ಗೋಣಿಕೊಪ್ಪಲು, ಮೇ 5 : ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಅತಿಥೇಯ ಅಳಮೇಂಗಡ ಮುಕ್ಕಾಟೀರ ವಿರುದ್ದ ಭರ್ಜರಿ ಗೆಲುವು ದಾಖಲಿಸಿ ಮುನ್ನಡೆ ಸಾಧಿಸಿದೆ.

ಅಳಮೇಂಗಡ ತಂಡದ ಉತ್ತಮ ಬೌಲಿಂಗ್ ಧಾಳಿಯಿಂದಾಗಿ ಬೋಂದ ಮುಕ್ಕಾಟೀರ ವಿರುದ್ಧ 9 ವಿಕೆಟ್‍ಗಳ ಗೆಲುವು ದಾಖಲಿಸಿತು. ಮುಕ್ಕಾಟೀರ ಮೊದಲು ಬ್ಯಾಟ್ ಮಾಡಿ 34 ರನ್ ಗಳಿಸುವಷ್ಟರಲ್ಲಿ 6.2 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ಬಲಿಷ್ಠ ಅಳಮೇಂಗಡಕ್ಕೆ ಸಣ್ಣ ಮೊತ್ತದ ಗುರಿ ಲಭಿಸಿತು. ಅಳಮೇಂಗಡ ಕೇವಲ 1 ವಿಕೆಟ್ ಕಳೆದುಕೊಂಡು 35 ರನ್ ಸಿಡಿಸಿತು. 4.2 ಓವರ್‍ಗಳಲ್ಲಿ ಗುರಿ ಸಾಧನೆ ಮಾಡುವ ಮೂಲಕ ಅತಿಥೇಯರಿಗೆ ಭರ್ಜರಿ ಗೆಲುವು ಲಭಿಸುವಂತಾಯಿತು.

ಮಂಡುವಂಡ ತಂಡವು ಅಜ್ಜೇಟೀರ ವಿರುದ್ದ 51 ರನ್‍ಗಳ ಗೆಲುವು ಪಡೆಯಿತು. ಮಂಡುವಂಡ 2 ವಿಕೆಟ್‍ಗೆ 133 ರನ್, ಅಜ್ಜೆಟೀರ 5 ವಿಕೆಟ್‍ಗೆ 82 ರನ್ ಗಳಿಸಿತು.

ಮತ್ತೊಂದು ಪಂದ್ಯದಲ್ಲಿ ಮಂಡುವಂಡವು ಬೇಗೂರ್ ಕಾಕಮಾಡ ವಿರುದ್ದ 10 ವಿಕೆಟ್ ಗೆಲುವು ಪಡೆಯಿತು. ಕಾಕಮಾಡ 9 ಕ್ಕೆ 27 ರನ್, ಮಂಡುವಂಡ ವಿಕೆಟ್ ನಷ್ಟವಿಲ್ಲದೆ 31 ರನ್ ಬಾರಿಸಿತು.

ಚೇಂದಿರಕ್ಕೆ ಮಾಪಣಮಾಡ ವಿರುದ್ಧ 8 ವಿಕೆಟ್ ಗೆಲುವು ದೊರೆಯಿತು. ಮಾಪಣಮಾಡ 7 ಕ್ಕೆ 51 ರನ್, ಚೇಂದೀರ 2 ಕ್ಕೆ 52 ರನ್ ಗಳಿಸಿತು.

ಅಮ್ಮಚ್ಚಿಮಣಿಯಂಡವು ಮಾಚಂಗಡವನ್ನು 7 ವಿಕೆಟ್‍ಗಳಿಂದ ಸೋಲಿಸಿತು. ಮಾಚಂಗಡ 5 ವಿಕೆಟ್‍ಗೆ 83 ರನ್, ಅಮ್ಮಚ್ಚಿಮಣಿಯಂಡ 84 ರನ್ ಬಾರಿಸಿತು.

ಬೊಟ್ಟಂಗಡ ತಂಡವು ತಾಚಮಂಡ ವಿರುದ್ಧ 47 ರನ್‍ಗಳ ಗೆಲುವು ದಾಖಲಿಸಿತು. ಬೊಟ್ಟಂಗಡ 5 ಕ್ಕೆ 78 ರನ್, ತಾಚಮಂಡ 8 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಚೇರಂಡ ತಂಡವು ಚೋನೀರ ವಿರುದ್ಧ 22 ರನ್‍ಗಳಿಂದ ಜಯ ಸಾಧಿಸಿತು. ಚೇರಂಡ 3 ಕ್ಕೆ 104 ರನ್, ಚೇರಂಡ ಗಿರೀಶ್ 72 ರನ್ ದಾಖಲಿಸಿರು. ಚೋನೀರ 4 ಕ್ಕೆ 82 ರನ್ ದಾಖಲಿಸಿತು.

ಕೈಬುಲಿರ ತಂಡವು ಆದೇಂಗಡವನ್ನು 8 ವಿಕೆಟ್‍ಗಳಿಂದ ಮಣಿಸಿತು. ಕೈಬುಲೀರ 2 ವಿಕೆಟ್ ನಷ್ಟಕ್ಕೆ 69 ರನ್ ದಾಖಲಿಸಿತು. ಆದೇಂಗಡ 4 ವಿಕೆಟ್‍ಗೆ 64 ರನ್ ಗಳಿಸಿತು.

ಬಲ್ಲಚಂಡ ತಂಡ ಕಾಂಡೇರವನ್ನು 4 ವಿಕೆಟ್‍ಗಳಿಂದ ಮಣಿಸಿತು. ಕಾಂಡೇರ 5 ವಿಕೆಟ್‍ಗೆ 44 ರನ್, ಬಲ್ಲಚಂಡ 6 ಕ್ಕೆ 45 ರನ್ ದಾಖಲಿಸಿತು.

ಕೂತಂಡ ತಂಡವು ನುಚ್ಚಿಮಣಿಯಂಡವನ್ನು 15 ರನ್‍ಗಳಿಂದ ಸೋಲಿಸಿತು. ಕೂತಂಡ 9 ಕ್ಕೆ 68 ರನ್, ನುಚ್ಚಿಮಣಿಯಂಡ 5 ವಿಕೆಟ್‍ಗೆ 53 ರನ್ ದಾಖಲಿಸಿ ಸೋಲನುಭವಿಸಿತು.

ಮಂಡೇಪಂಡವು ಕಾಳಿಮಾಡ ವಿರುದ್ಧ 28 ರನ್‍ಗಳಿಂದ ಗೆಲುವು ಪಡೆಯಿತು. ಮಂಡೇಪಂಡ 3 ವಿಕೆಟ್‍ಗೆ 83 ರನ್ ದಾಖಲಿಸಿತು. ಕಾಳಿಮಾಡ 6 ವಿಕೆಟ್ ಕಳೆದುಕೊಂಡು 55 ರನ್ ದಾಖಲಿಸಿತು.

ಓಡಿಯಂಡವು ಚೆನ್ನಪಂಡ ವನ್ನು 5 ವಿಕೆಟ್‍ಗಳಿಂದ ಮಣಿಸಿತು. ಚೆನ್ನಪಂಡ 2 ವಿಕೆಟ್‍ಗೆ 66 ರನ್, ಓಡಿಯಂಡ 5 ಕ್ಕೆ 67 ರನ್ ಗಳಿಸಿತು.

ಕಲ್ಯಾಟಂಡವು ಚೆಟ್ರಂಡವನ್ನು 4 ವಿಕೆಟ್‍ಗಳಿಂದ ಸೋಲಿಸಿತು. ಚೆಟ್ರಂಡ 5 ವಿಕೆಟ್‍ಗೆ 51 ರನ್, ಕಲ್ಯಾಟಂಡ 6 ವಿಕೆಟ್‍ಗೆ 52 ರನ್ ದಾಖಲಿಸಿತು.

ಕೋಳೇರ ತಂಡವು ಹರಿಹರ ತೀತೀರವನ್ನು 6 ವಿಕೆಟ್‍ಗಳಿಂದ ಸೋಲಿಸಿತು. ತೀತೀರ 7 ಕ್ಕೆ 40 ರನ್, ಕೋಳೇರ 4 ವಿಕೆಟ್ ಕಳೆದುಕೊಂಡು 4.1 ಓವರ್‍ಗಳಲ್ಲಿ ಗುರಿ ಸಾಧಿಸಿತು.

ಚೆಟ್ಟೀರ ಪ್ರವೀಣ್, ಕಾಕಮಾಡ ಅಜಿತ್, ಕಾಂಡೇರ ಮಂದಣ್ಣ, ನುಚ್ಚಿಮಣಿಯಂಡ ಪೊನ್ನಣ್ಣ, ಕಾಳಿಮಾಡ ಸುಭಾಶ್, ಮಾಪಣಮಾಡ ಬಿದ್ದಪ್ಪ, ಮಾಚಂಗಡ ಪೊನ್ನಣ್ಣ, ತಾಚಮಂಡ ಶರತ್, ಚೋನೀರ ಅಯ್ಯಪ್ಪ, ಆದೇಂಗಡ ಪ್ರಶಾಂತ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.