ಮಡಿಕೇರಿ, ಜು. 26: ಕರ್ನಾಟಕ ಪ್ರಾದೇಶಿಕ ವಿಭಾಗದ 81ನೇ ಅಬಾಕಸ್ ‘ಬ್ರೈನೋಬ್ರೈನ್ ಸ್ಪರ್ಧೆ 2017’ ಕಾರ್ಯಕ್ರಮ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಯಿತು. ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 5 ರಿಂದ 14 ವರ್ಷದೊಳಗಿನ ಸುಮಾರು 1200 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯ ಮಡಿಕೇರಿ ಕೇಂದ್ರದಿಂದ ಶಿಕ್ಷಕಿ ಮಾಪಂಗಡ ಕವಿತಾ ಕರುಂಬಯ್ಯ ಅವರ ಮಾರ್ಗದರ್ಶನ ದಲ್ಲಿ 43 ವಿದ್ಯಾರ್ಥಿಗಳು ಭಾಗವಹಿಸಿದ್ದು ಬಿ.ಆರ್. ರಿದಾ ಸುಮನ್, ರಾಹುಲ್ ರಾಯ್, ಎಮ್.ಎ. ಸುಜಾನ್, ಎನ್.ಎ. ವಿಶಾಖ್ ಶ್ರೀನಿವಾಸ್, ಯಶಸ್ ಕೆ.ಜಿ. ಹಾಗೂ ನಮ್ರತಾ ಚೌಧುರಿ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡರು.

15 ವಿದ್ಯಾರ್ಥಿಗಳು ಬಂಗಾರ ಪದಕ, 17 ವಿದ್ಯಾರ್ಥಿಗಳು ಬೆಳ್ಳಿಯ ಪದಕ ಗಳಿಸಿದರು. ಮಡಿಕೇರಿ ಕೇಂದ್ರಕ್ಕೆ ಅತ್ಯುತ್ತಮ ಫ್ರಾಂಚೈಸಿ ಹಾಗೂ ಶಿಕ್ಷಕಿ ಮಾಪಂಗಡ ಕವಿತಾ ಕರುಂಬಯ್ಯ ಅವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿತು. ರಾಜ್ಯದಲ್ಲೇ ಅತೀಹೆಚ್ಚು ವಿದ್ಯಾರ್ಥಿಗಳಿಗೆ ಬ್ರೈನೋಬ್ರೈನ್ ಪದವಿ ನೀಡಿದ ಹೆಗ್ಗಳಿಕೆಗೆ ಮಡಿಕೇರಿ ಕೇಂದ್ರ ಪಾತ್ರವಾಗಿದೆ.