ಶನಿವಾರಸಂತೆ, ಜು. 7: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಬಿ.ಎಸ್. ಜನಾರ್ಧನ ಸೇವೆಯಿಂದ ನಿವೃತ್ತಿಗೊಂಡಿದ್ದಾರೆ. ಶನಿವಾರಸಂತೆ ಠಾಣೆಯಲ್ಲಿ ಸಿಬ್ಬಂದಿಗಳು ಜನಾರ್ಧನ, ಪತ್ನಿ ಲೀಲಾವತಿ ದಂಪತಿಗೆ ಸನ್ಮಾನಿಸಿ ಬೀಳ್ಕೊಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಡಿವೈಎಸ್‍ಪಿ ಸಂಪತ್‍ಕುಮಾರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ನಿರ್ವಂಚನೆಯಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ವಿಶ್ವಾಸಕ್ಕೆ ಒಳಪಡಬೇಕು ಎಂದು ಶುಭ ಹಾರೈಸಿದರು.

ಸೋಮವಾರಪೇಟೆ ವೃತ್ತ ನೀರಿಕ್ಷಕ ಪರಶಿವಮೂರ್ತಿ ಮಾತನಾಡಿ, ಜನಾರ್ಧನ ಅವರು ಪೊಲೀಸ್ ಇಲಾಖೆಯಲ್ಲಿ 36 ವರ್ಷ ಸೇವೆ ಸಲ್ಲಿಸಿದ್ದು, ಅವರ ಮೇಲೆ ಯಾವದೇ ಕಪ್ಪು ಚುಕ್ಕೆ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಹಾಯಕ ಠಾಣಾಧಿಕಾರಿ ಹೆಚ್.ಎಂ ಗೋವಿಂದ್, ವಕೀಲ ಎಸ್. ವಿ. ಜಗದೀಶ, ಪೊಲೀಸ್ ಸಿಬ್ಬಂದಿ, ಪ್ರದೀಪ್ ಮಾತನಾಡಿದರು.

ಸನ್ಮಾನಿತ ನಿವೃತ್ತ ಸಹಾಯಕ ಠಾಣಾಧಿಕಾರಿ ಬಿ.ಎಸ್. ಜನಾರ್ಧನ್ ಮಾತನಾಡಿ, ತಮ್ಮ 36 ವರ್ಷ ಸೇವೆಯ ಅನಿಸಿಕೆಯನ್ನು ಮೆಲುಕು ಹಾಕಿದರು.

ಸಮಾರಂಭದಲ್ಲಿ ಕುಶಾಲನಗರ ಠಾಣೆಯ ವೃತ್ತ ನಿರೀಕ್ಷಕ ಕ್ಯಾತೆಗೌಡ, ಸೋಮವಾರಪೇಟೆ ಠಾಣಾಧಿಕಾರಿ ಶಿವಣ್ಣ, ‘ಶಕ್ತಿ’ ಪ್ರತಿನಿಧಿ ನರೇಶ್ಚಂದ್ರ, ಸಹಾಯಕ ಠಾಣಾಧಿಕಾರಿ ಎಂ. ಖತೀಜಾ, ಪೊಲೀಸ್ ಸಿಬ್ಬಂದಿ ವರ್ಗ, ಕುಟುಂಬದವರು ಉಪಸ್ಥಿತರಿದ್ದರು.

ಪೊಲೀಸ್ ಸಿಬ್ಬಂದಿಗಳು ಹಾಗೂ ಕುಟುಂಬಸ್ಥರಿಗೆ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದ ಪೊಲೀಸರ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪೊಲೀಸ್ ಸಿಬ್ಬಂದಿ ರಮೇಶ್ ಸ್ವಾಗತಿಸಿ, ನಿರೂಪಣೆ ಮಾಡಿದರು. ಠಾಣಾಧಿಕಾರಿ ಮರಿಸ್ವಾಮಿ ವಂದಿಸಿದರು.