿವೃದ್ದಿ ಕುಂಠಿತಗೊಳ್ಳುತ್ತದೆ ಎಂದು ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು.

ಕಾಕೋಟುಪರಂಬು ಮೈದಾನದಲ್ಲಿ ನಡೆದ 69ನೇ ಕೈಲ್‍ಮುಹೂರ್ತ ಕ್ರೀಡಾಕೂಟದಲ್ಲಿ ಏರ್‍ಗನ್ ಮೂಲಕ ಕ್ರಿಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಹವಾಮಾನ ವೈಪರಿತ್ಯದಿಂದ ನಮ್ಮ ದುಡಿಮೆಗೆ ಸರಿಯಾಗಿ ಫಲ ಸಿಗದ ಕಾರಣ ಭತ್ತದ ಗದ್ದೆಯನ್ನು ಹಡಲು ಬಿಡಲಾಗುತ್ತಿದೆ. ವಿಶಿಷ್ಟ ಸಂಸ್ಕøತಿ ಹೊಂದಿ ಜಿಲ್ಲೆಯಲ್ಲಿ ಭತ್ತದ ಕೃಷಿಯಲ್ಲಿ ಹೆಚ್ಚಿನ ಲಾಭ ಇಲ್ಲದ ಕಾರಣ ಕೃಷಿ ತಜ್ಞರ ಒಂದು ಸಮಿತಿ ರಚಿಸಿ ಕೃಷಿಗೆ ಬೆಂಬಲ ಬೆಲೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವ ಆಲೋಚನೆ ಹೊಂದಲಾಗಿದೆ. ಅರಣ್ಯ ಹಾಗೂ ಬೆಟ್ಟಗುಡ್ಡದಲ್ಲಿರುವ ಬೃಹತ್ ಮರಗಳನ್ನು ನಾಶ ಮಾಡುತ್ತಿರುವದರಿಂದ ಹವಮಾನ ವೈಪರಿತ್ಯಕ್ಕೆ ಕಾರಣವಾಗುತ್ತಿದೆ. ಅರಣ್ಯ ಪ್ರದೇಶವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.

ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಕೋವಿ ಹಾಗೂ ಹಾಕಿ ಆಟ ನಮಗೆ ರಕ್ತಗತವಾಗಿ ಬಂದಿದೆ. ಹಾಕಿಯಲ್ಲಿ ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದೇವೆ. ಕೊಡವ ಜನಾಂಗ ಶೂಟಿಂಗ್‍ನಲ್ಲಿ ಈವರೆಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ.

ಪೂರ್ವಜರ ಕಾಲದಿಂದಲೂ ಬಳವಳಿಯಾಗಿ ಬಂದಿರುವ ಕೋವಿಯನ್ನು ದುರುಪಯೋಗ ಪಡಿಸಿಕೊಳ್ಳದೆ ಉತ್ತಮ ರೀತಿಯಲ್ಲಿ ಬಳಕೆಮಾಡುವಂತೆ ಹೇಳಿದರು.

ನಿವೃತ ಎಸ್.ಪಿ ಮುಕ್ಕಾಟ್ಟಿರ ಚೋಟು ಅಪ್ಪಯ್ಯ ಮಾತನಾಡಿ ಜನ್ಮ ನೀಡಿದವರಿಗೆ ಒಳ್ಳೆಯ ಹೆಸರು ಬರಬೇಕಾದರೆ ನಾವು ಉತ್ತಮರಾಗಿರಬೇಕು. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇರುವದರಿಂದ ಕೈಲ್ ಮುಹೂರ್ತ ಹಬ್ಬವನ್ನು ಮೂರು ದಿನಗಳಲ್ಲಿ ಆಚರಿಸುವಂತಾಗಿದೆ. ಎಂದು ಹೇಳಿದರು.

ವೇದಿಕೆಯಲ್ಲಿ ಕೈಲ್‍ಮುಹೂರ್ತ ಸಂಘದ ಅಧ್ಯಕ್ಷ ಮಂಡೇಟ್ಟಿರ ಸುರೇಶ್, ನಿವೃತ್ತ ಶಿಕ್ಷಕಿ ಅಮ್ಮಂಡಿರ ರಾಣಿ ಮುತ್ತಮ್ಮ, ಕಾರ್ಯದರ್ಶಿ ಅಪ್ಪಚಂಗಡ ಪ್ರಕಾಶ್ ಉಪಸ್ಥಿತರಿದ್ದರು. ಕಳ್ಳಿರ ಜಾನಕ್ಕಿ ಕಾರ್ಯಕ್ರಮ ನಿರೂಪಿಸಿದರು. ಅಪ್ಪಚಂಗಡ ಪ್ರಕಾಶ್ ಸ್ವಾಗತಿಸಿ ವಂದಿಸಿದರು.