ಮಡಿಕೇರಿ, ಜು. 26: ವಿಶ್ವ ಹಿಂದೂ ಪರಿಷತ್, ಭಜರಂಗದಳ ವತಿಯಿಂದ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಅಶ್ವಿನಿ ಆಸ್ಪತ್ರೆಯ ಸಹಯೋಗದಲ್ಲಿ 18ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಲುವಾಗಿ ರಕ್ತದಾನ ಶಿಬಿರ ನಡೆಯಿತು. ಅಶ್ವಿನಿ ಆಸ್ಪತ್ರೆ ಸಭಾಂಗಣದಲ್ಲಿ ಜರುಗಿದ ಶಿಬಿರವನ್ನು ಆಸ್ಪತ್ರೆ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಹಾಗೂ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಉದ್ಘಾಟಿಸಿದರು.

ವಿ.ಹಿಂ.ಪ. ಜಿಲ್ಲಾಧ್ಯಕ್ಷ ಎಂ.ಎಂ. ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆಸ್ಪತ್ರೆ ವೈದ್ಯರುಗಳಾದ ಡಾ. ಕರುಂಬಯ್ಯ, ಡಾ. ಪ್ರೀತಿ ಸೋಮಯ್ಯ, ನಿವೃತ್ತ ಸೈನಿಕ ಕುಟ್ಟಂಡ ನಂದಾ ಮಾದಪ್ಪ, ಅಶ್ವಿನಿ ವೈದ್ಯಾಧಿಕಾರಿ ಡಾ. ಪಿ.ಎನ್. ಕುಲಕರ್ಣಿ ಮೊದಲಾದವರು ಭಾಗವಹಿಸಿದ್ದರು. ಭಜರಂಗದಳ ಪ್ರಮುಖರುಗಳಾದ ಎನ್.ಕೆ. ಅಜಿತ್‍ಕುಮಾರ್, ಕೆ.ಹೆಚ್. ಚೇತನ್, ಪುದಿಯೊಕ್ಕಡ ರಮೇಶ್, ವಿನಯ್, ಅನೀಶ್, ಪ್ರದೀಪ್, ನಾಗೇಶ್, ಮಂಜುನಾಥ್ ರೈ, ಗಣೇಶ್ ಕುಮಾರ್, ರಾಧಾಕೃಷ್ಣ ರೈ ಸೇರಿದಂತೆ 50 ಮಂದಿ ಕಾರ್ಯಕರ್ತರು ರಕ್ತದಾನ ಮಾಡಿದರು.

ವಿಹಿಂಪ ಪ್ರಮುಖರಾದ ಡಿ. ನರಸಿಂಹ, ಕೆ.ಎನ್. ಕುಶಾಲಪ್ಪ ಸೇರಿದಂತೆ ಇತರ ಪ್ರಮುಖರು ಹಾಜರಿದ್ದು, ರಕ್ತದಾನಿಗಳಿಗೆ ಸಂಘಟನೆ ಹಾಗೂ ಜಿಲ್ಲಾ ಆಸ್ಪತ್ರೆಯಿಂದ ಪ್ರಶಂಸಾನ ಪತ್ರಗಳನ್ನು ನೀಡಲಾಯಿತು. ಪ್ರಾರಂಭದಲ್ಲಿ ಅಶ್ವಿನಿ ಸ್ಥಾಪಕ ಕಾರ್ಯದರ್ಶಿ ಬಿ.ಜಿ. ವಸಂತ್ ಹಾಗೂ ವಿ.ಹಿಂ.ಪ. ಸತ್ಸಂಗ ಪ್ರಮುಖ್ ಕೆ.ಕೆ. ರಾಜ್‍ಕುಮಾರ್ ಇವರುಗಳ ಅಗಲಿಕೆಗೆ ಸಂತಾಪ ಸೂಚಿಸಲಾಯಿತು.