ಗೋಣಿಕೊಪ್ಪಲು, ಮೇ 5 : ಅಮ್ಮಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಾದ ಮನ್ನಕಮನೆ ಕ್ರಿಕೆಟ್ ಕಪ್ ತಾ. 6ರಿಂದ (ಇಂದಿನಿಂದ) ಹಾತೂರು ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಮೈದಾನದಲ್ಲಿ ಆರಂಭಗೊಳ್ಳಲಿದೆ.

ಕ್ರೀಡಾಕೂಟವನ್ನು ಬೆ. 10.30ಕ್ಕೆ ಉಸ್ತುವಾರಿ ಸಚಿವ ಸೀತಾರಾಮ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಡೊಳ್ಳು ಕುಣಿತ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಮನ್ನಕಮನೆ ಹಾಗೂ ಅಮ್ಮಕೊಡವ ಇಲೆವೆನ್ ಪ್ರದರ್ಶನ ಪಂದ್ಯ ನಡೆಯಲಿದೆ.

ಈ ಸಂದರ್ಭ ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರತ್ಯು, ಮನ್ನಕಮನೆ ಕ್ರಿಕೆಟ್ ಸಮಿತಿ ಗೌ. ಅಧ್ಯಕ್ಷ ಮನ್ನಕಮನೆ ರವಿ, ಬೆಂಗಳೂರು ಅಮ್ಮಕೊಡವ ಅಸೋಸಿಯೇಷನ್ ಅಧ್ಯಕ್ಷ ಗುಂಭೀರ ರಘು ಗಣಪಮಯ್ಯ, ದಾನಿ ಅಚ್ಚಿಯಂಡ ಚಂದ್ರಶೇಖರ್, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಉದ್ಯಮಿ ನಾಪಂಡ ಮುತ್ತಪ್ಪ, ಜಿ ಪಂ ಸದಸ್ಯ ಪಾಡಿಯಮ್ಮಂಡ ಮುರಳಿ, ಮನ್ನಕಮನೆ ಕುಟುಂಬ ಅಧ್ಯಕ್ಷ ಮನ್ನಕಮನೆ ಪ್ರಕಾಶ್ ಪಾಲ್ಗೊಳ್ಳಿದ್ದಾರೆ.