ಗೋಣಿಕೊಪ್ಪಲು, ಮೇ 5 : ನವೀಕೃತಗೊಂಡ ಸಹಕಾರ ಕೇಂದ್ರದ ಗೋಣಿಕೊಪ್ಪ ಶಾಖೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ನಂತರ ಮಾತನಾಡಿ, ಕೃಷಿಕರಿಗೆ ಹಾಗೂ ಯುವಕರಿಗೆ ಸ್ವಉದ್ಯೋಗ ಕಲ್ಪಿಸಿಕೊಳ್ಳಲು ಕಡಿಮೆ ದಾಖಲಾತಿಗಳೊಂದಿಗೆ ಉತ್ತಮ ರೀತಿಯಲ್ಲಿ ಸಾಲ ಸೌಲಭ್ಯವಿರುತ್ತದೆ. ಇಂತಹ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾಫಿ ಬೆಳೆಗಾರ ಬುಟ್ಟಿಯಂಡ ಅಪ್ಪಾಜಿ ಬ್ಯಾಂಕ್‍ನ ವ್ಯವಸ್ಧಾಪಕರ ಕೊಠಡಿಯನ್ನು ಉದ್ಘಾಟಿಸಿದರು.
ಮಾಜಿ ಶಾಸಕ ಅರುಣ್ ಮಾಚಯ್ಯ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಉಪಾಧ್ಯಕ್ಷ ಕೆ.ಎಸ್. ಪೂವಯ್ಯ, ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರುಗಳಾದ ಎಂ.ಎಸ್. ಕುಮಾರಪ್ಪ, ಕೆ.ಎಂ. ಸೋಮಯ್ಯ, ಕೊಡಂದೇರ ಪಿ. ಗಣಪತಿ, ಉಪನಿಬಂಧಕ ಜಿ.ಆರ್. ವಿಜಯಕುಮಾರ್ ಉಪಸ್ಧಿತರಿದ್ದರು.